App Ban: ಭಾರತದ ಹಾದಿ ತುಳಿಯುತ್ತಾ ಅಮೆರಿಕ..?

ವಾಷಿಂಗ್ಟನ್, ಆ.2: ಟಿಕ್‌ಟಾಕ್‌ಗೆ ಭಾರತ ಗುನ್ನಾ ಇಟ್ಟಿದ್ದೇ ಇಟ್ಟಿದ್ದು, ಇಡೀ ಜಗತ್ತು ಈ ಚೀನಾ ಮೇಡ್ ಆ್ಯಪ್ ವಿರುದ್ಧ ತಿರುಗಿಬಿದ್ದಿದೆ. ಇದೀಗ ಚೀನಾಗೆ ಗುನ್ನಾ ಇಡುವ ಸರದಿ ಅಮೆರಿಕದ್ದು. ಡೊನಾಲ್ಡ್ ಟ್ರಂಪ್ ಚೀನಾ ಮೂಲದ ಟಿಕ್‌ಟಾಕ್ ಆ್ಯಪ್ ಬ್ಯಾನ್ ಮಾಡುವ ಬಗ್ಗೆ ಮಾತನಾಡಿದ್ದಾರೆ. ಮೊದಲೇ ಚೀನಿ ವೈರಸ್‌ನಿಂದ ಅಮೆರಿಕ ನಲುಗಿಹೋಗಿದೆ.

ಟ್ರಂಪ್‌ಗೆ ಅಧ್ಯಕ್ಷೀಯ ಚುನಾವಣೆಗೆ ಮುನ್ನಾ ಚೀನಿ ವೈರಸ್ ಕೊರೊನಾ ಕೊಡಬಾರದ ಕಷ್ಟ ಕೊಡ್ತಿದೆ. ಇದೆಲ್ಲದರ ಪರಿಣಾಮ ಚೀನಾ ಅಂದರೆ ಸಾಕು ಕೆಂಡವಾಗುವ ಟ್ರಂಪ್, ಭಾರತದಂತೆ ಅಮೆರಿಕದಲ್ಲೂ ಟಿಕ್‌ಟಾಕ್‌ಗೆ ಕೊನೇ ಮೊಳೆ ಹೊಡೆಯಲು ಮುಂದಾಗಿದ್ದಾರೆ.

ನಾವು ಟಿಕ್‌ಟಾಕ್‌ನತ್ತ ಗಮನಹರಿಸಿದ್ದು ಟಿಕ್‌ಟಾಕ್ ಬ್ಯಾನ್ ಮಾಡುವ ಚಿಂತನೆ ನಡೆಸುತ್ತಿದ್ದೇವೆ ಎಂದಿದ್ದಾರೆ. ನಮ್ಮ ಬಳಿ ಒಂದೆರಡು ಆಯ್ಕೆ ಇದೆ, ಮತ್ತಷ್ಟು ಪರ್ಯಾಯ ಆಯ್ಕೆಗಳನ್ನು ಎದುರು ನೋಡುತ್ತಿದ್ದೇವೆ ಎನ್ನುವ ಮೂಲಕ ಚೀನಾ ಬುಡಕ್ಕೆ ಬಾಂಬ್ ಇಟ್ಟಿದ್ದಾರೆ ಟ್ರಂಪ್. ಈ ಮೂಲಕ 130 ಮಿಲಿಯನ್‌ಗೂ ಹೆಚ್ಚು ಬಾರಿ ಡೌನ್‌ಲೋಡ್ ಆಗಿರುವ ಅಮೆರಿಕದಲ್ಲೂ ಟಿಕ್‌ಟಾಕ್‌ ಯುಗಕ್ಕೆ ಅಂತ್ಯ ಹಾಡಲು ಟ್ರಂಪ್ ಮುಂದಾಗಿದ್ದಾರೆ.

ರಾಷ್ಟ್ರೀಯ ಭದ್ರತೆಗೆ ಆಪತ್ತು..?

ರಾಷ್ಟ್ರೀಯ ಭದ್ರತೆಗೆ ಆಪತ್ತು..?

ಅಮೆರಿಕ ಯಾವುದರಲ್ಲಿ ಕಾಂಪ್ರಮೈಸ್ ಆದರೂ, ರಾಷ್ಟ್ರದ ಭದ್ರತೆ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಹೇಳಿಕೆ ನೀಡಿದ್ದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೋ, ಟಿಕ್‌ಟಾಕ್ ಸೇರಿದಂತೆ ಚೀನಾ ಮೂಲದ ಆ್ಯಪ್‌ಗಳ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ಚೀನಿ ಆ್ಯಪ್‌ ಬಳಕೆಯಿಂದ ಅಮೆರಿಕದ ಭದ್ರತೆಗೆ ಅಪಾಯವಿದೆ ಅಂತಾ ಹೇಳಿದ್ದರು.

ಕಾಂಗ್ರೆಸ್‌ನ ಸದಸ್ಯರು ಕೂಡ ಇದೇ ಅಭಿಪ್ರಾಯ

ಕಾಂಗ್ರೆಸ್‌ನ ಸದಸ್ಯರು ಕೂಡ ಇದೇ ಅಭಿಪ್ರಾಯ

ಪಾಂಪಿಯೋ ಹೇಳಿಕೆ ಬೆನ್ನಲ್ಲೇ ಅಮೆರಿಕ ಕಾಂಗ್ರೆಸ್‌ನ ಸದಸ್ಯರು ಕೂಡ ಇದೇ ಅಭಿಪ್ರಾಯ ಮಂಡಿಸಿದ್ದರು. ಚೀನಾ ಕಮ್ಯುನಿಸ್ಟ್ ಪಕ್ಷದ ವಿದೇಶಾಂಗ ನೀತಿಗೆ ಅನುಗುಣವಾಗಿ ಟಿಕ್‌ಟಾಕ್ ಆ್ಯಪ್‌ ಬಳಕೆದಾರರ ಮಾಹಿತಿ ನಿರ್ವಹಿಸುತ್ತಿದೆ ಕಾಂಗ್ರೆಸ್ ಸದಸ್ಯರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಅಮೆರಿಕನ್ನರ ಸುರಕ್ಷತೆ ದೃಷ್ಟಿಯಿಂದ ನಿರ್ಣಾಯಕ ಕ್ರಮ ಅನಿವಾರ್ಯ ಎಂದು ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಟ್ರಂಪ್ ಟಿಕ್‌ಟಾಕ್ ಆ್ಯಪ್‌ಗೆ ತವರು ಮನೆಯ ದಾರಿ ತೋರಿಸಲು ಮುಂದಾಗಿದ್ದಾರೆ.

ಭಾರತದ ಕ್ರಮವೇ ಮಾದರಿ..?

ಭಾರತದ ಕ್ರಮವೇ ಮಾದರಿ..?

ಭಾರತ ಕೂಡ ಇದೇ ರೀತಿ ಚೀನಿ ಆ್ಯಪ್‌ಗಳ ಬಗ್ಗೆ ಗುಮಾನಿ ವ್ಯಕ್ತಪಡಿಸಿ, ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ 59 ಚೀನಿ ಆ್ಯಪ್‌ಗಳನ್ನು ಭಾರತದಿಂದ ಉಡಾಯಿಸಿತ್ತು. ಹೀಗೆ ಆ್ಯಪ್‌ ಬ್ಯಾನ್ ಮಾಡಿದ ನಂತರ ಚೀನಾ ಕೊತಕೊತ ಕುದಿಯುತ್ತಿದೆ. ಭಾರತದ ಗಡಿಯಲ್ಲಿ ಕಿರಿಕ್ ಮಾಡಿದ್ದ ಸರಿಯಾಗೇ ಏಟು ತಿಂದಿದೆ. ಇದರ ಮಧ್ಯೆ ವಿಶ್ವದಾದ್ಯಂತ ಚೀನಾ ಆ್ಯಪ್‌ಗಳ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಅಮೆರಿಕ ಕೂಡ ಇದೇ ಹಾದಿ ತುಳಿಯುತ್ತಿದೆ. ಬ್ರಿಟನ್ ಕೂಡ ಚೀನಿ ಆ್ಯಪ್‌ಗಳ ವಿರುದ್ಧ ಕ್ರಮಕ್ಕೆ ತುದಿಗಾಲಲ್ಲಿ ನಿಂತಿದೆ.

ಇತರೆ ದೇಶಗಳಲ್ಲೂ ಬ್ಯಾನ್ ಆಗುವ ಭೀತಿ

ಇತರೆ ದೇಶಗಳಲ್ಲೂ ಬ್ಯಾನ್ ಆಗುವ ಭೀತಿ

ಭವಿಷ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಜಪಾನ್ ಕೂಡ ಚೀನಾ ಆ್ಯಪ್‌ಗಳನ್ನ ಮನೆ ಕಳುಹಿಸಲು ಸಿದ್ಧತೆ ನಡೆಸಿವೆ. ಇದು ಕೇವಲ ಆ್ಯಪ್‌ಗಳಿಗೆ ಸೀಮಿತವಾಗಿರದೆ, ಚೀನಾ ಮೂಲದ ವಸ್ತುಗಳಿಗೂ ಅನ್ವಯಿಸುವ ಸಾಧ್ಯತೆ ಇದೆ. ಹೀಗಾಗಿ ಚೀನಾ ನಾಯಕರು ಕಂಗಾಲಾಗಿ ಹೋಗಿದ್ದಾರೆ. ಒಟ್ಟಾರೆ ಭಾರತ ಕೈಗೊಂಡ ಕ್ರಮ ವಿಶ್ವಕ್ಕೇ ಮಾದರಿಯಾಗುತ್ತಿದ್ದು, ಕಪಟಿ ಚೀನಾಗೆ ಬುದ್ಧಿ ಕಲಿಸಲು ಇಡೀ ಜಗತ್ತೇ ಒಂದಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+