ಅಮೆರಿಕ: ಮತ್ತೆ ಕುತೂಹಲ ಸೃಷ್ಟಿಸಿದ ಹಾರುವ ತಟ್ಟೆಗಳು

ಹೌದು ಈ ಬ್ರಹ್ಮಾಂಡದಲ್ಲಿ ಮನುಷ್ಯ, ಪ್ರಾಣಿ, ಪಕ್ಷಿಗಳು, ಮರಗಿಡಗಳು ಇಷ್ಟೇ ಅಲ್ಲ ನಮಗೆ ಕಣ್ಣಿಗೆ ಗೋಚರಿಸಿದ ಇನ್ನೂ ಅನೇಕ ವಿಚಾರಗಳಿವೆ. ಏಲಿಯನ್ ಗಳಿವೆಯೇ? ಹಾರುವ ತಟ್ಟೆಗಳ ಬಗ್ಗೆ ಇರುವ ಸುದ್ದಿ ನಿಜವೇ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

ಇದರ ಬಗ್ಗೆ ಪರ ವಿರೋಧಗಳ ಚರ್ಚೆ ನಡೆಯುತ್ತಲೇ ಇದೆ. ಆದರೆ ಹಾರುವ ತಟ್ಟೆಗಳು ಮಾತ್ರ ಇನ್ನೂ ನಿಗೂಢವಾಗಿ ನಮಗೆ ಕಾಣುತ್ತಲೇ ಇದೆ. ಹಾರುವ ತಟ್ಟೆ ಅಥವಾ ಯುಎಫ್‌ಓಗಳು ಆಗಾಗ ಅಮೆರಿಕದ ನೌಕಾದಳದ ಪೈಲಟ್‌ಗಳಿಗೆ ಕಾಣಸಿಗುತ್ತಿರುವುದು ಮಾತ್ರ ಅಲ್ಲಿಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

ಸೋಮವಾರ ಅಮೆರಿಕದ ರಕ್ಷಣಾ ಇಲಾಖೆಯು ಹಾರುವ ತಟ್ಟೆಗಳ ಕುರಿತ ಮೂರು ವಿಡಿಯೋಗಳನ್ನು ಬಿಡುಗಡೆ ಮಾಡಿದೆ.2004ರಿಂದ 2015ರವರೆಗೂ ಸಾಕಷ್ಟು ಹಾರುವ ತಟ್ಟೆಗಳು ಕಾಣಿಸಿಕೊಂಡಿವೆ. 2017ರಲ್ಲಿ ಎರಡು ವಿಡಿಯೋಗಳನ್ನು ಬಿಡುಗಡೆ ಮಾಡಲಾಗಿತ್ತು.

US Pentagon Officially Releases UFO Videos

ಅದಕ್ಕಾಗಿ ಕೋಟ್ಯಂತರ ಹಣವನ್ನು ಖರ್ಚು ಮಾಡಲಾಗುತ್ತಿದ್ದು, ತನಿಖೆಯಿಂದ ಬಂದಿರುವ ಫಲಿತಾಂಶ ಮಾತ್ರ ಶೂನ್ಯವಾಗಿದೆ.2007ರಲ್ಲಿಯೇ ಅಮೆರಿಕದಲ್ಲಿ ಈ ರೀತಿ ಹಾರುವ ತಟ್ಟೆಗಳ ರೇಡಾರ್ ಹಾಗೂ ವಿಡಿಯೋ ಮಾಹಿತಿಗಳ ಸಂಗ್ರಹಕ್ಕೆ ಹೊಸ ವಿಭಾಗ ತೆರೆಯಲಾಗಿತ್ತು. ಆದರೆ 2012ರಲ್ಲಿ ಅದನ್ನು ಮುಚ್ಚಲಾಗಿದೆ.

ನೌಕಾಪಡೆ ಇದರ ತನಿಖೆಯನ್ನು 2014 ಮತ್ತು 2015ರಲ್ಲಿ ಪೂರ್ವ ತೀರದ ಹತ್ತಿರ ಹಲವು ಹಾರುವ ತಟ್ಟೆಗಳು ಕಾಣಸಿಕ್ಕಿವೆಯಂತೆ. ಈ ಹಾರುವ ತಟ್ಟೆಗಳು ಶಬ್ದವೇಗದಲ್ಲಿ ಹಾರುತ್ತಿದ್ದರೂ ಕೂಡ ಅವುಗಳಲ್ಲಿಎಕ್ಸಾಸ್ಟ್ ಇಲ್ಲದಿರುವುದು ಸೋಜಿಗವೆನಿಸಿದೆ.

ಇದೀಗ ಅಮೆರಿಕದ ಪೆಂಟಗಾನ್ ಈ ಹಾರುವ ತಟ್ಟೆಯ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ.ಲಂಡನ್‌ನ ಛಾಯಾಗ್ರಾಹಕನೊಬ್ಬ 2010ರಲ್ಲಿ ಎಂ 5 ಮೇಲೆ ಎರಡು ಸಮರ ವಿಮಾನಗಳು ಹಾರುವ ತಟ್ಟೆಯನ್ನು ಹೋಲುವ ವಸ್ತುವೊಂದನ್ನು ಎದುರಿಸಿದ ಅಪೂರ್ವ ವಿಡಿಯೋ ಚಿತ್ರವೊಂದನ್ನು ತೆಗೆದಿದ್ದು ಎಲ್ಲರ ಮನೆ ಮಾತಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+