ಬೂಸ್ಟರ್ ಡೋಸ್ ಮಾಹಿತಿ: ಫೈಜರ್‌ನ 3ನೇ ಡೋಸ್ ಪಡೆಯಲು ಯುಎಸ್ ಅನುಮತಿ
ವಾಶಿಂಗ್ಟನ್, ಸೆಪ್ಟೆಂಬರ್ 23: ಕೊರೊನಾವೈರಸ್ ಸೋಂಕಿನಿಂದ ಹೆಚ್ಚು ಅಪಾಯವನ್ನು ಎದುರಿಸುತ್ತಿರುವ ಹಾಗೂ 65 ವರ್ಷ ಮೇಲ್ಪಟ್ಟವರಿಗೆ ಫೈಜರ್ ಲಸಿಕೆಯ ಮೂರನೇ ಡೋಸ್ ನೀಡುವುದಕ್ಕೆ ಯುಎಸ್ ಸರ್ಕಾರವು ಬುಧವಾರ ಅನುಮೋದನೆ ನೀಡಿದೆ.
ಅಮೆರಿಕಾದಲ್ಲಿ ಎರಡನೇ ಡೋಸ್ ಲಸಿಕೆಯನ್ನು ಪಡೆದುಕೊಂಡ 1 ಕೋಟಿಗೂ ಅಧಿಕ ಮಂದಿಯು ಈ ಘೋಷಣೆ ಹಿಂದಿನ ಪ್ರಮುಖ ಭಾಗವಾಗಿದ್ದಾರೆ. 2ನೇ ಡೋಸ್ ಪಡೆದ ಆರು ತಿಂಗಳ ಕಳೆದಿರುವ ಹಿನ್ನೆಲೆ ಅಂಥವರಿಗೆ ಬೂಸ್ಟರ್ ಡೋಸ್ ನೀಡುವುದಕ್ಕೆ ಸರ್ಕಾರ ಈ ಘೋಷಣೆ ಹೊರಡಿಸಿದೆ.
"ಈ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ವಿಜ್ಞಾನ ಮತ್ತು ಪ್ರಸ್ತುತ ಲಭ್ಯವಿರುವ ದತ್ತಾಂಶವು ಕೋವಿಡ್ -19 ಲಸಿಕೆಗಳಿಗಾಗಿ ಎಫ್‌ಡಿಎ ನಿರ್ಧಾರ ತೆಗೆದುಕೊಳ್ಳಲು ಮಾರ್ಗದರ್ಶನ ನೀಡುತ್ತಲೇ ಇರುತ್ತದೆ ಎಂಬುದನ್ನು ಇಂದಿನ ಕ್ರಮ ತೋರಿಸುತ್ತದೆ" ಎಂದು ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್‌ನ ಹಂಗಾಮಿ ಮುಖ್ಯಸ್ಥ ಜಾನೆಟ್ ವುಡ್‌ಕಾಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಳೆದ ವಾರ ನಿಯಂತ್ರಕ ಏಜೆನ್ಸಿ ಕರೆದ ಸ್ವತಂತ್ರ ತಜ್ಞರ ಸಮಿತಿಯು ಬೂಸ್ಟರ್ ಡೋಸ್ ವಿತರಣೆ ಕ್ರಮವನ್ನು ಶಿಫಾರಸು ಮಾಡುವ ಪರ ಮತ ಚಲಾಯಿಸಿದ್ದು, ಈ ನಿರ್ಧಾರವನ್ನು ನಿರೀಕ್ಷಿಸಲಾಗಿತ್ತು.

16 ವರ್ಷ ಮೇಲ್ಪಟ್ಟ ಎಲ್ಲರಿಗೂ ಇಲ್ಲ ಬೂಸ್ಟರ್ ಡೋಸ್
ಯುಎಸ್ ಆಹಾರ ಮತ್ತು ಔಷಧೀಯ ಪ್ರಾಧಿಕಾರದ ಸಮಿತಿಯು ಶ್ವೇತಭವನದ ಆರಂಭಿಕ ಯೋಜನೆಯನ್ನು ನಿರಾಕರಿಸಿತ್ತು. 16 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಫೈಜರ್ ಲಸಿಕೆಯ ಬೂಸ್ಟರ್ ಡೋಸ್ ನೀಡಲು ಅನುಮೋದಿಸಲಾಗಿತ್ತು. ಆದರೆ ಅಧ್ಯಕ್ಷ ಜೋ ಬೈಡೆನ್ ಆಡಳಿತದ ವೈಖರಿಯು ಸಮಿತಿಯು ಖಂಡನೆಗೆ ಕಾರಣವಾಗಿತ್ತು. ಲಸಿಕೆ ತಜ್ಞರು, ಸಾಂಕ್ರಾಮಿಕ ರೋಗ ತಜ್ಞರು ಮತ್ತು ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಗುಂಪು ಯುವಜನರಿಗೆ, ವಿಶೇಷವಾಗಿ ಮಯೋಕಾರ್ಡಿಟಿಸ್‌ಗೆ ಹೆಚ್ಚು ಒಳಗಾಗುವ ಯುವ ಪುರುಷರಿಗೆ ಅಪಾಯವು ಭಿನ್ನವಾಗಿರುತ್ತದೆ ಎಂದು ತೀರ್ಮಾನಿಸಿತ್ತು.

ನಿರ್ದಿಷ್ಟ ರೀತಿಯಲ್ಲಿ ಬೂಸ್ಟರ್ ಡೋಸ್ ಕುರಿತು ಶಿಫಾರಸ್ಸು
ಸಾಂಕ್ರಾಮಿಕ ರೋಗ ನಿಯಂತ್ರಣ ಮತ್ತ ನಿರ್ವಹಣೆ ಕೇಂದ್ರದ(ಸಿ.ಡಿ.ಸಿ) ತಜ್ಞರ ತಂಡವು ಫೈಜರ್ ಕೊರೊನಾವೈರಸ್ ಬೂಸ್ಟರ್ ಡೋಸ್ ಲಸಿಕೆ ವಿತರಣೆ ಕುರಿತು ಚರ್ಚೆ ನಡೆಸುತ್ತಿದೆ. ಮೂರನೇ ಡೋಸ್ ಲಸಿಕೆ ಪಡೆದುಕೊಳ್ಳುವವರ ಬಗ್ಗೆ ಇನ್ನೂ ಕೆಲವು ನಿರ್ದಿಷ್ಟ ಶಿಫಾರಸ್ಸುಗಳನ್ನು ಮಾಡುವ ಸಾಧ್ಯತೆಗಳಿವೆ. ಉದಾಹರಣೆಗೆ, ತೆಳುವಾದ ಮೈಕಟ್ಟನ್ನು ಹೊಂದಿರುವ ವ್ಯಕ್ತಿಯು "ಕೋವಿಡ್‌ನಿಂದ ಹೆಚ್ಚಿನ ಅಪಾಯ" ಎದುರಿಸಲಿದ್ದಾರೆ ಎಂದು ಪರಿಗಣಿಸಿದರೆ, ಇಂಥ ವ್ಯಾಖ್ಯಾನವು ಯುಎಸ್ ಜನಸಂಖ್ಯೆಯಲ್ಲಿ ಶೇ.42ರಷ್ಟಿರುವ 20 ವರ್ಷಕ್ಕಿಂತ ಮೇಲ್ಪಟ್ಟವರನ್ನು ಒಳಗೊಂಡಿರುತ್ತದೆ.

ಕೊರೊನಾವೈರಸ್ ಅಪಾಯ ಯಾರಿಗೆ ಹೆಚ್ಚು?
ಅಮೆರಿಕಾದಲ್ಲಿ ಯಾವ ಕೆಲಸದ ಸ್ಥಳಗಳು, ಸಂಸ್ಥೆಗಳು ಹಾಗೂ ಔದ್ಯೋಗಿಕ ವಲಯಗಳು ಆಗಾಗ ಕೊವಿಡ್-19 ಸೋಂಕಿನ ಭೀತಿ ಎದುರಿಸುತ್ತವೆ ಎಂಬುದನ್ನು ಮುಖ್ಯವಾಗಿ ಇಲ್ಲಿ ಸಿ.ಡಿ.ಸಿ ಗಮನದಲ್ಲಿ ಇಟ್ಟುಕೊಳ್ಳಬಹುದು. ಆದ್ದರಿಂದಲೇ "ಆರೋಗ್ಯ ಕಾರ್ಯಕರ್ತರು, ಶಿಕ್ಷಕರು ಮತ್ತು ಡೇ ಕೇರ್ ಸಿಬ್ಬಂದಿ, ಕಿರಾಣಿ ಅಂಗಡಿ ಕೆಲಸಗಾರರು ಮತ್ತು ಮನೆಯಿಲ್ಲದ ನಿರಾಶ್ರಿತರು ಅಥವಾ ಕಾರಾಗೃಹಗಳಲ್ಲಿ ಇರುವ ಇತರರನ್ನು ಒಳಗೊಳ್ಳುತ್ತದೆ" ಎಂದು ಎಫ್‌ಡಿಎ ಸೂಚಿಸುತ್ತದೆ. ಎಫ್‌ಡಿಎಯ ತುರ್ತು ಬಳಕೆಯ ಅಧಿಕಾರ (ಇಯುಎ) 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ತೀವ್ರ ಅನಾರೋಗ್ಯ ಮತ್ತು ಹೆಚ್ಚಿನ ಮಾನ್ಯತೆ ವರ್ಗಗಳ ಹೆಚ್ಚಿನ ಅಪಾಯಕ್ಕೆ ಅನ್ವಯಿಸುತ್ತದೆ. ಇದು ಫೈಜರ್ ಲಸಿಕೆಗೆ ಮಾತ್ರ ಅನ್ವಯಿಸುತ್ತದೆ.

ಯಾರಿಗೆ ಮೂರನೇ ಡೋಸ್ ಲಸಿಕೆಯ ನಿರೀಕ್ಷೆ?
ಫೈಜರ್ ಲಸಿಕೆಯ ಎರಡು ಡೋಸ್ ಪಡೆದ ವ್ಯಕ್ತಿಗಳಿಗೆ ಮೂರನೇ ಡೋಸ್ ಲಸಿಕೆ ಪಡೆದುಕೊಳ್ಳುವುದಕ್ಕೆ ಅನುಮೋದನೆ ಸಿಕ್ಕಿದೆ. ಆದರೆ ಇದುರ ಇತರೆ ಲಸಿಕೆಗಳಿಗೆ ಅನ್ವಯವಾಗುವುದಿಲ್ಲ. ಈ ಹಿನ್ನೆಲೆ ಮಾಡರ್ನಾ, ಜಾನ್ಸನ್ ಆಂಡ್ ಜಾನ್ಸನ್ ಸೇರಿದಂತೆ ಇತರೆ ಕಂಪನಿ ಲಸಿಕೆಯನ್ನು ಪಡೆದುಕೊಂಡಿರುವ ಮೂರನೇ ಡೋಸ್ ಪಡೆದುಕೊಳ್ಳಲು ಅನುಮತಿಗಾಗಿ ಎದುರು ನೋಡುತ್ತಿದ್ದಾರೆ. ಫೈಜರ್ ಅಥವಾ ಮಾಡರ್ನಾದ ಎರಡು ಡೋಸ್ ಲಸಿಕೆ ಅಥವಾ ಜಾನ್ಸನ್ ಆಂಡ್ ಜಾನ್ಸನ್ ಒಂದು ಡೋಸ್ ಲಸಿಕೆಯು ಅತಿಹೆಚ್ಚು ಸುರಕ್ಷತೆಯನ್ನು ಒದಗಿಸುತ್ತದೆ ಎಂದು ಹಲವು ಅಧ್ಯಯನಗಳಿಂದ ತಿಳಿದು ಬಂದಿದೆ. ಆದರೆ ಈ ಪರಿಣಾಮವು ವಯಸ್ಸಾದವರಲ್ಲಿ ಸ್ವಲ್ಪ ಕಡಿಮೆಯಾಗಿರುತ್ತದೆ.

ಬೂಸ್ಟರ್ ಡೋಸ್ ಎಂದರೇನು?
ಕೊರೊನಾವೈರಸ್ ಲಸಿಕೆ ವಿತರಣೆಯಲ್ಲಿ ಎರಡು ಡೋಸ್ ನೀಡುವುದಕ್ಕೆ ಜಾಗತಿಕ ಮಟ್ಟದಲ್ಲಿ ಅನುಮೋದನೆ ನೀಡಲಾಗಿದೆ. ಇದರ ಹೊರತಾಗಿ ಎರಡು ಡೋಸ್ ಪಡೆದ ನಂತರದಲ್ಲಿ ಮೂರನೇ ಡೋಸ್ ಲಸಿಕೆಯನ್ನು ನೀಡುವುದು. ಆ ಮೂಲಕ ಪ್ರತಿಕಾಯ ವ್ಯವಸ್ಥೆಯನ್ನು ವೃದ್ಧಿಸುವ ಮತ್ತು ಡೆಲ್ಟಾ ರೂಪಾಂತರ ತಳಿಯಂತಾ ಅಪಾಯಕಾರಿ ವಿರುದ್ಧ ಹೋರಾಡಬಲ್ಲ ರೋಗ ನಿರೋಧಕ ಶಕ್ತಿಯನ್ನು ಹೆಚ್ಚುಸುವ ಉದ್ದೇಶವನ್ನು ಹೊಂದಲಾಗಿದೆ. ಈಗಾಗಲೇ ನಿಗದಿತಪಡಿಸಿರುವ ಎರಡು ಡೋಸ್ ಹೊರತಾಗಿ ನೀಡುವ ಮೂರನೇ ಡೋಸ್ ಲಸಿಕೆಯನ್ನು ಬೂಸ್ಟರ್ ಡೋಸ್ ಎಂದು ಕರೆಯಲಾಗುತ್ತಿದೆ.
-
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ












Click it and Unblock the Notifications