ಎಲೆಕ್ಟೊರಲ್ ಮತ: ಟ್ರಂಪ್-ಬೈಡೆನ್ ಮಧ್ಯೆ ಯಾರಿಗೆ ಗೆಲುವು?

ವಾಷಿಂಗ್ಟನ್, ನವೆಂಬರ್ 4: ಅಮೆರಿಕ ಚುನಾವಣೆಯಲ್ಲಿ ಅತ್ಯಂತ ನಿರ್ಣಾಯಕವೆನಿಸಿರುವ ಎಲೆಕ್ಟೊರಲ್ ಮತದಾನ ತೀವ್ರ ಕುತೂಹಲ ಕೆರಳಿಸಿದೆ. ಅಮೆರಿಕ ಅಧ್ಯಕ್ಷರಾಗಲು ಎಲೆಕ್ಟೊರಲ್ ಕಾಲೇಜ್‌ನ 538 ಮತಗಳಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯು 270 ಮತಗಳನ್ನು ಪಡೆದುಕೊಳ್ಳುವುದು ಅಗತ್ಯವಾಗಿದೆ. ಇದರಲ್ಲಿ ಇಬ್ಬರೂ ನಾಯಕರ ನಡುವೆ ನಿಕಟ ಪೈಪೋಟಿ ನಡೆಯುತ್ತಿದ್ದು, ಗೆಲುವು ಯಾರಿಗೆ ಒಲಿಯುತ್ತದೆ ಎನ್ನುವುದು ಕುತೂಹಲಕಾರಿಯಾಗಿದೆ.

ಅರಿಜೋನಾ, ಮಿನ್ನೆಸೊಟಾ ಮುಂತಾದ ಪ್ರಮುಖ ಎಲೆಕ್ಟೊರಲ್ ಮತಗಳ ರಾಜ್ಯಗಳಲ್ಲಿ ಜೋ ಬೈಡೆನ್ ಜಯಗಳಿಸಿದ್ದಾರೆ. ಫ್ಲೋರಿಡಾ, ಲೋವಾ, ಓಹಿಯೊ, ಟೆಕ್ಸಾಸ್‌ನಲ್ಲಿ ಜಯಗಳಿಸಿರುವ ಡೊನಾಲ್ಡ್ ಟ್ರಂಪ್, ಎಲೆಕ್ಟೊರಲ್ ಮತಗಳಲ್ಲಿ ಹಿನ್ನಡೆ ಅನುಭವಿಸಿದ್ದಾರೆ.

ಫಾಕ್ಸ್ ನ್ಯೂಸ್ ವರದಿಯ ಪ್ರಕಾರ ಎಲೆಕ್ಟೊರಲ್ ಮತಗಳಲ್ಲಿ ಭಾರಿ ಹಿನ್ನಡೆ ಅನುಭವಿಸಿದ್ದ ಡೊನಾಲ್ಡ್ ಟ್ರಂಪ್, ಕ್ರಮೇಣ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದ್ದಾರೆ. ಒಂದು ಹಂತದಲ್ಲಿ ಜೋ ಬೈಡೆನ್ 223 ಎಲೆಕ್ಟೊರಲ್ ಮತಗಳನ್ನು ಪಡೆದು ಅಧ್ಯಕ್ಷಗಾದಿಯ ನಿರ್ಣಾಯ 270 ಮತಗಳನ್ನು ಪಡೆಯುವ ಸೂಚನೆ ನೀಡಿದ್ದರು. ಆಗ ಕೇವಲ 148 ಮತಗಳನ್ನು ಪಡೆದಿದ್ದ ಟ್ರಂಪ್, ನಂತರದ ಮತ ಎಣಿಕೆಗಳಲ್ಲಿ ತಮ್ಮ ಬಲವನ್ನು 210ಕ್ಕೆ ಏರಿಸಿಕೊಂಡಿದ್ದಾರೆ.

US Elections: Donald Trump Vs Joe Biden Electoral Voting

223ರಲ್ಲಿಯೇ ಸ್ಥಗಿತಗೊಂಡಿದ್ದ ಜೋ ಬೈಡೆನ್ ಅವರ ಎಲೆಕ್ಟೊರಲ್ ಮತಗಳು, 237ಕ್ಕೆ ಏರಿಕೆಯಾಗಿದೆ. ಇನ್ನೊಂದೆಡೆ ಡೊನಾಲ್ಡ್ ಟ್ರಂಪ್ 210ರ ಮತಗಳನ್ನು ಪಡೆದಿದ್ದಾರೆ. ಎಲೆಕ್ಟೊರಲ್ ಮತದಾನದಲ್ಲಿ ಜೋ ಬೈಡೆನ್ ಶೇ 49.8ರಷ್ಟು ಮತಗಳನ್ನು ಪಡೆದಿದ್ದರೆ, ಡೊನಾಲ್ಡ್ ಟ್ರಂಪ್ ಶೇ 48.6 ಮತಗಳನ್ನು ಪಡೆದಿದ್ದರು. ಟ್ರಂಪ್ ತಮ್ಮ ಸಂಖ್ಯೆಯನ್ನು 213ಕ್ಕೆ ಹೆಚ್ಚಿಸಿಕೊಂಡಿದ್ದಾರೆ.

12 ಗಂಟೆಯ ವೇಳೆಗೆ ಜೋ ಬೈಡೆನ್ ಮತ್ತೊಂದು ಮತ ಬಲ ಹೆಚ್ಚಿಸಿಕೊಂಡಿದ್ದು, 238ಕ್ಕೆ ಎಲೆಕ್ಟೊರಲ್ ಮತಗಳು ಏರಿಕೆಯಾಗಿವೆ. ಟ್ರಂಪ್ 213 ಮತಗಳನ್ನು ಪಡೆದಿದ್ದಾರೆ.

435 ಸೀಟುಗಳ ಸದನದಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ. 2018ರಿಂದ 232 ಸೀಟುಗಳೊಂದಿಗೆ ಡೆಮಾಕ್ರಟಿಕ್ ನಿಯಂತ್ರಣ ಪಡೆದುಕೊಂಡಿದೆ. ಈ ಬಾರಿ ಡೆಮಾಕ್ರಟಿಕ್ 144 ಸೀಟುಗಳನ್ನು ಪಡೆದಿದ್ದರೆ, ರಿಪಬ್ಲಿಕನ್ ಪಕ್ಷ 157 ಸೀಟುಗಳೊಂದಿಗೆ ಮುನ್ನಡೆ ಪಡೆದಿದೆ. ಸದನದ ಅಧಿಕಾರ ಪಡೆಯಲು ಒಟ್ಟು 218 ಸಂಖ್ಯಾ ಬಲ ಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+