ಕೊವಿಡ್ 19 ಮತ್ತೊಂದು ಹಂತ ಎದುರಾದರೂ ಲಾಕ್‌ಡೌನ್ ಇಲ್ಲ: ಟ್ರಂಪ್
ವಾಷಿಂಗ್ಟನ್, ಮೇ 22: ಕೊವಿಡ್ 19 ಮಹಾಮಾರಿ ಅಮೆರಿಕದಲ್ಲಿ ದಿನಕ್ಕೆ ಸಾವಿರಾರು ಮಂದಿಯನ್ನು ಬಲಿತೆಗೆದುಕೊಳ್ಳುತ್ತಿದ್ದರೆ, ಇನ್ನೊಂದೆಡೆ ಆರ್ಥಿಕತೆಯನ್ನು ಆರಂಭಿಸುವ ಮಾತನ್ನು ಟ್ರಂಪ್ ಆಡುತ್ತಿದ್ದಾರೆ. ಇದೀಗ ಕೊರೊನಾ ವೈರಸ್ ಎರಡನೇ ಹಂತ ಎದುರಾದರೂ ಕೂಡ ಯಾವುದೇ ಕಾರಣಕ್ಕೂ ಲಾಕ್‌ಡೌನ್ ಮಾಡುವುದಿಲ್ಲ ಎಂದು ಹೇಳಿ ಮೊಂಡುತನ ತೋರಿದ್ದಾರೆ.
Recommended Video
ಲಾಕ್‌ಡೌನ್‌ನಿಂದ ದೇಶವನ್ನು ಆರೋಗ್ಯವಾಗಿಡಲು ಸಾಧ್ಯವಿಲ್ಲ.ಹೀಗಾಗಿ ಲಾಕ್‌ಡೌನ್ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಎಲ್ಲಾ 50 ರಾಜ್ಯಗಳಲ್ಲಿ ಲಾಕ್‌ಡೌನ್ ಸಡಿಲಗೊಳಿಸಲಾಗಿದೆ. ಚಳಿಗಾಲದಲ್ಲಿ ವೈರಸ್ ದುಪ್ಪಟ್ಟು ಹೆಚ್ಚಾಗುವ ಭಯವಿರುವ ಕಾರಣ ಒಂದೊಮ್ಮೆ ಎರಡನೇ ಹಂತದಲ್ಲಿ ಕೊರೊನಾ ವೈರಸ್ ಬಂದರೂ ಲಾಕ್‌ಡೌನ್ ಮಾತ್ರ ಮಾಡುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.

ಅಮೆರಿಕದಲ್ಲಿ 96 ಮಂದಿ ಸಾವು
ಮಾಹಾಮಾರಿ ಕೊರೊನಾ ವೈರಸ್‌ನಿಂದ ಅಮೆರಿಕದಲ್ಲಿ ಅದಾಗಲೇ 96 ಸಾವಿರ ಮಂದಿ ಬಲಿಯಾಗಿದ್ದು ಸೋಂಕಿತರ ಸಂಖ್ಯೆ 16 ಲಕ್ಷ ದಾಟಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತ್ರ ಲಾಕ್ ಡೌನ್ ಜಾರಿಗೊಳಿಸುವುದಿಲ್ಲ ಎಂದು ಹೇಳುತ್ತಿದ್ದಾರೆ.

ಕೊರೊನಾ ವೈರಸ್ ಎರಡನೇ ದಾಳಿ
ದೇಶದಲ್ಲಿ ಒಂದೊಮ್ಮೆ ಕೊರೊನಾ ವೈರಸ್ ಹಾವಳಿಯ ಎರಡನೇ ಹಂತ ಎದುರಾದರೂ ಯಾವುದೇ ಕಾರಣಕ್ಕೂ ಲಾಕ್ ಡೌನ್ ನಿರ್ಬಂಧಗಳನ್ನು ಜಾರೊಗೊಳಿಸುವುದಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಬೆಂಕಿ ನಂದಿಸುತ್ತೇವೆ, ದೇಶ ಮುಚ್ಚುವುದಿಲ್ಲ
ಎರಡನೇ ಹಂತ ಎದುರಾಗುವುದು ವಿಭಿನ್ನ ಸಾಧ್ಯತೆ ಎಂದು ಜನರು ಹೇಳುತ್ತಿದ್ದಾರೆ. ಇದು ಪ್ರಮಾಣಿತವಾಗಿದೆ. ನಾವು ಬೆಂಕಿಯನ್ನು ನಂದಿಸಲಿದ್ದೇವೆ. ಆದರೆ, ದೇಶವನ್ನು ಮುಚ್ಚಲು ಹೋಗುವುದಿಲ್ಲ ಎಂದು ಟ್ರಂಪ್ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಮಿಚಿಗನ್ ರಾಜ್ಯದ ಫೋರ್ಡ್ ಉತ್ಪಾದನಾ ಘಟಕದ ಪ್ರವಾಸದ ಸಮಯದಲ್ಲಿ ಮಾಧ್ಯಮ ಪ್ರಶ್ನೆಗಳಿಗೆ ಈ ಉತ್ತರ ನೀಡಿದ್ದಾರೆ.

ಚಳಿಗಾಲದಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ
ಕೊರೊನ ವೈರಸ್ ಚಳಿಗಾಲದಲ್ಲಿ ಹೆಚ್ಚಾಗಲಿದ್ದು, ಅದು ತನ್ನ ಎರಡನೇ ಸ್ವರೂಪವನ್ನು ತೋರಿಸಲಿದೆ. ಕೊರೊನಾ ಜೊತೆಗೆ ಹೋರಾಡುತ್ತೇವೆ ಆದರೆ ಲಾಕ್‌ಡೌನ್ ಮಾಡುವುದಿಲ್ಲ, ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂದಿದ್ದಾರೆ.












Click it and Unblock the Notifications