ವಿಶ್ವಸಂಸ್ಥೆ ರಾಯಭಾರಿ ಸ್ಥಾನಕ್ಕೆ ನಿಕ್ಕಿ ಹಾಲೆ ರಾಜೀನಾಮೆ

ವಾಷಿಂಗ್ಟನ್, ಅಕ್ಟೋಬರ್ 09: ವಿಶ್ವಸಂಸ್ಥೆಗೆ ಯುಎಸ್ ರಾಯಭಾರಿ ನಿಕ್ಕಿ ಹಾಲೆ ಅವರು ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ನೇರವಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕಳಿಸಿದ್ದಾರೆ.

ಟ್ರಂಪ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನಿಕ್ಕಿ ಅವರ ರಾಜೀನಾಮೆಗೆ ಏನು ಕಾರಣ ಎಂಬುದು ತಿಳಿದು ಬಂದಿಲ್ಲ. ಆದರೆ, ಟ್ರಂಪ್ ಅವರು ನಿಕ್ಕಿ ಅವರ ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ.

ದಕ್ಷಿಣ ಕರೋಲಿನಾದ ರಾಜ್ಯಪಾಲರಾಗಿದ್ದ ನಿಕ್ಕಿ ಹಾಲೆ ಅವರು ಟ್ರಂಪ್ ಅವರು ಚುನಾವಣೆಯಲ್ಲಿ ಗೆದ್ದ ಬಳಿಕ, ವಿಶ್ವಸಂಸ್ಥೆಗೆ ರಾಯಭಾರಿಯಾಗಿ ನೇಮಕಗೊಂಡಿದ್ದ ನಿಕ್ಕಿ ಅವರು ಕಳೆದ ಏಪ್ರಿಲ್ ತಿಂಗಳಿನಲ್ಲಿ ರಷ್ಯಾ ಮೇಲಿನ ನಿರ್ಬಂಧ ಹೇರುವ ಬಗ್ಗೆ ತೆಗೆದುಕೊಂಡ ನಿರ್ಧಾರದಿಂದ ಟ್ರಂಪ್ ಜತೆ ಮೈಮನಸ್ಯ ಉಂಟಾಗಿತ್ತು.

UN Ambassador Nikki Haley resigns

ದಕ್ಷಿಣ ಕರೋಲಿನಾದ 116ನೇ ರಾಜ್ಯಪಾಲ ಹುದ್ದೆಯನ್ನು ಅಲಂಕರಿಸಿದ್ದ ನಿಕ್ಕಿ ಅವರು, ಈ ಹುದ್ದೆಗೇರಿದ ಎರಡನೇ ಇಂಡೋ ಅಮೆರಿಕನ್ ಎನಿಸಿದ್ದಾರೆ. ಬಾಬ್ಬಿ ಜಿಂದಾಲ್ ನಂತರ ಭಾರತೀಯ ಮೂಲದ ಅಮೆರಿಕನ್ ಆಗಿ ನಿಕ್ಕಿ ಅವರು ಪ್ರಮುಖ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ.

ನಿಕ್ಕಿ ಅವರನ್ನು ವಿಶ್ವಸಂಸ್ಥೆ ರಾಯಭಾರಿಯಾಗಿ ನೇಮಿಸುವ ಸಂಬಂಧ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ನವೆಂಬರ್ 23, 2016ರಂದು ನಿರ್ಧಾರ ಪ್ರಕಟಿಸಿದರು. ಜನವರಿ 20, 2017ರಂದು ಈ ಹುದ್ದೆಗೇರಿದ ನಿಕ್ಕಿಗೆ ಮೊದಲಿಗೆ ಸೆಕ್ರೆಟರಿ ಆಫ್ ದಿ ಸ್ಟೇಟ್ ಹುದ್ದೆಯ ಆಫರ್ ನೀಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+