ವೈರಲ್ ವಿಡೀಯೋ: ತಮಾಷೆಗಾಗಿ 7 ತಿಂಗಳ ಮಗುವನ್ನು ಅಡವಿಡಲು ಹೊರಟ ಅಪ್ಪ
ಫ್ಲೋರಿಡಾ, ಮೇ 11: ತನ್ನ ಸ್ವಂತ ಮಗುವನ್ನು ತಂದೆಯೊಬ್ಬ ಅಂಗಡಿಯೊಂದರಲ್ಲಿ ಅಡವಿಡಲು ಹೊರಟ ಆಘಾತಕಾರಿ ವಿಡೀಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅಮೆರಿಕದ ಫ್ಲೋರಿಡಾದ ಸರಸೋಟಾ ಪೊಲೀಸರು ಈ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬ್ರಿಯಾನ್ ಸ್ಕೋಲಮ್ ಎಂಬಾತ ಕಾರಿನಲ್ಲಿ ಬಂದು ಮಗುವನ್ನು ಅಂಗಡಿಯಾತನ ಮುಂದಿಟ್ಟು, ಅದನ್ನು ಅಡವಿಟ್ತುಕೊಳ್ಳಲು ಕೇಳಿದ್ದಾನೆ. ಆದರೆ ಅಂಗಡಿಯಾತ ಅದಕ್ಕೆ ಒಪ್ಪದಿದ್ದಾಗ ವಾಪಸ್ ಆಗಿದ್ದಾನೆ. ಕೂಡಲೇ ಈ ಘಟನೆಯನ್ನು ಅಂಗಡಿಯಾತ ಪೊಲೀಸರಿಗೆ ತಿಳಿಸಿದ್ದಾರೆ.
ದೂರು ದಾಖಲಿಸಿಕೊಂಡಿರುವ ಪೊಲೀಸರು ಬ್ರಿಯಾನ್ ಪತ್ತೆಗೆ ಬಲೆ ಬೀಸಿದ್ದರು. ಇದುವರೆಗೂ ನಗರದಲ್ಲಿ ಕಾಣೆಯಾದ ಮಕ್ಕಳ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಬ್ರಿಯಾನ್ ತಾನೇ ಪೊಲೀಸರಿಗೆ ಫೋನಾಯಿಸಿ, ತಮ್ಮ ಮನೆಯ ವಿಳಾಸ ನೀಡಿದ್ದಾನೆ.

ಅಲ್ಲಿಗೆ ತೆರಳಿದ ಪೊಲೀಸರಿಗೆ "ನಾನು ಈ ವಿಡಿಯೋವನ್ನು ತಮಾಷೆಗಾಗಿ ಮಾಡಿದ್ದೇನೆ. ನನ್ನ ಮಗುವನ್ನು ಯಾವುದೇ ಕಾರಣಕ್ಕೂ ನಾನು ಅಡವಿಡುವುದಿಲ್ಲ. ನಾವೆಲ್ಲ ತಮಾಷೆ ಅಷ್ಟೆ. ನನ್ನ ಸಂಬಂಧಿಯೊಬ್ಬರೊಂದಿಗೆ 'ಸಿಲ್ಲಿ ವಿಡಿಯೋ' ಮಾಡುವ ಚಾಲೆಂಜ್ ಮಾಡಿದ್ದೆ. ಅದಕ್ಕೆಂದೇ ಹೀಗೆ ಮಾಡಿದೆ.












Click it and Unblock the Notifications