Breaking; ಉಕ್ರೇನ್‌ಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ ಜಿಲ್ ಬೈಡನ್

ವಾಷ್ಟಿಂಗ್ಟನ್, ಮೇ 08; ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪತ್ನಿ ಜಿಲ್ ಬೈಡನ್ ಉಕ್ರೇನ್‌ಗೆ ಭೇಟಿ ನೀಡಿದರು. ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ ಉಕ್ರೇನ್‌ಗೆ ಅಮೆರಿಕ ನೆರವು ನೀಡುತ್ತಿರುವ ಸಂದರ್ಭದಲ್ಲಿ ಈ ಭೇಟಿ ಮಹತ್ವ ಪಡೆದಿದೆ.

ಭಾನುವಾರ ಜಿಲ್ ಬೈಡನ್ ಉಕ್ರೇನ್‌ನ ನಿರಾಶ್ರಿತರು ವಾಸ್ತವ್ಯ ಹೂಡಿರುವ ಶಾಲೆಗಳಿಗೆ ಭೇಟಿ ನೀಡಿದರು. ಉಕ್ರೇನ್‌ ಅಧ್ಯಕ್ಷರ ಪತ್ನಿಯನ್ನು ಸಹ ಭೇಟಿ ಮಾಡಿದ್ದಾರೆ ಎಂದು ವರದಿಗಳು ಹೇಳಿವೆ.

ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ಬಳಿಕ ಅಮೆರಿಕ ಉಕ್ರೇನ್‌ಗೆ ನೆರವು ನೀಡುತ್ತಿದೆ. ಕೆಲವು ದಿನಗಳ ಹಿಂದೆ ಸೇನಾ ನೆರವು ನೀಡುವುದಾಗಿಯೂ ಅಮೆರಿಕ ಘೋಷಣೆ ಮಾಡಿತ್ತು. ಪೆಂಟಗಾನ್‌ನ ಉನ್ನತ ಅಧಿಕಾರಿಗಳು ಉಕ್ರೇನ್ ರಾಜಧಾನಿ ಕೀವ್‌ಗೆ ಭೇಟಿ ಸಹ ನೀಡಿದ್ದರು.

US First Lady Jill Biden Visits Ukraine

ಜಿಲ್ ಬೈಡನ್ ಉಕ್ರೇನ್ ಭೇಟಿ ಬಗ್ಗೆ ಮಾತನಾಡಿದ್ದು, "ಇಂದಿನ ಸಮಯದಲ್ಲಿ ಯುದ್ಧ ನಿಲ್ಲಿಸುವುದು ಅತ್ಯಗತ್ಯವಾಗಿದೆ. ಈ ಕಠೋರ ಸನ್ನಿವೇಶದಲ್ಲಿ ಅಮೆರಿಕ ಸಂಕಷ್ಟದಲ್ಲಿರುವ ಉಕ್ರೇನ್ ಪ್ರಜೆಗಳ ಜೊತೆ ಇದೆ" ಎಂದು ಹೇಳಿದ್ದಾರೆ.

ಜಿಲ್ ಬೈಡನ್ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಪತ್ನಿಯನ್ನು ಭೇಟಿ ಮಾಡಿರುವ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+