24 ಗಂಟೆಯೊಳಗಾಗಿ ಅಮೆರಿಕನ್ನರಿಗೆ ದೊರೆಯಲಿದೆ ಫೈಜರ್ ಕೊರೊನಾ ಲಸಿಕೆ

ವಾಷಿಂಗ್ಟನ್, ಡಿಸೆಂಬರ್ 12: ಬಯೋಎನ್‌ಟೆಕ್‌ನ ಫೈಜರ್ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಅಮೆರಿಕ ಆಹಾರ ಮತ್ತು ಔಷಧ ಆಡಳಿತ ಒಪ್ಪಿಗೆ ನೀಡಿದೆ.

Recommended Video

      24 ಗಂಟೆಯೊಳಗಾಗಿ ಅಮೆರಿಕನ್ನರಿಗೆ ದೊರೆಯಲಿದೆ Pfizer vaccine | America | Vaccine | Oneindia Kannada

      ಮುಂದಿನ 24 ಗಂಟೆಯೊಳಗಾಗಿ ಅಮೆರಿಕದ ಜನತೆಗೆ ಫೈಜರ್ ಕೊರೊನಾ ಲಸಿಕೆ ಸಿಗಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

      ಇಂದು ನಮ್ಮ ದೇಶದಲ್ಲಿ ವೈದ್ಯಕೀಯ ಪವಾಡ ನಡೆದಿದೆ. ನಾವು ಕೇವಲ 9 ತಿಂಗಳಲ್ಲಿ ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಯನ್ನು ಪಡೆದಿದ್ದೇವೆ.

      US Clears Pfizer Covid Vaccine, First Shot In Less Than 24 Hours

      ಇದು ಇತಿಹಾಸದ ಶ್ರೇಷ್ಠ ವೈಜ್ಞಾನಿಕ ಸಧನೆಗಳಲ್ಲಿ ಒಂದಾಗಿದೆ.ಇದು ಲಕ್ಷಾಂತರ ಜೀವಗಳನ್ನು ಉಳಿಸಲಿದೆ. ಹಾಗೂ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುತ್ತದೆ.

      ಫೈಜರ್ ಲಸಿಕೆ ಶೇ.95ರಷ್ಟು ಪರಿಣಾಮಕಾರಿಯಾಗಿದೆ. ಈ ಲಸಿಕೆ ಅಮೆರಿಕನ್ನರಿಗೆ ಉಚಿತವಾಗಿ ಲಭ್ಯವಾಗಲಿದೆ. ಈ ಲಸಿಕೆಯನ್ನು ಪ್ರತಿಯೊಂದು ರಾಜ್ಯಕ್ಕೂ ರವಾನಿಸಲು ನಿರ್ಧರಿಸಲಾಗಿದೆ. ಈ ಲಸಿಕೆಯನ್ನು 24 ಗಂಟೆಯಲ್ಲಿ ನೀಡಲಾಗುವುದು ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

      ಬ್ರಿಟನ್, ಕೆನಡಾ, ಬಹ್ರೇನ್, ಸೌದಿ ಅರೇಬಿಯಾ ಈಗಾಗಲೇ ಲಸಿಕೆಗೆ ಅನುಮತಿ ನೀಡಿದೆ. ಲಸಿಕೆಯು ಮೂರನೇ ಪ್ರಯೋಗವನ್ನೂ ಮುಗಿಸಿದೆ. ರಷ್ಯಾ ಹಾಗೂ ಚೀನಾದ ಹಲವು ಲಸಿಕೆಗಳು ಮಾರುಕಟ್ಟೆಗೆ ಬಂದಿವೆ ಆದರೆ ಸರಿಯಾಗಿ ಕ್ಲಿನಿಕಲ್ ಪ್ರಯೋಗಗಳನ್ನು ಪೂರೈಸಿಲ್ಲ.

      ಫೈಜರ್ ಲಸಿಕೆಯನ್ನು 44 ಸಾವಿರ ಮಂದಿ ಮೇಲೆ ಈಗಾಗಲೇ ಪ್ರಯೋಗಿಸಲಾಗಿದೆ. ಉತ್ತಮ ಫಲಿತಾಂಶ ಲಭ್ಯವಾಗಿದೆ. ಔಷಧಿ, ಆಹಾರ ಅಥವಾ ಲಸಿಕೆ ತೆಗೆದುಕೊಂಡರೆ ಅಲರ್ಜಿಗೆ ಒಳಗಾಗುವ ಜನರಿಗೆ, ಕೊರೊನಾ ವೈರಸ್ ಗೆ ನೀಡಲಾಗುತ್ತಿರುವ ಫೈಜರ್ ಲಸಿಕೆ ತೆಗೆದುಕೊಳ್ಳದಂತೆ ಬ್ರಿಟನ್ ಔಷಧ ನಿಯಂತ್ರಕ ಬುಧವಾರ ಎಚ್ಚರಿಕೆಯನ್ನು ನೀಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+