ಟ್ರಂಪ್ ‘ಕ್ರೂರಿ, ಸುಳ್ಳುಗಾರ’: ಟ್ರಂಪ್ ಅಕ್ಕನ ಆರೋಪ

ಅಮೆರಿಕ ಅಧ್ಯಕ್ಷ ಟ್ರಂಪ್ ಕ್ರೂರಿ ಹಾಗೂ ಸುಳ್ಳುಗಾರ ಅಂತಾ ಟ್ರಂಪ್‌ರ ಅವರ ಹಿರಿಯ ಸಹೋದರಿ ಮರಿಯಾನ್ನೆ ಟ್ರಂಪ್ ಬ್ಯಾರಿ ಆರೋಪಿಸಿದ್ದಾರೆ. ಬ್ಯಾರಿ ಈ ರೀತಿ ಹೇಳಿರುವ ಆಡಿಯೋ ಟೇಪ್ ಸದ್ಯಕ್ಕೆ ಅಮೆರಿಕ ರಾಜಕೀಯ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಅಮೆರಿಕ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಮರು ಆಯ್ಕೆ ಬಯಸಿ ಚುನಾವಣೆಗೆ ತಯಾರಿ ನಡೆಸಿದ್ದಾರೆ.

ಆದರೆ ಟ್ರಂಪ್ ವಿರುದ್ಧ ಅವರ ಆಪ್ತರು ಹಾಗೂ ಟ್ರಂಪ್ ಕುಟುಂಬ ಸದಸ್ಯರೇ ತಿರುಗಿಬಿದ್ದಿದ್ದಾರೆ. ಈ ಹಿಂದೆ ತಮ್ಮದೇ ಪಕ್ಷದ ನಾಯಕರಿಂದ ಆರೋಪಕ್ಕೆ ತುತ್ತಾಗಿದ್ದ ಟ್ರಂಪ್ ಈಗ ಸ್ವತಃ ಸಹೋದರಿಯಿಂದಲೇ ತೆಗಳಿಸಿಕೊಂಡಿರುವ ಆಡಿಯೋ ವೈರಲ್ ಆಗಿದೆ.

ಇನ್ನು ಟ್ರಂಪ್ ಕ್ರೂರ ವಲಸೆ ನೀತಿಯಿಂದ ಸಾವಿರಾರು ಜನ ಬೀದಿಪಾಲಾಗಿದ್ದಾರೆ ಅಂತಾ ಕೂಡ ಬ್ಯಾರಿ ಆರೋಪಿಸಿದ್ದಾರೆ. ಅಲ್ಲದೆ ಅಮೆರಿಕದ ಗಡಿಯಲ್ಲಿ ತಾಯಿ-ಮಕ್ಕಳನ್ನು ಬೇರ್ಪಡಿಸಿ -ಬಂಧನ ಕೇಂದ್ರಗಳಿಗೆ ಕಳುಹಿಸಿದ ಶಾಪ ಟ್ರಂಪ್‌ಗೆ ತಟ್ಟಲಿದೆ ಎಂದಿದ್ದಾರೆ.

ಅಷ್ಟಕ್ಕೂ ಟ್ರಂಪ್‌ಗೆ ಸಂಬಂಧಿಸಿದ ಈ ವಿವಾದಾತ್ಮಕ ಆಡಿಯೋ ರಿಲೀಸ್ ಮಾಡಿದ್ದು ಸ್ವತಃ ಟ್ರಂಪ್ ಸಂಬಂಧಿಯೇ. ಮರಿಯಾನ್ನೆ ಟ್ರಂಪ್ ಬ್ಯಾರಿ ಸಂಭಾಷಣೆಯ ಟೇಪ್‌ ಅನ್ನು ಮೇರಿ ಟ್ರಂಪ್ ಎಂಬ ಲೇಖಕಿ ಬಿಡುಗಡೆ ಮಾಡಿದ್ದು, ಈ ಮೇರಿ ಟ್ರಂಪ್ ಕೂಡ ಟ್ರಂಪ್‌ಗೆ ಸಂಬಂಧಿಯೇ ಆಗಬೇಕಿದೆ.

ಟ್ರಂಪ್ ವಿರುದ್ಧ ಪುಸ್ತಕ ಬರೆದಿದ್ದರು..!

ಟ್ರಂಪ್ ವಿರುದ್ಧ ಪುಸ್ತಕ ಬರೆದಿದ್ದರು..!

ಟ್ರಂಪ್ ವಿರುದ್ಧ ಮೇರಿ ಟ್ರಂಪ್ ಕೆಂಡ ಕಾರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಮೇರಿ ಟ್ರಂಪ್, ಡೊನಾಲ್ಡ್ ಟ್ರಂಪ್ ವಿರುದ್ಧ ಕೃತಿ ಬರೆದು ಸುದ್ದಿಯಲ್ಲಿದ್ದರು. ಟ್ರಂಪ್ ವ್ಯಕ್ತಿತ್ವವನ್ನು ಟೀಕಿಸಿ 'ಟೂ ಮಚ್‌ & ನೆವರ್ ಎನಫ್‌: ಹೌ ಮೈ ಫ್ಯಾಮಿಲಿ ಕ್ರಿಯೇಟೆಡ್‌ ದಿ ವರ್ಲ್ಡ್‌ ಮೋಸ್ಟ್ ಡೇಂಜರ್ಸ್‌ ಮ್ಯಾನ್' ಎಂಬ ಕೃತಿ ಬರೆದಿದ್ದರು. ಈ ಕೃತಿಯ ಮಿಲಿಯನ್‌ಗೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ.

ಟ್ರಂಪ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ

ಟ್ರಂಪ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ

ಇದೀಗ ಮೇರಿ ಟ್ರಂಪ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಟ್ರಂಪ್ ಹಿರಿಯ ಸಹೋದರಿ ಮರಿಯಾನ್ನೆ ಟ್ರಂಪ್ ಬ್ಯಾರಿ ಆಡಿದ್ದ ಮಾತುಗಳನ್ನು ಗುಟ್ಟಾಗಿ ರೆಕಾರ್ಡ್ ಮಾಡಿದ್ದ ಮೇರಿ ಟ್ರಂಪ್ ಈಗ ರಿಲೀಸ್ ಮಾಡಿದ್ದಾರೆ. ಅಂದಹಾಗೆ ಟ್ರಂಪ್ ಕುರಿತು ಅವರ ಸಹೋದರಿ ಈ ಮಾತುಗಳನ್ನು 2018 ಮತ್ತು 2019ರ ನಡುವೆ ಆಡಿದ್ದರು ಎನ್ನಲಾಗಿದೆ.

ಅಮೆರಿಕ ಅಂಧಕಾರದಲ್ಲಿ ಎಂದಿದ್ದರು ಬಿಡೆನ್..!

ಅಮೆರಿಕ ಅಂಧಕಾರದಲ್ಲಿ ಎಂದಿದ್ದರು ಬಿಡೆನ್..!

ಅಮೆರಿಕದಲ್ಲಿ ಹಬ್ಬಿರುವ ಅಂಧಕಾರವನ್ನು ಕೊನೆಗೊಳಿಸಬೇಕಿದೆ ಎಂದು ಜೋ ಬಿಡೆನ್ ಕೆಲದಿನಗಳ ಹಿಂದೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಡೆಮಾಕ್ರಟಿಕ್‌ ಪಕ್ಷದ ರಾಷ್ಟ್ರೀಯ ಸಮಾವೇಶದ ಕೊನೆಯ ದಿನ ಮಾತನಾಡಿದ್ದ ಜೋ ಬಿಡೆನ್, ಡೊನಾಲ್ಡ್ ಟ್ರಂಪ್ ಆಡಳಿತದ ವಿರುದ್ಧ ಹರಿಹಾಯ್ದಿದ್ದರು.

ಅಲ್ಲದೆ ಅಮೆರಿಕ ಅಂಧಕಾರದಲ್ಲಿದೆ ಎಂಬ ಗಂಭೀರ ಆರೋಪ ಕೂಡ ಮಾಡಿದ್ದರು.

ಟ್ರಂಪ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು

ಟ್ರಂಪ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು

ಬಿಡೆನ್ ಮಾತ್ರವಲ್ಲದೆ ಮಾಜಿ ಅಧ್ಯಕ್ಷ ಒಬಾಮಾ, ಕ್ಲಿಂಟನ್ ಸೇರಿದಂತೆ ಘಟಾನುಘಟಿ ನಾಯಕರೇ ಟ್ರಂಪ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.

ಇಂತಹ ಹೊತ್ತಲ್ಲೇ ಟ್ರಂಪ್ ವಿರುದ್ಧ ಅವರ ಸಹೋದರಿಯೇ ಆರೋಪ ಮಾಡಿರುವ ಆಡಿಯೋ ರಿಲೀಸ್ ಆಗಿದೆ. ಇದು ಟ್ರಂಪ್‌ಗೆ ಏಟಿನ ಮೇಲೆ ಏಟು ನೀಡುತ್ತಿದ್ದು, ಅಧ್ಯಕ್ಷೀಯ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಉಂಟುಮಾಡುವ ಮುನ್ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+