ವಿಜಯ ಘೋಷಣೆ ಮಾಡುವುದಿಲ್ಲ, ಎಣಿಕೆ ಮುಗಿಯುವವರೆಗೂ ಕಾಯುತ್ತೇವೆ: ಜೋ ಬೈಡೆನ್

ವಿಲ್ಮಿಂಗ್ಟನ್, ನವೆಂಬರ್ 5: ಎಲ್ಲ ಮತಗಳ ಎಣಿಕೆ ಪೂರ್ಣಗೊಂಡ ಬಳಿಕ ಅಧ್ಯಕ್ಷ ಸ್ಥಾನವನ್ನು ಗೆಲ್ಲುವ ಆತ್ಮವಿಶ್ವಾಸ ಹೊಂದಿರುವುದಾಗಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ಹೇಳಿದ್ದಾರೆ. ಈಗಾಗಲೇ ಪ್ರಮುಖ ರಾಜ್ಯಗಳಲ್ಲಿ ಗೆದ್ದು ಎಲೆಕ್ಟೊರಲ್ ಮತಗಳಲ್ಲಿ ಬಹುಮತದ ಸಮೀಪದಲ್ಲಿ ಇರುವ ಬೈಡೆನ್, ತಾನು ಉಳಿದ ರಾಜ್ಯಗಳಲ್ಲಿಯೂ ಡೊನಾಲ್ಡ್ ಟ್ರಂಪ್ ಅವರಿಗಿಂತ ಮುನ್ನಡೆ ಸಾಧಿಸಿದ್ದು, ಇವು ಚುನಾವಣೆಯ ಫಲಿತಾಂಶವನ್ನು ನಿರ್ಧರಿಸಲಿವೆ ಎಂದಿದ್ದಾರೆ.

ಮಂಗಳವಾರ ನಡೆದ ಚುನಾವಣೆಯ ಮತ ಎಣಿಕೆ ವಿವಾದ ಸೃಷ್ಟಿಸಿರುವ ಬೆನ್ನಲ್ಲೇ, ಜೋ ಬೈಡೆನ್ ಶ್ವೇತಭವನ ಪ್ರವೇಶಿಸುವ ಗಳಿಗೆ ಸಮೀಪಿಸಿದೆ. ಆದರೆ ಬೈಡೆನ್ ಗೆದ್ದರೂ ಕೆಲವು ಕಾಲ ಕಾನೂನು ಸಮರ ಅನಿಶ್ಚಿತತೆಗೆ ಕಾರಣವಾಗುವ ಸಂಭವ ಇದೆ.

'ಸುದೀರ್ಘ ಎಣಿಕೆಯ ರಾತ್ರಿ ಬಳಿಕ ನಾವು ಅಧ್ಯಕ್ಷ ಸ್ಥಾನವನ್ನು ಗೆಲ್ಲಲು ಅಗತ್ಯವಿರುವ 270 ಎಲೆಕ್ಟೊರಲ್ ಮತಗಳನ್ನು ತಲುಪಲು ಸಾಕಷ್ಟು ರಾಜ್ಯಗಳಲ್ಲಿ ಜಯಗಳಿಸುವುದು ಸ್ಪಷ್ಟವಾಗಿದೆ' ಎಂದು ಜೋ ಬೈಡೆನ್ ಅವರು ತಮ್ಮ ತವರೂರು ವಿಲ್ಮಿಂಗ್ಟನ್‌ನಲ್ಲಿ ಹೇಳಿದ್ದಾರೆ.

US Elections: Joe Biden Says Clear That We Are Winning, But Wait Will The Count Complete

'ನಾನಿಲ್ಲಿ ವಿಜಯ ಘೋಷಣೆ ಮಾಡಲು ನಿಂತಿಲ್ಲ. ಆದರೆ ವರದಿ ನೀಡಲು ಬಂದಿದ್ದನೆ. ಮತ ಎಣಿಕೆ ಸಂಪೂರ್ಣಗೊಂಡ ಬಳಿಕ ನಾವೇ ವಿಜಯಶಾಲಿಗಳಾಗಿರುತ್ತೇವೆ ಎಂದು ನಂಬಿದ್ದೇನೆ' ಎಂದಿದ್ದಾರೆ.

'ಪ್ರತಿ ಮತವನ್ನೂ ಸರಿಯಾಗಿ ಎಣಿಕೆ ಮಾಡಬೇಕು. ನಮ್ಮನ್ನು ಮೌನವಾಗಿರುವಂತೆ ಮಾಡಲು ಸಾಧ್ಯವಿಲ್ಲ' ಎಂದು ಬೈಡೆನ್ ಅವರು ಟ್ರಂಪ್ ಕಾನೂನು ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

'ನಾವು ಜಯಶಾಲಿಗಳಾಗಿ ಹೊರಹೊಮ್ಮುತ್ತೇವೆ ಎಂಬ ವಿಶ್ವಾಸ ನನಗಿದೆ. ಆದರೆ ಇದು ನನ್ನ ಗೆಲುವು ಮಾತ್ರವಾಗುವುದಿಲ್ಲ. ಇದು ಅಮೆರಿಕದ ಜನರ ಗೆಲುವಾಗಲಿದೆ. ಪ್ರಕ್ರಿಯೆಯಲ್ಲಿ ಮತ್ತು ಪರಸ್ಪರರ ಬಗ್ಗೆ ನಂಬಿಕೆ ಇರಿಸಿ. ನಾವು ಜತೆಯಾಗಿ ಇದನ್ನು ಗೆಲ್ಲಬಹುದು' ಎಂದು ಹೇಳಿದ್ದಾರೆ.

'ಚುನಾವಣಾ ಪ್ರಕ್ರಿಯೆಯಲ್ಲಿ ಸುಗಮ ಕಾರ್ಯಾಚರಣೆಗೆ ನಮ್ಮ ಎದುರಾಳಿಗನ್ನು ಶತ್ರುಗಳಂತೆ ಪರಿಗಣಿಸುವುದನ್ನು ನಾವು ನಿಲ್ಲಿಸಬೇಕು. ನಾವು ಶತ್ರುಗಳಲ್ಲ' ಎಂದು ಡೊನಾಲ್ಡ್ ಟ್ರಂಪ್‌ಗೆ ಅವರು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+