ಹೆಬ್ಬಾವಿನ ಬಾಯಿಂದ ಜಸ್ಟ್ ಮಿಸ್..! ಬದುಕಿ ಉಳಿದ ಝೂ ಕೀಪರ್..!
ಆತನ ವಿಡಿಯೋ ನೋಡಲು ಲಕ್ಷಾಂತರ ಜನ ಕಾಯುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಅವನ ಝೂ ವಿಡಿಯೋಗಳು ಸುಲಭವಾಗಿ ಹತ್ತಾರು ಮಿಲಿಯನ್ ವೀಕ್ಷಣೆ ಗಿಟ್ಟಿಸುತ್ತವೆ. ಆದರೂ ಏನ್ ಮಾಡೋಕಾಗುತ್ತೆ, ಮನುಷ್ಯನ ಗ್ರಹಚಾರ ನೆಟ್ಟಗಿಲ್ಲ ಅಂದ್ರೆ ಬೆಣ್ಣೆ ಕೂಡ ಸುಣ್ಣವಾಗುತ್ತೆ. ಹೀಗೆ ಆತ ಹತ್ತಾರು ವರ್ಷಗಳಿಂದ ಹಾವು ಹಾಗೂ ಮೊಸಳೆಗಳ ವಿಡಿಯೋ ಮಾಡುತ್ತಿದ್ದ. ಅದೇ ರೀತಿ ಹೆಬ್ಬಾವಿನ ಬಗ್ಗೆ ವಿವರಣೆ ಕೊಡುವಾಗ ದಿಢೀರ್ ಬೃಹತ್ ಗಾತ್ರದ ಹೆಬ್ಬಾವೊಂದು ಝೂ ಕೀಪರ್ ಮುಖಕ್ಕೆ ಬಾಯಿಹಾಕಿದೆ.
ಆದ್ರೆ ಅದೃಷ್ಟ ಚೆನ್ನಾಗಿತ್ತು ಅಂತಾ ಕಾಣುತ್ತೆ, ಆತ ಬದುಕುಳಿದಿದ್ದಾನೆ. ಅಂದಹಾಗೆ ನಾವು ಹೇಳುತ್ತಿರುವುದು ಸೋಷಿಯಲ್ ಮೀಡಿಯಾದಲ್ಲಿ ತನ್ನ ಸ್ನೇಕ್ ವಿಡಿಯೋಗಳ ಮೂಲಕ ಹವಾ ಎಬ್ಬಿಸಿರುವ ಜಾಯ್ ಬ್ರೀವೆರ್ ಬಗ್ಗೆ. ಎಂದಿನಂತೆ ತನ್ನ ಲಾಕರ್‌ನಲ್ಲಿ ಭದ್ರವಾಗಿ ಮಲಗಿದ್ದ ಹೆಬ್ಬಾವಿಗೆ, ಮೊನ್ನೆ ಮೊನ್ನೆ ಊಟ ಹಾಕಲು ಹೋಗಿದ್ದ ಜಾಯ್ ಬ್ರೀವೆರ್. ಆದರೆ ಆ ಹೆಬ್ಬಾವಿಗೆ ಜಾಯ್ ಬ್ರೀವೆರ್ ತಂದಿದ್ದ ಊಟಕ್ಕಿಂತ ಅವನೇ ರುಚಿಕರ ಅನ್ನಿಸಿರಬೇಕು. ತಕ್ಷಣ ಆ ಬೃಹತ್ ಗಾತ್ರದ ಹೆಬ್ಬಾವು ಆತನ ತಲೆಗೆ ಬಾಯಿ ಹಾಕಿಬಿಟ್ಟಿದೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಘಟನೆ ನಡೆದಿದೆ.

ಹೆಬ್ಬಾವಿನ ಬಾಯಿಂದ ಜಸ್ಟ್ ಮಿಸ್..!
ಜಾಯ್ ಬ್ರೀವೆರ್ ಪಾದರಸದಂತೆ ಚುರುಕು. ಆತ ಪ್ರಾಣಿಗಳ ಜೊತೆ ಸಖತ್ ಪಳಗಿದ್ದಾನೆ. ಇದೇ ಕಾರಣಕ್ಕೆ ಹೆಬ್ಬಾವು ಅಟ್ಯಾಕ್ ಮಾಡಿದ ತಕ್ಷಣ ಅಲ್ಲಿಂದ ಜಂಪ್ ಮಾಡಿದ್ದಾನೆ. ಹೆಬ್ಬಾವು ತನ್ನ ತಲೆಗೆ ಬಾಯಿ ಹಾಕಲು ಬಂದಿದೆ ಅಂತಾ ಗೊತ್ತಾಗಿದ್ದೇ ತಡ, ಅದರ ದಾಳಿಯಿಂದ ತಪ್ಪಿಸಿಕೊಂಡಿದ್ದಾನೆ. ಜಾಯ್ ಬ್ರೀವೆರ್ ಹೆಬ್ಬಾವು ಬಾಯಿಂದ ತಪ್ಪಿಸಿಕೊಳ್ಳುತ್ತಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ. ಜಾಯ್ ಬ್ರೀವೆರ್ ಅಭಿಮಾನಿ ಬಳಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಜನರು ಈ ವಿಡಿಯೋಗೆ ತರಹೇವಾರಿ ಹೆಡ್ಡರ್ ಕೊಟ್ಟು ಶೇರ್ ಮಾಡ್ತಿದ್ದಾರೆ.
ಸ್ಟೀವ್ ಇರ್ವಿನ್ ದುರಂತ ಸಾವು
ಜಾಯ್ ಬ್ರೀವೆರ್ ಹಣೆಗೆ ಹೆಬ್ಬಾವು ಬಾಯಿ ಹಾಕಿದ ಬಳಿಕ ಕೆಲವರು, ವನ್ಯಜೀವಿ ಜಗತ್ತಿನ ದಂತಕಥೆ ಸ್ಟೀವ್ ಇರ್ವಿನ್ ನೆನಪು ಮಾಡಿಕೊಂಡಿದ್ದಾರೆ. ಸ್ಟೀವ್ ಇರ್ವಿನ್ ಕೂಡ ಇದೇ ರೀತಿ ಡಾಕ್ಯುಮೆಂಟರ್ ಮಾಡುವಾಗ ಬಲಿಯಾಗಿದ್ದರು. ರಾತ್ರಿಹೊತ್ತು ಡಾಕ್ಯುಮೆಂಟರ್ ಶೂಟ್ ಮಾಡುವಾಗ ಸ್ಟ್ರಿಂಗ್‌ರೇ ಮೀನು ಸ್ಟೀವ್ ಇರ್ವಿನ್ ಅವರನ್ನ ಬಲಿಪಡೆದಿತ್ತು. ಆಸ್ಟ್ರೇಲಿಯಾದ ಬ್ಯಾಟ್ ರಿಫ್ ಎಂಬಲ್ಲಿ ಸ್ಟ್ರಿಂಗ್‌ರೇ ಮೀನು ನೇರ ಇರ್ವಿನ್ ಎದೆಗೆ ಮುಳ್ಳು ಬಿಟ್ಟಿತ್ತು. ಸ್ಟ್ರಿಂಗ್‌ರೇ ಮೀನಿನ ಮುಳ್ಳು ವಿಷಕಾರಿಯಾಗಿರುತ್ತದೆ. ನೇರವಾಗಿ ಇರ್ವಿನ್ ಎದೆಗೆ ಮುಳ್ಳು ಬಡಿದ ಹಿನ್ನೆಲೆಯಲ್ಲಿ ಇರ್ವಿನ್ ಮೃತಪಟ್ಟಿದ್ದರು. ಸ್ಟೀವ್ ಇರ್ವಿನ್ ಮೊಸಳೆಗಳನ್ನ ಗೊಂಬೆಗಳಂತೆ ಆಡಿಸುವ ಆಟದಲ್ಲಿ ಪೇಮಸ್. ಇದೀಗ ಹಾವಾಡಿಗ ಜಾಯ್ ಬ್ರೀವೆರ್ ಹೆಬ್ಬಾವಿನ ಬಾಯಿಂದ ಮಿಸ್ ಆಗಿದ್ದಾರೆ.












Click it and Unblock the Notifications