ಜೋ ಬಿಡನ್‌ ಜತೆಗಿನ ವರ್ಚುವಲ್ ಸಂವಾದದಿಂದ ಹಿಂದೆ ಸರಿದ ಟ್ರಂಪ್

ವಾಷಿಂಗ್ಟನ್‌, ಅಕ್ಟೋಬರ್ 10: ಅಮೆರಿಕದಲ್ಲಿ ಅ.15 ರಂದು ನಡೆಯಬೇಕಿದ್ದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಗಳ ನಡುವಿನ ಚರ್ಚೆಯಿಂದ ಟ್ರಂಪ್ ಹಿಂದೆ ಸರಿದಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮಹತ್ವದ್ದಾಗಿರುವ ಅಧ್ಯಕ್ಷೀಯ ಅಭ್ಯರ್ಥಿಗಳ ಚರ್ಚೆ ಪೈಕಿ ಎರಡನೇ ಕಾರ್ಯಕ್ರಮ ನಡೆಯುವುದು ಅನುಮಾನವಾಗಿದೆ.

ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಮತ್ತು ಡೆಮಾಕ್ರಟಿಕ್‌ ಪಕ್ಷದ ಜೋ ಬಿಡೆನ್‌ ನಡುವೆ ಎರಡನೇ ಚರ್ಚೆ ಅ.15ರಂದು ನಿಗದಿಯಾಗಿತ್ತು. ಟ್ರಂಪ್‌ ಕೊರೊನಾ ಸೋಂಕಿಗೆ ತುತ್ತಾಗಿರುವ ಕಾರಣ ಅಭ್ಯರ್ಥಿಗಳ ಖುದ್ದು ಹಾಜರಿ ಬದಲಾಗಿ ವರ್ಚುವಲ್‌ ಚರ್ಚೆ ನಡೆಸಬೇಕೆಂದು ಟ್ರಂಪ್‌ ಪರವಾಗಿ ಅಧ್ಯಕ್ಷೀಯ ಚರ್ಚೆ ನಡೆಸಿಕೊಡುವ ಆಯೋಗಕ್ಕೆ ಮನವಿ ಮಾಡಲಾಗಿತ್ತು.

Second Presidential Debate Between Trump And Biden Cancelled

ಆಯೋಗ ಅದಕ್ಕೆ ಸ್ಪಂದಿಸಿತ್ತು ಕೂಡ. ಆದರೆ ಪುನಃ ಟ್ರಂಪ್‌ ತಂಡವು ಮುಖಾಮುಖಿ ಚರ್ಚೆಗೆ ಅವಕಾಶ ನೀಡಬೇಕೆಂದು ಕೋರಿದ್ದು, ಇದನ್ನು ಆಯೋಗ ತಳ್ಳಿಹಾಕಿದೆ. ವರ್ಚುವಲ್‌ ಚರ್ಚೆಯಲ್ಲಿ ಭಾಗವಹಿಸಲು ಟ್ರಂಪ್‌ ನಿರಾಕರಿಸಿರುವುದರಿಂದ ಎರಡನೇ ಚರ್ಚೆ ನಡೆಯುವುದು ಅನುಮಾನವಾಗಿದೆ.

ವರ್ಚುವಲ್ ಆಗಿ ಆಯೋಜನೆಯಾಗಿದ್ದ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ ಬಳಿಕ, ಟ್ರಂಪ್ ಅವರು ಜೋ ಬಿಡನ್ ಅವರೊಂದಿಗೆ ಎರಡು ಮುಖಾಮುಖಿ ಚರ್ಚೆ ಬಯಸಿದ್ದಾರೆ. ಅ.22 ರಂದು ಒಂದು ಚರ್ಚೆ ಮತ್ತು ಚುನಾವಣೆಗೂ ಮೊದಲು ಕೊನೆಯ ಸಭೆ ನಡೆಯಬೇಕು ಇದು ನೇರಾನೇರ ಚರ್ಚೆಯಾಗಿರಬೇಕು ಎಂದು ಹೇಳಿದ್ದಾರೆ.

ಟ್ರಂಪ್ ಆರೋಗ್ಯದ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ಶ್ವೇತಭವನ ವೈದ್ಯರ ತಂಡ, ಟ್ರಂಪ್ ಅವರು ಇದೇ ಶನಿವಾರದಿಂದ ಪ್ರಚಾರ ಸಭೆಗಳಲ್ಲಿ ಭಾಗವಹಿಸಬಹುದು ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+