ಶ್ವೇತಭವನದ ಶ್ವೇತಸುಂದರಿ ಇವಾಂಕಾ ಮೇಲೂ ಕೊರೊನಾ ಕರಿನೆರಳು!

ಸಿಡ್ನಿ, ಮಾರ್ಚ್ 14: ಜಗತ್ತಿನಲ್ಲಿ ಕೊರೊನಾ ವೈರಸ್ ಹಾವಳಿ ನಿಲ್ಲುವಂತೆ ಕಾಣುತ್ತಿಲ್ಲ. ದೊಡ್ಡ ದೊಡ್ಡವರೇ ಇದಕ್ಕೆ ಗುರಿಯಾಗುತ್ತಿದ್ದಾರೆ. ಕೆನಡಾ ಪ್ರಧಾನಿ ಪತ್ನಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ, ಈಗ ಇವಾಂಕಾ ಟ್ರಂಪ್ ಕೂಡ ಕೊರೊನಾ ಸೋಂಕು ಪರೀಕ್ಷೆಗೆ ಒಳಗಾಗಿದ್ದಾರೆ ಎಂಬ ವರದಿಗಳು ಬಂದಿವೆ.

ಏಕೆಂದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಅವರನ್ನು ಕಳೆದ ವಾರ ಭೇಟಿಯಾಗಿದ್ದ ಆಸ್ಟ್ರೆಲೀಯಾ ಗೃಹ ಸಚಿವರಿಗೆ ಸೋಂಕು ತಗುಲಿರುವ ಆಘಾತಕಾರಿ ಸುದ್ದಿ ಹೊರಬಿದ್ದಿದೆ.

ಇವಾಂಕಾ ಟ್ರಂಪ್ ಅವರನ್ನು ಭೇಟಿ ಮಾಡಿ ಸ್ವದೇಶಕ್ಕೆ ಮರಳಿರುವ ಆಸ್ಟ್ರೆಲೀಯಾ ಸಚಿವ ಪೀಟರ್ ಡಟನ್ ಅವರಿಗೆ ಕೊರೊನಾ ಸೋಂಕು ತಗುಲಿದೆ. ಅಮೆರಿಕದಿಂದ ಮರಳಿದ ಪೀಟರ್ ಡಟಟನ್ ಅವರಿಗೆ ಶೀತ ಹಾಗೂ ಜ್ವರ ಬಂದಿದ್ದು, ಆಸ್ಪತ್ರೆಗೆ ಸೇರಿಸಿ ಪರೀಕ್ಷೆ ನಡೆಸಿದಾಗ ಕೊರೊನಾ ವೈರಸ್‌ನ ಪಾಸಿಟಿವ್ ಫಲಿತಾಂಶ ಬಂದಿದೆ.

US President Donald Trump Daughter Ivanka Trump Suspected

ಅಮೆರಿಕ, ಆಸ್ಟ್ರೆಲೀಯಾ, ರಾಷ್ಟ್ರಗಳ ಸೇನಾ ಒಡಂಬಡಿಕೆ ಸಭೆಯಲ್ಲಿ ಪಾಲ್ಗೊಳ್ಳಲು ಪೀಟರ್ ಡಟನ್ ಅಮೆರಿಕಕ್ಕೆ ತೆರಳಿದ್ದರು. ಈ ವೇಳೆ ಪೀಟರ್ ಇವಂಕಾ ಟ್ರಂಪ್ ಹಾಗೂ ಅಮೆರಿಕದ ಅಟಾರ್ನಿ ಜನರಲ್ ವಿಲಿಯಂ ಬಾರ್ರ್ ಅವರನ್ನೂ ಭೇಟಿಯಾಗಿದ್ದರು. ಈ ಕುರಿತು ಖುದ್ದು ಮಾಹಿತಿ ನೀಡಿರುವ ಪೀಟರ್ ಡಟನ್, ತಮಗೆ ಚಿಕಿತ್ಸೆ ಮುಂದುವರೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ಇವಾಂಕಾ ಅವರ ಮೇಲೆಯೂ ಕೊರೊನಾ ಕರಿನೆರಳು ಬಿದ್ದಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+