ಬಡ್ಡಿ ದರ 75 ಮೂಲಾಂಕದಷ್ಟು ಹೆಚ್ಚಳ; 1994ರ ಬಳಿಕ ಅಮೆರಿಕ ಕಂಡ ಅತಿದೊಡ್ಡ ಏರಿಕೆ
ವಾಷಿಂಗ್ಟನ್, ಜೂನ್ 16: ಹೆಚ್ಚುತ್ತಿರುವ ಹಣದುಬ್ಬರವನ್ನು ತಹಬದಿಗೆ ತರುವ ಉದ್ದೇಶದಿಂದ ಅಮೆರಿಕದ ರಿಸರ್ವ್ ಬ್ಯಾಂಕ್ ಬಡ್ಡಿ ದರದಲ್ಲಿ 75 ಮೂಲಾಂಕಗಳಷ್ಟು ಹೆಚ್ಚಳ ಮಾಡಿದೆ.
ಅಮೆರಿಕದ ಸೆಂಟ್ರಲ್ ಬ್ಯಾಂಕ್ 50 ಮೂಲಾಂಕಗಳಷ್ಟು ಬಡ್ಡಿ ದರ ಹೆಚ್ಚಿಸಬಹುದು ಎಂಬ ನಿರೀಕ್ಷೆ ಇತ್ತಾದರೂ ಇಷ್ಟು ಪ್ರಮಾಣದಲ್ಲಿ ಏರಿಕೆ ಮಾಡುವ ನಿರೀಕ್ಷೆ ಇರಲಿಲ್ಲ. 1994ರ ನಂತರ, ಅಂದರೆ ಕಳೆದ 28 ವರ್ಷಗಳ ಅವಧಿಯಲ್ಲಿ ಅಮೆರಿಕದ ರಿಸರ್ವ್ ಬ್ಯಾಂಕ್ ಇಷ್ಟು ಪ್ರಮಾಣದಲ್ಲಿ ಬಡ್ಡಿದರವನ್ನು ಒಮ್ಮೆಗೇ ಹೆಚ್ಚಿಸಿದ್ದಿಲ್ಲ.
ಹಣದುಬ್ಬರ ನಿರೀಕ್ಷೆ ಮೀರಿ ಹಿಡಿತ ತಪ್ಪಿ ಏರುತ್ತಿರುವುದರಿಂದ ಬಡ್ಡಿ ದರ ದೊಡ್ಡ ಮಟ್ಟದಲ್ಲಿ ಹೆಚ್ಚಿಸದೇ ಬೇರೆ ವಿಧಿ ಇಲ್ಲ ಎನ್ನುತ್ತಾರೆ ಅಮೆರಿಕದ ಆರ್ಥಿಕ ತಜ್ಞರು. ಈ ಹೆಚ್ಚಳ ಇಷ್ಟಕ್ಕೇ ನಿಲ್ಲುವುದಿಲ್ಲ. ಮುಂದಿನ ದಿನಗಳಲ್ಲಿ ಬಡ್ಡಿ ದರ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.
ಭಾರತದಲ್ಲೂ ಹಣದುಬ್ಬರ ಏರುತ್ತಿರುವ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಕೂಡ ಬಡ್ಡಿ ದರಗಳನ್ನು ಹೆಚ್ಚಿಸಿದೆ. ಭಾರತ ಅಷ್ಟೇ ಅಲ್ಲ ವಿಶ್ವದ ಅನೇಕ ದೇಶಗಳಲ್ಲೂ ಹಣದುಬ್ಬರ ಬಾಧಿಸುತ್ತಿದ್ದು, ಅಲ್ಲೆಲ್ಲಾ ಅದನ್ನು ನಿಯಂತ್ರಣಕ್ಕೆ ತರಲು ಬಡ್ಡಿ ದರ ಹೆಚ್ಚಳದ ಮಾರ್ಗ ಪ್ರಮುಖ ಅಸ್ತ್ರವಾಗಿದೆ.

ಎಷ್ಟಿದೆ ಬಡ್ಡಿ ದರ?
ಅಮೆರಿಕದಲ್ಲಿ ಹಣದುಬ್ಬರ ಶೇ. 5ಕ್ಕಿಂತ ಹೆಚ್ಚು ಮಟ್ಟಕ್ಕೆ ಹೋಗುವ ಸಾಧ್ಯತೆ ಹಿನ್ನೆಲೆಯಲ್ಲಿ 75 ಮೂಲಾಂಕಗಳಷ್ಟು ಬಡ್ಡಿ ದರ ಹೆಚ್ಚಿಸುವ ದೊಡ್ಡಮಟ್ಟದ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಹಣದುಬ್ಬರವನ್ನು ಶೇ. 2ಕ್ಕೆ ತಂದು ನಿಲ್ಲಿಸುವುದು ಅಲ್ಲಿನ ಆಡಳಿತದ ಗುರಿಯಾಗಿದೆ. ಈಗ ರಿಸರ್ವ್ ಬ್ಯಾಂಕ್ ಕೈಗೊಂಡ ಕ್ರಮದ ಬಳಿಕ ಅಮೆರಿಕದಲ್ಲಿ 1.50ರಿಂದ 1.75 ಪ್ರತಿಶತ ಬಡ್ಡಿ ದರ ಇದೆ. ಈ ವರ್ಷಾಂತ್ಯದಲ್ಲಿ ಅದು ಶೇ. 3.4ಕ್ಕೆ ಹೆಚ್ಚಾಗುವ ನಿರೀಕ್ಷೆ ಇದೆ. ಅಂದರೆ ಮುಂದಿನ ಕೆಲ ತಿಂಗಳಲ್ಲಿ ಇನ್ನೂ 150 ಮೂಲಾಂಕಗಳಷ್ಟಾದರೂ ಬಡ್ಡಿ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ.

ಅಮೆರಿಕದ ಆರ್ಥಿಕ ಸ್ಥಿತಿ
ಅಮೆರಿಕದ ಆರ್ಥಿಕತೆಯನ್ನು ಈಗ ಹೆಚ್ಚು ಬಾಧಿಸುತ್ತಿರುವುದು ಹಣದುಬ್ಬರ ಮತ್ತು ನಿರುದ್ಯೋಗ. ಉಕ್ರೇನ್ ಮತ್ತು ರಷ್ಯಾ ಯುದ್ದದ ಪರಿಣಾಮ ಅಮೆರಿಕವನ್ನು ತೀವ್ರವಾಗಿ ತಾಕಿದೆ. ಇದು ಹಣದುಬ್ಬರ ಏರಿಕೆಗೆ ಒಂದು ಮುಖ್ಯ ಕಾರಣ. ಹಾಗೆಯೇ, ಚೀನಾದ ವಿವಿಧೆಡೆ ಕೋವಿಡ್ ಕಾರಣಕ್ಕೆ ಲಾಕ್‌ಡೌನ್ ಹೇರಲಾಗುತ್ತಿರುವುದು ಅಮೆರಿಕದ ಆರ್ಥಿಕತೆಗೆ ಪೆಟ್ಟುಕೊಟ್ಟಿದೆ. ಇದಕ್ಕೆ ಕಾರಣ, ಅಮೆರಿಕದ ಸರಬರಾಜು ಸರಪಳಿ ವ್ಯವಸ್ಥೆಯಲ್ಲಿ ಚೀನಾದ ಪಾಲೂ ಇರುವುದು.

ಪೆಟ್ರೋಲ್ ಬೆಲೆ ಗಗನಕ್ಕೆ
ಜೊತೆಗೆ, ಉಕ್ರೇನ್-ರಷ್ಯಾ ಯುದ್ಧದಿಂದಾಗಿ ತೈಲ ಬೆಲೆಗಳು ಹೆಚ್ಚುತ್ತಿವೆ. ಅಮೆರಿಕದಲ್ಲಿ ಗ್ಯಾಸೊಲೀನ್ (ಪೆಟ್ರೋಲ್) ದರ ಒಂದು ಗ್ಯಾಲನ್‌ಗೆ 5 ಡಾಲರ್ ಗಡಿ ಮುಟ್ಟಿದೆ. ಇದು ಹೊಸ ದಾಖಲೆಯಾಗಿದೆ. ಒಂದು ಗ್ಯಾಲನ್ ಎಂದರೆ 3.78 ಲೀಟರ್. ಅಂದರೆ, ಒಂದು ಲೀಟರ್ ಪೆಟ್ರೋಲ್ ಬೆಲೆ ಸುಮಾರು 102 ರೂಪಾಯಿ ಆಗುತ್ತದೆ. ಹೆಚ್ಚೂ ಕಡಿಮೆ ಭಾರತದಲ್ಲಿರುವಷ್ಟೇ ಪೆಟ್ರೋಲ್ ಬೆಲೆ ಅಮೆರಿಕದಲ್ಲಿ ಇದ್ದಂತಿದೆ. ಮುಂದಿನ ದಿನಗಳಲ್ಲಿ ಅಲ್ಲಿ ಗ್ಯಾಸೊಲಿನ್ ದರ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಜಿಡಿಪಿ ಮತ್ತು ನಿರುದ್ಯೋಗ
ಅಮೆರಿಕದಲ್ಲಿ ಜಿಡಿಪಿ ವೃದ್ಧಿ ದರ ಈ ವರ್ಷ 1.7ಕ್ಕೆ ನಿಲ್ಲಬಹುದು ಎಂದು ಹೊಸದಾಗಿ ಅಂದಾಜು ಮಾಡಲಾಗಿದೆ. ರಷ್ಯಾ ಯುದ್ಧಕ್ಕೆ ಮೊದಲು ಮಾಡಿದ್ದ ಅಂದಾಜಿನ ಪ್ರಕಾರ 2022ರ ವರ್ಷಾಂತ್ಯದಲ್ಲಿ ಅಮೆರಿಕದ ಜಿಡಿಪಿ ಶೇ. 2.8ರಷ್ಟು ವೃದ್ಧಿಯಾಗಬಹುದು ಎಂದು ಎಣಿಸಲಾಗಿತ್ತು. ಈಗ ಯುದ್ಧ, ಹಣದುಬ್ಬರ ಇವೆಲ್ಲವನ್ನೂ ಪರಿಗಣಿಸಿ ಅಂದಾಜು ಪರಿಷ್ಕರಿಸಲಾಗಿದೆ.
ನಿರುದ್ಯೋಗ ಕೂಡ ಅಮೆರಿಕವನ್ನು ಕಾಡುತ್ತಿದೆ. ಇತ್ತೀಚಿನ ಕೆಲ ತಿಂಗಳಲ್ಲಿ ಅಲ್ಲಿ ನಿರುದ್ಯೋಗ ಸಮಸ್ಯೆ ತಗ್ಗಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರಿಂದ ಅಮೆರಿಕದಲ್ಲಿ ನಿರುದ್ಯೋಗ ಪ್ರಮಾಣ ಶೇ. 3.6ಕ್ಕೆ ಬಂದು ನಿಂತಿದೆ. ಅದರೆ, ಇದು ಮುಂದಿನ ಕೆಲ ತಿಂಗಳಲ್ಲಿ ಹೆಚ್ಚಾಗುವ ಸಂಭವ ಇದೆ ಎಂದು ಹೇಳಲಾಗುತ್ತಿದೆ.
ವಿಶ್ವದ ದೊಡ್ಡಣ್ಣ ಎನಿಸಿರುವ ಅಮೆರಿಕದ ಮೇಲೆ ಭಾರತದಂಥ ಅನೇಕ ದೇಶಗಳ ಆರ್ಥಿಕತೆಗಳು ವಿವಿಧ ಸ್ತರಗಳಲ್ಲಿ ಅವಲಂಬಿತವಾಗಿದೆ. ಹೀಗಾಗಿ, ಅಮೆರಿಕದ ಆರ್ಥಿಕತೆ ಮುಗ್ಗರಿಸಿದರೆ ಹಲವು ದೇಶಗಳ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
(ಒನ್ಇಂಡಿಯಾ ಸುದ್ದಿ)
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications