ಸಂಪೂರ್ಣ ಬಹುಮತ ಕೊಡಿ: ಕಮಲಾ ಹ್ಯಾರಿಸ್ ಮನವಿ

ವಾಷಿಂಗ್ಟನ್, ನವೆಂಬರ್ 2: ಅಮೆರಿಕದ ಡೆಮಾಕ್ರಟಿಕ್ ಪಕ್ಷದಿಂದ ಉಪಾಧ್ಯಕ್ಷೆ ಹುದ್ದೆಗೆ ನಾಮನಿರ್ದೇಶನಗೊಂಡಿರುವ ಭಾರತ ಮೂಲದ ಕಮಲಾ ಹ್ಯಾರಿಸ್, ಚುನಾವಣಾ ಫಲಿತಾಂಶವನ್ನು ಕಾನೂನು ಹೋರಾಟ ಬದಲಿಸುವುದಕ್ಕೆ ಅವಕಾಶ ನೀಡದಂತೆ ಸ್ಪಷ್ಟ ಬಹುಮತ ನೀಡುವಂತೆ ಜನರನ್ನು ಕೋರಿದ್ದಾರೆ.

ಮಂಗಳವಾರ ರಾತ್ರಿ ಅಧ್ಯಕ್ಷೀಯ ಚುನಾವಣೆ ಮುಗಿಯುತ್ತಿದ್ದಂತೆಯೇ ಅವಧಿಗೂ ಮುನ್ನ ವಿಜಯ ಘೋಷಣೆ ಮಾಡಲಾಗುತ್ತದೆ ಎಂಬ ವರದಿಗಳನ್ನು ಡೊನಾಲ್ಡ್ ಟ್ರಂಪ್ ನಿರಾಕರಿಸಿದ್ದರು. ಆದರೆ ಮೇಲ್ ಮೂಲಕ ಬಂದ ಮತಗಳು ಹಾಗೂ ಚುನಾವಣೆ ನಂತರದ ಗೈರಾದ ಮತಗಳ ಎಣಿಕೆಯ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದರು.

ಚುನಾವಣಾ ಕದನ ನಡೆಯುತ್ತಿರುವ ವಿವಿಧ ರಾಜ್ಯಗಳಲ್ಲಿ ಚುನಾವಣಾ ದಿನದ ಬಳಿಕವೂ ಮತಪತ್ರಗಳನ್ನು ಸ್ವೀಕರಿಸಲು ಅವಕಾಶ ನೀಡಿರುವ ಸುಪ್ರೀಂಕೋರ್ಟ್ ನಿರ್ಧಾರವನ್ನು ಟ್ರಂಪ್ ಟೀಕಿಸಿದ್ದರು.

US Elections: Kamala Harris Seeks Decisive Mandate

'ಎಲ್ಲಕ್ಕಿಂತ ಮುಖ್ಯವಾಗಿ ನಾವು ನಾವು ಈ ಚುನಾವಣೆಯಲ್ಲಿ ನಿರ್ಣಾಯಕ ಮತಗಳಿಂದ ಗೆಲ್ಲಲು ಯೋಜಿಸಿದ್ದೇವೆ. ಹೀಗಾಗಿ ಕಾನೂನು ಹೋರಾಟದ ಸಮಸ್ಯೆ ಎದುರಾಗುತ್ತದೆ ಎಂದು ನನಗೆ ಅನಿಸುತ್ತಿಲ್ಲ' ಎಂದು ಕಮಲಾ ಹ್ಯಾರಿಸ್ ಅವರು ನಾರ್ತ್ ಕರೋಲಿನಾ ಮತ್ತು ಜಾರ್ಜಿಯಾದಲ್ಲಿ ಪ್ರಚಾರದ ಭರಾಟೆ ನಡುವೆ ಹೇಳಿದ್ದಾರೆ.

'ಯಾವುದೇ ಅಡೆತಡೆಗಳಿಲ್ಲದೆ ಪ್ರತಿಯೊಬ್ಬರೂ ಮತ ಚಲಾಯಿಸುವುದು ಬಹಳ ಮುಖ್ಯವಾಗಿದೆ. ನಾವು ದೇಶದೆಲ್ಲೆಡೆ ಸಂಚರಿಸುತ್ತಿದ್ದೇವೆ. ಈ ವಿವಿಧ ರಾಜ್ಯಗಳಲ್ಲಿ ಜನರು ಚುನಾವಣೆಯ ಫಲಿತಾಂಶದ ಬಗ್ಗೆ ಬಹಳ ಕಾತರ ಹೊಂದಿದ್ದಾರೆ. ಪ್ರತಿ ರಾಜ್ಯವೂ ಮುಖ್ಯ' ಎಂದು ಹ್ಯಾರಿಸ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+