ಕೊರೊನಾ ಅಟ್ಟಹಾಸಕ್ಕೆ ಅಮೆರಿಕ ಛಿದ್ರ, 24 ಗಂಟೆಯಲ್ಲಿ 3176 ಸಾವು
ವಾಷಿಂಗ್ಟನ್, ಏಪ್ರಿಲ್ 24: ಕೊರೊನಾ ವೈರಸ್ ಅಮೆರಿಕ ದೇಶವನ್ನು ನಾಶ ಮಾಡುತ್ತಿದೆ. ಡೆಡ್ಲಿ ವೈರಸ್‌ಗೆ ಯುಎಸ್‌ನಲ್ಲಿ ಸಾವಯುತ್ತಿರುವವರ ಸಂಖ್ಯೆಯಿಂದ ದಿನದಿಂದ ದಿನಕ್ಕೆ, ಗಂಟೆ ಗಂಟೆಗೆ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.
ಸುಮಾರು 8.8 ಲಕ್ಷಕ್ಕೂ ಅಧಿಕ ಜನರಿಗೆ ಯುಎಸ್‌ನಲ್ಲಿ ಕೊವಿಡ್ ಸೋಂಕು ತಗುಲಿದ್ದು, ಸುಮಾರು 50000 (49,845) ಸಾವಿರ ಜನದಷ್ಟು ಮೃತಪಟ್ಟಿದ್ದಾರೆ ಎಂದು ವರದಿಗಳು ಹೇಳುತ್ತಿದೆ.
ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕದಲ್ಲಿ ಕಳೆದ 24 ಗಂಟೆಯಲ್ಲಿ 3176 ಜನರು ಕೊರೊನಾ ಸೋಂಕಿನಿಂದ ಬಲಿಯಾಗಿದ್ದಾರೆ ಎಂದು ಎಎಫ್ ಪಿ ಸುದ್ದಿ ಸಂಸ್ಥೆ ತಿಳಿಸಿದೆ.

ಅಮೆರಿಕ ಪೈಕಿ ನ್ಯೂಯಾರ್ಕ್ ನಗರವೊಂದರಲ್ಲೇ 2.68 ಲಕ್ಷ ಕೊರೊನಾ ಸೋಂಕಿತರು ವರದಿಯಾಗಿದ್ದು, 20,861 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ನ್ಯೂಯಾರ್ಕ್ ಬಿಟ್ಟರೆ ನ್ಯೂ ಜೆರ್ಸಿಯಲ್ಲಿ ಹೆಚ್ಚು ಸೋಂಕಿತರು ಮತ್ತು ಸಾವು ಸಂಭವಿಸಿದೆ. ಇಲ್ಲಿ 1 ಲಕ್ಷ ಸೋಂಕಿತರು ವರದಿಯಾಗಿದ್ದು, 5428 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಈ ಅಂಕಿ ಅಂಶಗಳು ವಿಶ್ವವನ್ನು ಬೆಚ್ಚಿಬೀಳಿಸುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ, ಆರ್ಥಿಕವಾಗಿ ಶ್ರೀಮಂತ, ವಿಶ್ವದಲ್ಲಿ ಬಲಾಢ್ಯ ದೇಶವಾಗಿದ್ದರೂ ಕೊರೊನಾ ವೈರಸ್ ವಿರುದ್ಧ ಸಮರ್ಪಕವಾಗಿ ಹೋರಾಡುವಲ್ಲಿ ಯುಎಸ್ ವಿಫಲವಾಗಿದೆ. ಇದನ್ನು ಕಂಡು ಇತರೆ ದೇಶಗಳು ಸಹಜವಾಗಿ ಆತಂಕಗೊಂಡಿದೆ.












Click it and Unblock the Notifications