ಗಾಲ್ಫ್ ಆಟಗಾರ ಟೈಗರ್ ವುಡ್ಸ್‌ಗೆ ಅಮೆರಿಕದ ಅತ್ಯುನ್ನತ ನಾಗರಿಕ ಪ್ರಶಸ್ತಿ
ವಾಷಿಂಗ್ಟನ್, ಮೇ 7: ಖ್ಯಾತ ಅಂತಾರಾಷ್ಟ್ರೀಯ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಗೆ ಅಮೆರಿಕದ ಅತ್ಯನ್ನತ ನಾಗರಿಕ ಪ್ರಶಸ್ತಿ 'ಪ್ರೆಸಿಡೆನ್ಶಿಯಲ್ ಅವಾರ್ಡ್ ಆಫ್ ಫ್ರೀಡಂ' ನೀಡಿ ಗೌರವಿಸಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ವೈಟ್‌ಹೌಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ.
ಅಮೆರಿಕದ ಅತ್ಯುನ್ನತ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಟೈಗರ್ ವುಡ್ಸ್ ಅಮೆರಿಕದ ಖ್ಯಾತ ಗಾಲ್ಫ್ ಆಟಗಾರ, ವಿಶ್ವದ ಶ್ರೀಮಂತ ಕ್ರೀಡಾ ವ್ಯಕ್ತಿ ಎನ್ನುವ ಖ್ಯಾತಿಯನ್ನು ಹೊಂದಿದ್ದಾರೆ.

ಖುದ್ದು ಗಾಲ್ಫ್ ಆಟಗಾರರಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವುಡ್ಸ್‌ಗೆ ಅತ್ಯುನ್ನತ ಪ್ರಶಸ್ತಿ ನೀಡಿರುವುದು ಅಮೆರಿಕದಲ್ಲಿ ವಿರೋಧಕ್ಕೂ ಕಾರಣವಾಗಿದೆ. ಪ್ರಶಸ್ತಿಯನ್ನು ಹಣಕ್ಕೆ ಮಾರಿಕೊಳ್ಳಲಾಗಿದೆ ಎಂದು ಕೆಲರು ಆರೋಪಿಸಿದ್ದಾರೆ.
ಅಮೆರಿಕದಲ್ಲಿ ನಡೆಯುತ್ತಿರುವ ಮಧ್ಯಂತರ ಚುನಾವಣೆಗೆ ಈ ಗಿಮಿಕ್ ಬಳಸಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.












Click it and Unblock the Notifications