14 ವರ್ಷದಿಂದ ಕೋಮಾದಲ್ಲಿರುವಾಕೆ ಮಗುವಿಗೆ ಜನ್ಮನೀಡಿದಳು!
ವಾಷಿಂಗ್ಟನ್, ಜನವರಿ 5: ಕಳೆದ 14 ವರ್ಷಕ್ಕೂ ಹೆಚ್ಚು ಕಾಲದಿಂದ ಕೋಮಾದಲ್ಲಿದ್ದ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಅಮೆರಿಕದ ಹಸೀಂಡಾದಲ್ಲಿನ ಹೆಲ್ತ್‌ಕೇರ್‌ನಲ್ಲಿ ನಡೆದಿದೆ.
ಈ ಘಟನೆ ಹೆಲ್ತ್‌ಕೇರ್‌ನಲ್ಲಿ ನಡೆಯುವ ಲೈಂಗಿಕ ದೌರ್ಜನ್ಯದ ಘಟನೆಗಳ ಬಗ್ಗೆ ಚರ್ಚೆ ಹುಟ್ಟುಹಾಕಿದ್ದು, ಆಸ್ಪತ್ರೆ ವಿರುದ್ಧ ತನಿಖೆ ಆರಂಭಿಸಲಾಗಿದೆ.
ವಿಶೇಷವೆಂದರೆ ಕೋಮಾದಲ್ಲಿದ್ದ ಮಹಿಳೆ, ಮಗುವಿಗೆ ಜನ್ಮನೀಡುವವರೆಗೂ ಆಕೆ ಗರ್ಭಿಣಿ ಎನ್ನುವುದೇ ತಿಳಿದಿರಲಿಲ್ಲ. ಆಕೆ ಸಣ್ಣನೆ ನರಳುವುದು ಕೇಳಿಸುತ್ತಿತ್ತು. ಆದರೆ, ಆಕೆಗೆ ಏನು ಸಮಸ್ಯೆಯಾಗುತ್ತಿದೆ ಎಂಬುದು ವೈದ್ಯರಿಗೆ ಅರಿವಾಗಿರಲಿಲ್ಲ.
ಡಿಸೆಂಬರ್ 29ರಂದು ಮಗು ಜನನವಾಗಿದ್ದು, ಆರೋಗ್ಯವಾಗಿದೆ.

14 ವರ್ಷದ ಹಿಂದೆ ಉಂಟಾದ ಅವಘಡದಲ್ಲಿ ನೀರಿನಲ್ಲಿ ಮುಳುಗಿದ್ದ ಮಹಿಳೆಯ ಮೆದುಳಿಗೆ ತೀವ್ರ ಹಾನಿಯಾಗಿತ್ತು. ಅಂದಿನಿಂದಲೂ ಅವರು ಕೋಮಾ ಸ್ಥಿತಿಯಲ್ಲಿಯೇ ಬದುಕಿದ್ದಾರೆ. ಸಂವಹನ ಮತ್ತು ಸ್ವಯಂ ಚಲನೆಯ ಸಾಮರ್ಥ್ಯ ಇಲ್ಲದ ಅವರಿಗೆ ದಿನದ 24 ಗಂಟೆಯೂ ಆರೈಕೆ ಬೇಕಾಗಿತ್ತು. ಹೀಗಾಗಿ ಆಸ್ಪತ್ರೆಯ ಅನೇಕ ಸಿಬ್ಬಂದಿಗೆ ಆ ಕೊಠಡಿಯೊಳಗೆ ಪ್ರವೇಶಾವಕಾಶವಿತ್ತು.
ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಬಳಿಕ ಆಸ್ಪತ್ರೆ ಎಚ್ಚರಿಕೆ ವಹಿಸಿದ್ದು, ಮಹಿಳಾ ರೋಗಿಯ ಕೊಠಡಿಗೆ ತೆರಳುವ ಪುರುಷ ಸಿಬ್ಬಂದಿಯೊಂದಿಗೆ ಮಹಿಳಾ ಉದ್ಯೋಗಿ ತೆರಳುವುದು ಕಡ್ಡಾಯ ಎಂದು ಆದೇಶಿಸಲಾಗಿದೆ.












Click it and Unblock the Notifications