ಡೊನಾಲ್ಡ್ ಟ್ರಂಪ್‌ಗೆ ಟ್ವಿಟ್ಟರ್‌ನಲ್ಲಿ ಮುಖಭಂಗ

ವಾಷಿಂಗ್ಟನ್, ನವೆಂಬರ್ 4: ತಾವು ಬಹುದೊಡ್ಡ ಗೆಲುವು ಪಡೆಯುವತ್ತ ಸಾಗಿದ್ದು, ಮತಗಳನ್ನು ಕದಿಯಲು ಜೋ ಬೈಡೆನ್ ಪ್ರಯತ್ನಿಸುತ್ತಿದ್ದಾರೆ ಎಂದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್, ತಮ್ಮ ಡೆಮಾಕ್ರಟಿಕ್ ಎದುರಾಳಿ ವಿರುದ್ಧ ಟ್ವಿಟ್ಟರ್ ಸಮರ ನಡೆಸಿದ್ದಾರೆ.

ಜೋ ಬೈಡನ್ ಅವರ ಡೆಮಾಕ್ರಟಿಕ್ ಪಕ್ಷ 'ಚುನಾವಣೆಯನ್ನು ಕದಿಯುತ್ತಿದೆ' ಎಂಬ ಆರೋಪ ಮಾಡಿರುವ ಟ್ರಂಪ್ ಅವರ ಟ್ವೀಟ್ ಅನ್ನು ಟ್ವಿಟ್ಟರ್ ಅಳಿಸಿಹಾಕಿದೆ.

'ನಾವು ಬೃಹತ್ತಾಗಿ ಮುನ್ನಡೆ ಸಾಧಿಸಿದ್ದೇವೆ. ಆದರೆ ಅವರು ಚುನಾವಣೆಯನ್ನು ಕದಿಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಾವು ಅವರಿಗೆ ಎಂದಿಗೂ ಅವಕಾಶ ನೀಡುವುದಿಲ್ಲ. ಚುನಾವಣೆಗಳು ಮುಗಿದ ಬಳಿಕ ಮತಗಳನ್ನು ಚಲಾಯಿಸುವಂತಿಲ್ಲ' ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

US Elections: Twitter Hides Donald Trumps Tweet On Joe Biden Accusing Trying To Steal Election

'ಇಂದು ರಾತ್ರಿ ನಾನು ಹೇಳಿಕೆಯನ್ನು ನೀಡಲಿದ್ದೇನೆ. ಒಂದು ದೊಡ್ಡ ಗೆಲುವು!' ಎಂದು ಟ್ರಂಪ್ ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರ ಆರೋಪದ ಟ್ವೀಟ್ ಅನ್ನು ಟ್ವಿಟ್ಟರ್ ಬಳಕೆದಾರರಿಗೆ ಕಾಣಿಸದಂತೆ ಅಡಗಿಸಿದೆ. ಇನ್ನೊಂದೆಡೆ ಅವರು ಮೊದಲು ಮಾಡಿದ್ದ ಟ್ವೀಟ್‌ನ ಸ್ಕ್ರೀನ್ ಶಾಟ್ ವೈರಲ್ ಆಗಿದೆ. ಟ್ರಂಪ್ ಅವರು Polls (ಚುನಾವಣೆ) ಎನ್ನುವ ಬದಲು Poles ಎಂದು ಟ್ವೀಟ್ ಮಾಡಿದ್ದರು. Polls ಎಂದು ಕೂಡ ಸರಿಯಾಗಿ ಬರೆಯಲು ಬಾರದವರು ನಮ್ಮ ಅಧ್ಯರಾಗಬೇಕೇ? ಎಂದು ಅನೇಕರು ಟೀಕಿಸಿದ್ದರು. ಈ ತಪ್ಪಿನ ಅರಿವಾದ ಬಳಿಕ ಅದನ್ನು ಡಿಲೀಟ್ ಮಾಡಿದ್ದ ಟ್ರಂಪ್, ಸರಿಪಡಿಸಿದ ಟ್ವೀಟ್‌ಅನ್ನು ಪೋಸ್ಟ್ ಮಾಡಿದ್ದರು.

ಟ್ರಂಪ್ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಜೋ ಬೈಡೆನ್, 'ಈ ಚುನಾವಣೆಯಲ್ಲಿನ ವಿಜೇತರನ್ನು ನಾನಾಗಲೀ ಅಥವಾ ಡೊನಾಲ್ಡ್ ಟ್ರಂಪ್ ಅವರಾಗಲೀ ಘೋಷಿಸುವುದಲ್ಲ. ಇದನ್ನು ನಿರ್ಧರಿಸುವುದು ಮತದಾರರು' ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+