ಮೋದಿಯವರ ಮೇಲೇಕೆ ಡೊನಾಲ್ಡ್ ಟ್ರಂಪ್ ಗೆ ಮುನಿಸು?

ವಾಷಿಂಗ್ಟನ್ ಡಿಸಿ, ಫೆಬ್ರವರಿ 27: ಅಮೆರಿಕದ ಹಾರ್ಲೆ ಡೆವಿಡ್ಸನ್ ಬೈಕ್ ಗಳನ್ನು ಆಮದು ಮಾಡಿಕೊಳ್ಳುವ ಸಮಯದಲ್ಲಿ ಭಾರತ ನೀಡಬೇಕಿದ್ದ ಶೇ.100 ಆಮದು ಸುಂಕವನ್ನು ಶೇ.50ಕ್ಕೆ ಇಳಿಕೆ ಮಾಡಿರುವ ಕುರಿತು ಡೊನಾಲ್ಡ್ ಟ್ರಂಪ್ ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಟ್ರಂಪ್, ಮೋದಿಯವರ ಮಅತಿನ ಶೈಲಿಯನ್ನು ಅಣಕಿಸಿ ಸುದ್ದಿಯಾಗಿದ್ದರು. ಆದರೆ ಈ ಬಾರಿ ಅವರ ನಡೆಯನ್ನು ಟೀಕಿಸಿ ಸುದ್ದಿಯಾಗಿದ್ದಾರೆ.

ಈ ಕುರಿತು ವಾಷಿಂಗ್ಟನ್ ಡಿಸಿ ಯಲ್ಲಿ ಮಾತನಾಡುತ್ತಿದ್ದ ಟ್ರಂಪ್, ಪ್ರಧಾನಿ ನರೇಂದ್ರ ಮೋದಿಯವರನ್ನು ಅಣಕಿಸಿದರು.

'ನರೇಂದ್ರ ಮೋದಿ ಬಹಳ ಒಳ್ಳೆಯ ಮನುಷ್ಯ. ಆದರೆ ಅವರಿಂದ ನಮಗೆ ಏನೂ ಉಪಯೋಗವಿಲ್ಲ' ಎಂದು ಟ್ರಂಪ್ ವ್ಯಂಗ್ಯವಾಗಿ ಹೇಳಿದ್ದಾರೆ. ಹಾರ್ಲೆ ಡೆವಿಡ್ಸನ್ ಬೈಕ್ ಗಳನ್ನು ಭಾರತ ಆಮದು ಮಾಡಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ಎರಡು ವಾರಗಳಲ್ಲಿ ಟ್ರಂಪ್, ಎರಡನೇ ಬಾರಿ ಮಾತನಾಡಿದ್ದು, ಪ್ರಧಾನಿ ನರೇಂದ್ರ ಮೋದಿಯವರನ್ನು ಅಣಕಿಸಲು ಈ ವಿಷಯವನ್ನು ಬಳಸಿಕೊಂದಿದ್ದಾರೆ.

Trump says PM Modi 'is a beautiful man', then mimics him

"ಪ್ರಧಾನಿ ನರೇಂದ್ರ ಮೋದಿ ಸುಂದರವಾದ ಮನುಷ್ಯ. ಅವರು ಒಂದು ದಿನ ನನಗೆ ಕರೆ ಮಾಡಿ ಅಷ್ಟೇ ಸುಂದರವಾಗಿ ಹೇಳಿದರು. ಹಬಾರ್ಲಿ ಡೆವಿಡ್ಸನ್ ಬೈನಿಕ ಮೇಲೆ ಕೇವಲ ಶೇ.75 ಆಮದು ಸುಂಕವನ್ನು ನೀಡುತ್ತೇವೆ. ಕೆಲ ದಿನಗಳ ನಂತರ ಅವರೇ ಹೇಳಿದರು, ಶೇ.50 ಆಮದು ಸುಂಕವನ್ನಷ್ಟೇ ಕೊಡುತ್ತೇವೆ...ಎಂದು. ಇದಕ್ಕೆ ನಾನೇನು ಹೇಳಲಿ? ಭಾರತದಿಂದ ಮೋಟಾರ್ ಸೈಕಲ್ ವೊಂದನ್ನು ಆಮದು ಮಾಡಿಕೊಂಡರೆ ನಮಗೆ ಸಿಗುವುದು ಶೇ.0 ಲಾಭವಷ್ಟೇ!" ಎಂದು ಲೇವಡಿ ಮಾಡಿದ್ದಾರೆ ಟ್ರಂಪ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+