ಅಮೆರಿಕಾ ಅಧ್ಯಕ್ಷೀಯ ಚುನಾವಣೆ: ಟ್ರಂಪ್ ವಿರುದ್ಧ ಕಣಕ್ಕೆ ಕೋಟ್ಯಧಿಪತಿ?
ನ್ಯೂಯಾರ್ಕ್, ಜುಲೈ.06: ಕೊರೊನಾವೈರಸ್ ಸೋಂಕಿನಿಂದ ತತ್ತರಿಸಿರುವ ವಿಶ್ವದ ದೊಡ್ಡಣ್ಣ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಲ್ಲಿ ಹೊಸ ಹೆಸರು ಕೇಳಿ ಬಂದಿದೆ. ಪ್ರಖ್ಯಾತ ಹಿಪ್ ಹಾಪ್ ಸ್ಟಾರ್ ಎನಿಸಿರುವ ಕಾನ್ಯೆ ವೆಸ್ಟ್, ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ತಮ್ಮ ಟ್ಟಟರ್ ಖಾತೆಯಲ್ಲಿ ಪಾಪ್ ಸ್ಟಾರ್ ಕಾನ್ಯೆ ವೆಸ್ಟ್ ಈ ಬಗ್ಗೆ ಬರೆದುಕೊಂಡಿದ್ದಾರೆ. "ನಾವೆಲ್ಲರೂ ದೇವರನ್ನು ನಂಬುವ ಮೂಲಕ, ನಮ್ಮ ದೃಷ್ಟಿಯನ್ನು ಏಕೀಕರಿಸುವ ಮೂಲಕ ಮತ್ತು ನಮ್ಮ ಭವಿಷ್ಯವನ್ನು ನಿರ್ಮಿಸುವ ಮೂಲಕ ಈಗ ಅಮೆರಿಕದ ಭರವಸೆಯನ್ನು ಅರಿತುಕೊಳ್ಳಬೇಕಿದೆ. ಅದಕ್ಕಾಗಿಯೇ ನಾನು 2020ರಲ್ಲಿ ನಡೆಯುವ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ" ಎಂದು ಟ್ವೀಟ್ ಮಾಡಿದ್ದಾರೆ.
ಯುಎಸ್ಎ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಧ್ವನಿಯಾಗಿ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದ ಕಾನ್ಯೆ ವೆಸ್ಟ್ ದಿಢೀರ್ ನಿರ್ಧಾರವು ದೇಶದ ಮನರಂಜನೆ, ವ್ಯಾಪಾರ ಹಾಗೂ ರಾಜಕೀಯ ವಲಯದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದೆ.
|
ಅಧ್ಯಕ್ಷೀಯ ಚುನಾವಣೆ ಸ್ಪರ್ಧಿಸುವ ನಿರ್ಧಾರಕ್ಕೆ ಬೆಂಬಲ
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಉನ್ನತ ಹುದ್ದೆ ಆಗಿರುವ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಕಾನ್ಯೆ ವೆಸ್ಟ್ ತೀರ್ಮಾನವು ದಿಢೀರ್ ಘೋಷಣೆಯಾಗಿದೆ. ಅದಾಗಿಯೂ ಅವರ ನಿರ್ಧಾರವನ್ನು ಶ್ಲಾಘಿಸಿ, ಉದ್ಯಮಿ ಮತ್ತು ಟೆಸ್ಲಾದ ಮುಖ್ಯ ಕಾರ್ಯನಿರ್ವಾಹಕ ಎಲೋನ್ ಮಸ್ಕ್ "ನಿಮಗೆ ನನ್ನ ಸಂಪೂರ್ಣ ಬೆಂಬಲವಿದೆ" ಎಂದು ಬರೆದಿದ್ದಾರೆ.

ಅಧ್ಯಕ್ಷೀಯ ಚುನಾವಣಾ ಸ್ಪರ್ಧಿ ಕಾನ್ಯೆ ವೆಸ್ಟ್ ಹಿನ್ನೆಲೆ ಏನು ಗೊತ್ತಾ?
1977ರ ಜೂನ್.08ರಂದು ಜನಿಸಿದ ಕಾನ್ಯೆ ವೆಸ್ಟ್ ಅಮೆರಿಕಾದ ಪ್ರಖ್ಯಾತ ಪಾಪ್ ಸಿಂಗರ್ ಆಗಿದ್ದಾರೆ. ಅಷ್ಟಲ್ಲದೇ ಗಾಯಕ, ಗೀತ ರಚನೆಕಾರ, ಸಂಗೀತ ನಿರ್ಮಾಪಕ, ಉದ್ಯಮಿ, ಫ್ಯಾಷನ್ ಡಿಸೈನರ್ ಹಾಗೂ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ವೆಸ್ಟ್ ಅವರ ಕಾಲದ ಸಂಗೀತಗಾರರನ್ನು ಹೆಚ್ಚು ಅನುಸರಿಸಿದ, ಮೆಚ್ಚಿದ, ಪ್ರಭಾವ ಬೀರಿದವರಲ್ಲಿ ಒಬ್ಬರು. ಕಾನ್ಯೆ ವೆಸ್ಟ್ ಬಹುಮುಖ ಕಲಾವಿದರಾಗಿದ್ದು, ಅವರ ಹಾಡುಗಳು ಹಿಪ್ ಹಾಪ್, ಆತ್ಮ, ಬರೊಕ್ ಪಾಪ್, ಎಲೆಕ್ಟ್ರೋ, ಇಂಡೀ ರಾಕ್, ಸಿಂಥ್-ಪಾಪ್, ಕೈಗಾರಿಕಾ ಮತ್ತು ಸುವಾರ್ತೆ ಸೇರಿದಂತೆ ಪ್ರತಿಯೊಂದು ಪ್ರಕಾರದಲ್ಲೂ ಸೇವೆ ಸಲ್ಲಿಸಿದ್ದಾರೆ.

ಮಾಡೆಲ್ ರನ್ನು ವಿವಾಹವಾಗಿರುವ ಕಾನ್ಯಾ ವೆಸ್ಟ್
ಕಾನ್ಯಾ ವೆಸ್ಟ್ ಸಂಗೀತ ವಲಯವಷ್ಟೇ ಅಲ್ಲದೇ ಉದ್ಯಮ, ಫ್ಯಾಷನ್, ಮನರಂಜನೆ ವಲಯಗಳಲ್ಲೂ ಪ್ರಖ್ಯಾತಿ ಗಳಿಸಿದ್ದಾರೆ. ಏಕೆಂದರೆ ಕಾನ್ಯಾ ವೆಸ್ಟ್ ಅವರ ಪತ್ನಿ ಕಿಮ್ ಕರ್ದಾಶಿಯಾನ್ ವೆಸ್ಟ್ ಒಬ್ಬ ನಟಿ ಹಾಗೂ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಇದರ ಜೊತೆಗೆ ಉದ್ಯಮ ಹಾಗೂ ಸಾಮಾಜಿಕವಾಗಿ ಸಾಕಷ್ಟು ಪ್ರಖ್ಯಾತಿ ಗಳಿಸಿದ್ದಾರೆ.

ಕಾನ್ಯೆ ವೆಸ್ಟ್ ವಾರ್ಷಿಕ ಆದಾಯ 9708 ಕೋಟಿ ರೂ.
ಅಮೆರಿಕಾದ ಪ್ರಸಿದ್ಧ ರಾಪರ್ ಸಿಂಗರ್ ಆಗಿರುವ ಕಾನ್ಯೆ ವೆಸ್ಟ್ ವಾರ್ಷಿಕ ಆದಾಯವು ಫೋರ್ಬ್ಸ್ ವರದಿಯ ಪ್ರಕಾರ 1.3 ಬಿಲಿಯನ್ ಡಾಲರ್(97,08, 32,85,000 ರೂ.) ವಾರ್ಷಿಕ ಆದಾಯವನ್ನು ಹೊಂದಿದ್ದಾರೆ. ಇನ್ನು, 2020 ಪ್ರಕಾರ ಒಟ್ಟು 3.3 ಬಿಲಿಯನ್ ಡಾಲರ್(2,46,44,21,85,000 ರೂ.) ಆಸ್ತಿಯನ್ನು ಹೊಂದಿದ್ದಾರೆ. ಇನ್ನು, ಕಾನ್ಯೆ ವೆಸ್ಟ್ ಜೊತೆಗೆ ಅವರ ಪತ್ನಿ ಕಿಮ್ ಕರ್ದಾಶಿಯಾನ್ ವೆಸ್ಟ್ ಆಸ್ತಿಮೌಲ್ಯವನ್ನು ಸೇರ್ಪಡೆಗೊಳಿಸಿದ್ದಲ್ಲಿ ದಂಪತಿಯ ಒಟ್ಟು ಆಸ್ತಿ ಮೌಲ್ಯವು 4.1 ಬಿಲಿಯನ್ ಡಾಲರ್ (3,06,18,57,45,000 ರೂ.) ಆಗುತ್ತದೆ.

ಕಾನ್ಯೆ ವೆಸ್ಟ್ ಸ್ಪರ್ಧಿಸುವ ಬಗ್ಗೆ ಅಧಿಕೃತವಾಗಿ ಸ್ಪಷ್ಟತೆಯಿಲ್ಲ
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಜಾಪ್ರಭುತ್ವ ಪ್ರತಿಸ್ಪರ್ಧಿ ಜೋ ಬಿಡೆನ್ ಅವರಿಗೆ ಸವಾಲು ಒಡ್ಡುವ ಮೂಲಕ 2020ರ ಯುಎಸ್ ಅಧ್ಯಕ್ಷೀಯ ಸ್ಪರ್ಧೆಗೆ ಸ್ಪರ್ಧಿಸುವುದಾಗಿ ಹಿಪ್ ಗಾಪ್ ಸಿಂಗರ್ ಕಾನ್ಯೆ ವೆಸ್ಟ್ ಘೋಷಿಸಿದ್ದಾರೆ. ಹೀಗಿದ್ದರೂ, ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಗಂಭೀರವಾಗಿದ್ದಾರೆಯೇ ಅಥವಾ ಅಧಿಕೃತ ದಾಖಲೆಗಳನ್ನು ಸಲ್ಲಿಸಿದ್ದಾರೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.

ಅಧ್ಯಕ್ಷೀಯ ಚುನಾವಣೆ ನಡೆಯುವುದು ಯಾವಾಗ
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆಯು ನವೆಂಬರ್.03, 2020ರಲ್ಲಿ ನಡೆಯಲಿದೆ. ಈ ದಿನಾಂಕದೊಳಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುವಂತೆ ಸೂಚಿಸಲಾಗಿದೆ. ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಆಯ್ಕೆ ಆಗುವುದಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಯುಎಸ್ ಉಪಾಧ್ಯಕ್ಷ ಹಾಗೂ ಡಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಜೋ ಬಿಡೆನ್ ಕಣದಲ್ಲಿದ್ದಾರೆ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications