ಅಮೆರಿಕದಲ್ಲಿ ಆಸ್ಟ್ರಾಜೆನೆಕಾ ಲಸಿಕೆ 3ನೇ ಹಂತದ ಪ್ರಯೋಗಕ್ಕೆ ಸಿದ್ಧ: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್, ಸೆಪ್ಟೆಂಬರ್ 1: ಅಮೆರಿಕದಲ್ಲಿ ಆಸ್ಟ್ರಾಜೆನೆಕಾ ಕೊರೊನಾ ಲಸಿಕೆ ಮೂರನೇ ಹಂತದ ಪ್ರಯೋಗಕ್ಕೆ ಸಿದ್ಧವಾಗಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

Recommended Video

      Indira Gandhi 1978ರಲ್ಲಿ Chikkamagalur ನಲ್ಲಿ ಗೆಲ್ಲಲು Pranab Mukarjee ಕಾರಣ |Oneindia Kannada

      ''ಈ ಲಸಿಕೆಗೆ ಅನುಮತಿ ನೀಡಲು ಕೊನೆಯ ಘಟ್ಟ ಇದಾಗಿದೆ. ಆಸ್ಟ್ರಾಜೆನೆಕಾ ಕೊರೊನಾ ಲಸಿಕೆಯು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಸಿದ್ಧವಾಗಿದ ಎಂದು ಹೇಳಲು ಇಷ್ಟ ಪಡುತ್ತೇನೆ.

      ಮೂರನೇ ಹಂತದ ಪ್ರಯೋಗವು ಕೂಡ ಅಂತಿಮ ಹಂತದಲ್ಲಿದೆ. ಇದು ಸಾಧ್ಯವೇ ಇಲ್ಲ ಎಂದುಕೊಂಡಿರುವ ಜನರ ಎದುರೇ ಮಾಡಿ ತೋರಿಸುತ್ತಿದ್ದೇವೆ'' ಎಂದು ಟ್ರಂಪ್ ಹೇಳಿದ್ದಾರೆ.

      ಅಮೆರಿಕದಲ್ಲಿ 30 ಸಾವಿರ ಸ್ವಯಂಸೇವಕರ ಮೇಲೆ ಲಸಿಕೆ ಪ್ರಯೋಗ ನಡೆಯುತ್ತಿದೆ.18 ವರ್ಷದ ಆಸುಪಾಸಿನಲ್ಲಿರುವವರು ಈ ಪ್ರಯೋಗಕ್ಕೆ ಒಳಗಾಗಿದ್ದಾರೆ.

      2021ರ ವೇಳೆಗೆ 30 ಕೋಟಿಯಷ್ಟು ಡೋಸ್

      2021ರ ವೇಳೆಗೆ 30 ಕೋಟಿಯಷ್ಟು ಡೋಸ್

      ಅಮೆರಿಕದಲ್ಲಿ ಪ್ರಯೋಗಗಳ ವೇಗ ಹೆಚ್ಚಳದ ಭಾಗವಾಗಿ ಕೊವಿಡ್ ಲಸಿಕೆ ಮೂರನೇ ಹಂತದ ಪ್ರಯೋಗಗಳತ್ತ ಸಾಗಿದೆ. 2021ರ ಜನವರಿಗೆ ಕೊವಿಡ್ 19ಗೆ ಪರಿಣಾಮಕಾರಿ ಲಸಿಕೆಯನ್ನು 30 ಕೋಟಿ ಡೋಸ್‌ಗಳಷ್ಟು ಪೂರೈಕೆ ಮಾಡುವ ಗುರಿ ಹೊಂದಿದೆ.

      ಯಾವ್ಯಾವ ಲಸಿಕೆ ಕ್ಲಿನಿಕಲ್ ಟ್ರಯಲ್ ನಡೆಸುತ್ತಿವೆ

      ಯಾವ್ಯಾವ ಲಸಿಕೆ ಕ್ಲಿನಿಕಲ್ ಟ್ರಯಲ್ ನಡೆಸುತ್ತಿವೆ

      ಜಗತ್ತಿನಾದ್ಯಂತ ಕೊವಿಡ್ ಲಸಿಕೆ ಪ್ರಯೋಗಗಳ ಪೈಕಿ ಆಸ್ಟ್ರಾಜೆನೆಕಾ, ಮಾಡೆರ್ನಾ ಇಂಕ್ ಪಿಫೈಜರ್ ಸಂಸ್ಥೆಗಳ ಲಸಿಕೆಗಳು ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸುತ್ತಿವೆ.

      30 ಸಾವಿರ ಸ್ವಯಂ ಸೇವಕರು ಭಾಗಿ

      30 ಸಾವಿರ ಸ್ವಯಂ ಸೇವಕರು ಭಾಗಿ

      18 ವರ್ಷ ವಯಸ್ಸು ಮೇಲ್ಪಟ್ಟವರು ಸುಮಾರು 30 ಸಾವಿರ ಜನರನ್ನು ಆಸ್ಟ್ರಾಜೆನೆಕಾ ಕೊರೊನಾ ಲಸಿಕೆಯ ಪ್ರಯೋಗಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ವಿವಿಧ ಪ್ರಾಂತ್ಯಗಳಿಂದ ಬಂದಿರುವವರು ಬೇರೆ ಬೇರೆ ಸಮುದಾಯ, ಜನಾಂಗದ ಆರೋಗ್ಯವಂತರು ಅಥವಾ ಕಾಯಿಲೆಗಳಿದ್ದರೂ ಆರೋಗ್ಯ ಸ್ಥಿತಿ ನಿಯಂತ್ರಣ ಹೊಂದಿರುವವರು, ಎಚ್‌ಐವಿ ಇರುವವರು, ಕೊರೊನಾ ಸೋಂಕಿಮ ಪರಿಣಾಮಗಳಿಗೆ ಒಳಗಾಗುವ ಹಂತದಲ್ಲಿರುವವರೂ ಪ್ರಯೋಗಗಳಿಗೆ ಒಳಗಾಗುತ್ತಿದ್ದಾರೆ.

      ಮೂರನೇ ಹಂತದ ಕ್ಲಿನಿಕಲ್ ಟ್ರಯಲ್

      ಮೂರನೇ ಹಂತದ ಕ್ಲಿನಿಕಲ್ ಟ್ರಯಲ್

      ಆಸ್ಟ್ರಾಜೆನೆಕಾದ ಕೊವಿಡ್ ಲಸಿಕೆ ಅಮೆರಿಕದಲ್ಲಿ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ತಲುಪಿದೆ. ಹಾಗೂ ಇನ್ನೇನು ಅಂತಿಮ ಹಂತಗಳಲ್ಲಿರುವ ಹಲವು ಲಸಿಕೆಗಳ ಸಾಲಿಗೆ ಸೇರ್ಪಡೆಯಾಗಲಿದೆ. ಜನರು ಅಸಾಧ್ಯವೆಂದೇ ತಿಳಿದಿರುವ ಕಾರ್ಯಗಳನ್ನು ನಾವು ಅಮೆರಿಕದಲ್ಲಿ ನಡೆಸುತ್ತಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+