ಮತ ಎಣಿಕೆ ವಿವಾದ: ಅತ್ತ ಬೈಡನ್ ಪರ, ಇತ್ತ ಟ್ರಂಪ್ ಪರ ಪ್ರತಿಭಟನೆ
ವಾಷಿಂಗ್ಟನ್, ನವೆಂಬರ್ 5: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಪೈಪೋಟಿ ಅತಿ ಕಠಿಣವಾಗಿರುವಂತೆ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ಪರ ಬೆಂಬಲಿಗರು ಪ್ರತಿ ಮತವನ್ನೂ ಬಿಡದೆ ಎಣಿಕೆ ಮಾಡುವಂತೆ ಆಗ್ರಹಿಸಿ ನ್ಯೂಯಾರ್ಕ್‌ನಲ್ಲಿ ಮೆರವಣಿಗೆ ನಡೆಸಿದ್ದಾರೆ. ಇನ್ನೊಂದೆಡೆ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಮಿಚಿಗನ್ ರಾಜ್ಯದಲ್ಲಿನ ಬ್ಯಾಲಟ್ ಮತ ಎಣಿಕೆಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಡೆಟ್ರಾಯಿಟ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ನ್ಯೂಯಾರ್ಕ್‌ನಲ್ಲಿ ನಡೆದ ಮೆರವಣಿಗೆ ಶಾಂತಿಯುತವಾಗಿತ್ತು. ಮ್ಯಾನ್‌ಹಟ್ಟನ್‌ನ ಗ್ರೀನ್‌ವಿಚ್ ಗ್ರಾಮದ ಫಿಫ್ತ್ ಅವೆನ್ಯೂದಿಂದ ವಾಷಿಂಗ್ಟನ್ ಸ್ಕ್ವೇರ್ ಪಾರ್ಕ್ ಕಡೆಗೆ ವಿವಿಧ ವಯೋಮಾನದ ಬೈಡೆನ್ ಬೆಂಬಲಿಗರು ಸಾಗಿದರು. ತಮ್ಮ ಅಭ್ಯರ್ಥಿ ಜೋ ಬೈಡೆನ್ ಜಯಗಳಿಸಲಿದ್ದಾರೆ ಎಂಬ ಭರವಸೆಯನ್ನು ಮೆರವಣಿಗೆಕಾರರು ವ್ಯಕ್ತಪಡಿಸಿದರು.
'ಈ ಚುನಾವಣೆಯಲ್ಲಿ ಪ್ರತಿ ಮತವನ್ನೂ ಎಣಿಕೆ ಮಾಡಬೇಕೆಂದು ನಾವು ಬಯಸಿದ್ದೇವೆ. ಪ್ರತಿ ಮತಗಳ ಎಣಿಕೆ ಮುಗಿಯುವ ಮೊದಲೇ ಚುನಾವಣೆಯಲ್ಲಿ ಗೆದ್ದಿರುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ. ಅದನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಅವರಿಗೆ ರವಾನಿಸುತ್ತಿದ್ದೇವೆ' ಎಂದು ಬೈಡೆನ್ ಪರ ನಡೆದ ಪ್ರೊಟೆಕ್ಟ್ ದಿ ರಿಸಲ್ಟ್ ಕೋಅಲಿನೇಷನ್ ಮೆರವಣಿಗೆಯಲ್ಲಿ ಸಾರಾ ಬೋಯಾಗಿಯಾನ್ ಹೇಳಿದರು.

'ಬೈಡೆನ್ ಗೆದ್ದಿದ್ದಾರೆಯೇ ಎಂಬ ಬಗ್ಗೆ ನಮಗೆ ಖಾತರಿ ಇಲ್ಲ. ಎಲ್ಲ ಮತಗಳೂ ಎಣಿಕೆಯಾಗುವವರೆಗೂ ನಾವು ಕಾಯಬೇಕು. ಡೊನಾಲ್ಡ್ ಟ್ರಂಪ್ ಮತಗಳನ್ನು ಕೆಡಿಸಲಿದ್ದಾರೆ ಎಂಬ ಬಗ್ಗೆ ಭೀತಿ ಉಂಟಾಗಿದೆ. ಪ್ರಜಾಪ್ರಭುತ್ವವು ಡೋಲಾಯಮಾನ ಸ್ಥಿತಿಗೆ ತಲುಪಿದೆ'ಎಂದು ಜಾನ್ ಫ್ರೇಸರ್ ತಿಳಿಸಿದರು.
ಆದರೆ ಡೊನಾಲ್ಡ್ ಟ್ರಂಪ್ ಪರ ಡೆಟ್ರಾಯಿಟ್‌ನಲ್ಲಿ ನಡೆದ ಪ್ರತಿಭಟನೆ ಉದ್ವಿಗ್ನ ವಾತಾವರಣ ಸೃಷ್ಟಿಸಿತ್ತು. ಮತಪತ್ರ ಎಣಿಕೆ ಕೇಂದ್ರದ ಹೊರಭಾಗದಲ್ಲಿ ನೆರೆದ ಟ್ರಂಪ್ ಬೆಂಬಲಿಗರು ಮತ ಎಣಿಕೆ ನಿಲ್ಲಿಸಿ ಎಂದು ಕೂಗಿದರು. ಇಲ್ಲಿ ತಮಗೆ ಮತ ಎಣಿಕೆ ಪ್ರಕ್ರಿಯೆಯನ್ನು ಪರಿಶೀಲಿಸಲು ಅವಕಾಶವನ್ನೇ ನೀಡಲಿಲ್ಲ ಎಂದು ಆರೋಪಿಸಿದರು.












Click it and Unblock the Notifications