ಆಪಲ್ ಕಂಪನಿ ಉತ್ಪನ್ನ ಬಳಸಬೇಡಿ ಎಂದ ಫೇಸ್ ಬುಕ್ ಸಿಇಒ ಝುಕರ್ ಬರ್ಗ್

ಫೇಸ್ ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್ ತಮ್ಮ ಕಂಪನಿ ಉದ್ಯೋಗಿಗಳಿಗೆ ಆಪಲ್ ಕಂಪನಿ ಉತ್ಪನ್ನಗಳನ್ನು ಬಳಸದಂತೆ ಸೂಚನೆ ನೀಡಿದ್ದಾರೆ ಎಂದು ವರದಿ ಆಗಿದೆ. ‌ಖಾಸಗಿ ವಿಚಾರಗಳನ್ನು ಫೇಸ್ ಬುಕ್ ನಿರ್ವಹಿಸುವ ರೀತಿ ಬಗ್ಗೆ ಆಪಲ್ ಕಂಪನಿ ಸಿಇಒ ಟಿಮ್ ಕುಕ್ ಹೇಳಿಕೆ ಹಿನ್ನೆಲೆಯಲ್ಲಿ ಝುಕರ್ ಬರ್ಗ್ ಸಿಟ್ಟಾಗಿದ್ದಾರೆ.

ಫೇಸ್ ಬುಕ್ ಸ್ಥಾಪಕರೂ ಆದ ಝುಕರ್ ಬರ್ಗ್ ತಮ್ಮ ನೌಕರರಿಗೆ ಆಪಲ್ ಹೊರತಾಗಿ ಬೇರೆ ಕಂಪನಿ ಉತ್ಪನ್ನಗಳನ್ನು ಬಳಸಿ ಎಂದು ಹೇಳಿರುವುದಂತೂ ಸದ್ಯಕ್ಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕುಕ್, ನಮ್ಮ ಕಂಪನಿಯು ಬಳಕೆದಾರರ ಖಾಸಗಿ ವಿಚಾರ ಹಾಗೂ ಖಾಸಗಿತನವನ್ನು ಬಳಸಿಕೊಳ್ಳಲ್ಲ. ಅದು ಮಾನವ ಹಕ್ಕು ಎಂದಿದ್ದರು.

ಕೇಂಬ್ರಿಡ್ಜ್ ಅನಲಿಟಿಕಾ ಹಗರಣ ಈ ವರ್ಷದ ಆರಂಭದಲ್ಲಿ ಹೊರ ಬಿದ್ದಾಗ ಫೇಸ್ ಬುಕ್ ನಲ್ಲಿ ಬಳಕೆದಾರರ ಖಾಸಗಿ ವಿಷಯಗಳಿಗೆ ಸುರಕ್ಷತೆ ಇಲ್ಲ ಎಂಬ ವಿಚಾರ ಚರ್ಚೆಯ ಮುನ್ನೆಲೆಗೆ ಬಂದಿತ್ತು. ಆ ಹಿನ್ನೆಲೆಯಲ್ಲಿ ಕೇಳಿದ ಪ್ರಶ್ನೆಗೆ ಖಾಸಗಿತನ ಹಾಗೂ ವೈಯಕ್ತಿಕ ಬದುಕು ಮಾನವ ಹಕ್ಕು. ನಾವು ಅಂಥ ವಿಚಾರಲ್ಲಿ ಹಸ್ತಕ್ಷೇಪ ಮಾಡಲ್ಲ ಎಂಬ ಉತ್ತರ ನೀಡಿದ್ದರು ಟಿಮ್ ಕುಕ್.

Upset with Apple CEO Tim Cook, Zuckerberg asked staff to stop using iPhones: Report

ಆ ಉತ್ತರದಿಂದ ಝುಕರ್ ಬರ್ಗ್ ಸಿಟ್ಟಾಗಿ, ಆಪಲ್ ಕಂಪನಿ ಉತ್ಪನ್ನಗಳನ್ನು ಬಳಸದಂತೆ ತಮ್ಮ ಉದ್ಯೋಗಿಗಳಿಗೆ ಸೂಚಿಸಿದ್ದಾರೆ ಎಂದು ವರದಿ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+