ಅಮೆರಿಕದಲ್ಲಿ ಮೂರು ಹಂತಗಳಲ್ಲಿ ಲಾಕ್‌ಡೌನ್ ತೆರವು: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್, ಏಪ್ರಿಲ್ 17: ಅಮೆರಿಕದಾದ್ಯಂತ ಕೊರೊನಾ ವೈರಸ್‌ನಿಂದಾಗಿ ಸಾವಿರಾರು ಮಂದಿ ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್ ಅನ್ನು ಹಂತ ಹಂತವಾಗಿ ತೆರವುಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಮೊದಲ ಹಾಗೂ ಎರಡನೇ ಹಂತದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುಬೇಕು, 10ಕ್ಕಿಂತ ಹೆಚ್ಚು ಮಂದಿ ಒಟ್ಟಿಗೆ ಓಡಾಡಬಾರದು, ಹಾಗೆಯೇ ವಿನಾಕಾರಣ ವಾಹನಗಳಲ್ಲಿ ತಿರುಗಾಡಬಾರದು ಎಂದು ಹೇಳಿದ್ದಾರೆ.

ಮೂರನೇ ಹಂತದಲ್ಲಿ ಸಾರ್ವಜನಿಕ ಸಭೆ, ಸಮಾರಂಭಗಳನ್ನು ಕಡಿಮೆ ಪ್ರಮಾಣದಲ್ಲಿ ನಡೆಸಬೇಕು, ಜಿಮ್, ಬಾರ್, ರೆಸ್ಟೋರೆಂಟ್‌ಗಳ ನಿಯಮ ಕೂಡ ಬದಲಾಗಲಿದೆ.

Trump Unveils Three Phase Plan To Reopen

ಅಮೆರಿಕ ಕೊರೊನಾ ವೈರಸ್ ಪ್ರಕರಣಗಳ ಅತ್ಯಂತ ಹೀನಾಯ ಸ್ಥಿತಿಯನ್ನು ತಲುಪಿದ್ದು, ಮುಂದಿನ ಒಂದು ತಿಂಗಳಲ್ಲಿ ರಾಜ್ಯಗಳಲ್ಲಿ ಚಟುವಟಿಕೆಗಳು ಪುನಾರಂಭಗೊಳ್ಳಬಹುದು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಶ್ವೇತಭವನದ ದಿನನಿತ್ಯದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಗಳ ರಾಜ್ಯಪಾಲರೊಂದಿಗೆ ಚರ್ಚೆ ನಡೆಸಿ, ಗುರುವಾರ ರಾತ್ರಿ ಹೊಸ ಮಾರ್ಗಸೂಚಿ ಘೋಷಿಸುವುದಾಗಿ ತಿಳಿಸಿದ್ದಾರೆ.

ಅಮೆರಿಕದಲ್ಲಿ ಹೆಚ್ಚು ಕಡಿಮೆ 6.40 ಲಕ್ಷ ಕೊರೋನಾ ಪ್ರಕರಣಗಳಿದ್ದು, 30,900 ಜನರು ಮೃತಪಟ್ಟಿದ್ದಾರೆ. ಇದು ವಿಶ್ವದ ಅತಿ ಹೆಚ್ಚು ಸೋಂಕು ಪೀಡಿತ ಪ್ರದೇಶವಾಗಿದೆ.
ನ್ಯೂಯಾರ್ಕ್ ನಗರದಲ್ಲಿ ಸೋಂಕಿತರ ಸಂಖ್ಯೆ 10,367ಕ್ಕೇರಿಕೆಯಾದ ಹಿನ್ನೆಲೆಯಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

ರಾಷ್ಟ್ರಾದ್ಯಂತ ವಿಧಿಸಿರುವ ನಿಬಂಧನೆಗಳನ್ನು ಸಡಿಲಗೊಳಿಸಿ ವ್ಯವಹಾರ ಮರು ಆರಂಭಿಸುವ ಕುರಿತು ಟ್ರಂಪ್ ರಾಜ್ಯಗಳ ರಾಜ್ಯಪಾಲರು ಮತ್ತು ಆರೋಗ್ಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+