ಮಾತುಕತೆಯಿಂದ ಚೀನಾದ ನಿಲುವು ಬದಲಿಸಲು ಸಾಧ್ಯವಿಲ್ಲ: ಅಮೆರಿಕ

ವಾಷಿಂಗ್ಟನ್, ಅಕ್ಟೋಬರ್ 10: ಮಾತುಕತೆಯಿಂದ ಚೀನಾದ ನಿಲುವು ಬದಲಿಸಲು ಸಾಧ್ಯವಿಲ್ಲ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒಬ್ರಿಯಾನ್ ತಿಳಿಸಿದ್ದಾರೆ.

ಸೌಹಾರ್ದಯುತ ಮಾತುಕತೆ ಹಾಗೂ ಒಪ್ಪಂದದ ಹೊರತಾಗಿಯೂ ಚೀನಾ ತನ್ನ ಆಕ್ರಮಣಕಾರಿ ನಿಲುವನ್ನು ಬದಲಿಸಿಕೊಳ್ಳಲು ಸಿದ್ಧವಿಲ್ಲ.

ಅಮೆರಿಕನ್ನರನ್ನು ರಕ್ಷಿಸುವುದು ನಮ್ಮ ಕರ್ತವ್ಯ, ಅದಕ್ಕಾಗಿ ಚೀನಾ ವಿರುದ್ಧ ಎದ್ದು ನಿಲ್ಲಬೇಕಿದೆ. ಜಗತ್ತಿನಲ್ಲಿ ನಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳಬೇಕಿದೆ. ಡೊನಾಲ್ಡ್ ಟ್ರಂಪ್ ಅವರ ಮುಂದಾಳತ್ವದಲ್ಲಿ ನಾವು ಈಗಾಗಲೇ ಈ ಕೆಲಸ ಮಾಡುತ್ತಿದ್ದೇವೆ ಎಂದರು.

US Says Time To Accept That Talks Won’t Make China Change Aggressive Stance

ಚೀನಾ ಗಡಿ ವಿಚಾರದಲ್ಲಿ ಭಾರತದೊಂದಿಗೆ ಕ್ಯಾತೆ ತೆಗೆದಿದ್ದು, ಬಲ ಪ್ರಯೋಗದ ಮೂಲಕ ವಾಸ್ತವ ನಿಯಂತ್ರಣ ರೇಖೆಯಲ್ಲಿ ಪ್ರಭುತ್ವ ಸಾಧಿಸಲು ಹೊರಟಿದೆ. ಇದು ಆ ರಾಷ್ಟ್ರದ ನಿಲುವನ್ನು ಎತ್ತಿ ತೋರಿಸುತ್ತದೆ.

ಜೆಡ್‌ಟಿಇ ಟೆಲಿಕಾಂ ಹಾಗೂ ಚೀನಾದ ಹುವೈ ಕಂಪನಿಗಳು ಅಮೆರಿಕದವರ ಖಾಸಗಿ ಹಾಗೂ ರಹಸ್ಯ ಮಾಹಿತಿಗಳನ್ನು ಕದಿಯದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಆಮದು ಹಾಗೂ ರಫ್ತಿನ ಮೇಲೆ ಕೆಲ ನಿರ್ಬಂಧಗಳನ್ನು ಹೇರಲಾಗಿದೆ ಎಂದರು.

ಚೀನಾವು ಭಾರತದ ಉತ್ತರ ಗಡಿಯಲ್ಲಿ 60 ಸಾವಿರ ಸೈನಿಕರನ್ನು ನಿಯೋಜಿಸಿದೆ ಎಂದು ಯುಎಸ್ ಸೆಕ್ರೆಟರಿ ಮೈಕ್ ಪೊಂಪಿಯೋ ಹೇಳಿದ್ದಾರೆ. ಈ ಮೂಲಕ ಚೀನಾವು ಕೆಟ್ಟ ನಡವಳಿಕೆಯನ್ನು ಪ್ರದರ್ಶಿಸುತ್ತಿದೆ. ಹಾಗೆಯೇ ಕ್ವಾಡ್‌ ತಂಡಕ್ಕೆ ಬೆದರಕೆಯನ್ನೂ ಒಡ್ಡುತ್ತಿದೆ ಎಂದರು.

ಕ್ವಾಡ್ ಗುಂಪು ಎಂದು ಕರೆಯಲ್ಪಡುವ ಇಂಡೋ-ಫೆಸಿಫಿಕ್ ರಾಷ್ಟ್ರಗಳ ವಿದೇಶಾಂಗ ಮಂತ್ರಿಗಳು ಯುಎಸ್, ಜಪಾನ್, ಭಾರತ ಮತ್ತು ಆಸ್ಟ್ರೇಲಿಯಾ ಟೋಕಿಯೋದಲ್ಲಿ ಮಾತುಕತೆ ನಡೆಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+