ಅಮೆರಿಕ: ಕೊರೊನಾ ವೈರಸ್‌ಗೆ ಒಂದೇ ದಿನ 1,514 ಮಂದಿ ಬಲಿ
ವಾಷಿಂಗ್ಟನ್, ಏಪ್ರಿಲ್ 13: ಅಮೆರಿಕದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್‌ಗೆ 1514 ಮಂದಿ ಮೃತಪಟ್ಟಿದ್ದಾರೆ. ಇದುವರೆಗೂ ಮೃತಪಟ್ಟವರ ಸಂಖ್ಯೆ 21,733ಕ್ಕೆ ಏರಿಕೆಯಾಗಿದೆ ಎಂದು ವಿಶ್ವ ಅರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.
ಭಾನುವಾರ ಕೊರೊನಾ ಸೋಂಕಿತರ ಸಂಖ್ಯೆ 5,50,000ಕ್ಕೆ ಏರಿಕೆಯಾಗಿತ್ತು. ಅಮರಿಕದ ಕೊರೊನಾ ಕೇಂದ್ರ ಬಿಂದುವಾಗಿರುವ ನ್ಯೂಯಾರ್ಕ್ ನಗರದಲ್ಲಿ 1,89,020 ಮಂದಿ ಕೊರೊನಾ ಸೋಂಕಿತರಿದ್ದಾರೆ, 9835 ಮಂದಿ ಮೃತಪಟ್ಟಿದ್ದಾರೆ.
ನ್ಯೂಜರ್ಸಿಯಲ್ಲಿ 61,850 ಪ್ರಕರಣಗಳಿದ್ದು 2350 ಮಂದಿ ಸಾವನ್ನಪ್ಪಿದ್ದಾರೆ. ಕ್ಯಾಲಿಫೋರ್ನಿಯಾ, ಪೆನ್ಸಿಲ್‌ವೇನಿಯಾದಲ್ಲಿ 20ಸಾವಿರ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ.

ಅಮೆರಿಕದಲ್ಲಿ ಕೊರೊನಾ ವೈರಸ್ ಸಾವಿನ ಸಂಖ್ಯೆ ಇಟಲಿ ಹಾಗೂ ಸ್ಪೇನ್ ಮೀರಿಸಿದೆ. 2019ರಲ್ಲಿ ಕೊರೊನಾ ವೈರಸ್ ಮೊದಲ ಬಾರಿಗೆ ಚೀನಾದ ವುಹಾನ್ ನಗರ ಪ್ರವೇಶಿಸಿತ್ತು. ಇದೀಗ ವಿಶ್ವಾದ್ಯಂತ 18 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಆವರಿಸಿದೆ.
ಕೊವಿಡ್-19 ಗಂಭೀರ ಪರಿಣಾಮ ಬೀರುತ್ತಿರುವುದರಿಂದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ , ಅಮೆರಿಕದ ಎಲ್ಲಾ 50 ರಾಜ್ಯಗಳಲ್ಲಿಯೂ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ್ದು,ತುರ್ತು ಕಾರ್ಯಗಳನ್ನು ಕೈಗೊಳ್ಳಲು 50 ಸಾವಿರ ಯೋಧರನ್ನು ನಿಯೋಜಿಸಿದ್ದಾರೆ.












Click it and Unblock the Notifications