ಲೈಂಗಿಕ ಆರೋಪ ಹೊತ್ತ ಅಧಿಕಾರಿಗೆ ಬೋನಸ್ ಕೊಟ್ಟು ರಕ್ಷಿಸಿದ್ದ ಗೂಗಲ್!
ನ್ಯೂಯಾರ್ಕ್, ಅಕ್ಟೋಬರ್ 26: ಭಾರತದಲ್ಲಿ ಮೀಟೂ ಅಭಿಯಾನ ಈಗ ತುಂಬಾ ಪ್ರಚಾರ ಪಡೆದುಕೊಳ್ಳುತ್ತಿದೆ. ಆದರೆ, ಜಾಗತಿಕವಾಗಿ ಈ ಬಗ್ಗೆ ಈ ಮುಂಚೆ ಕೂಡಾ ಜಾಗೃತಿ ಮೂಡಿಸಲಾಗಿತ್ತು. ಸರ್ಚ್ ಇಂಜಿನ್ ದೈತ್ಯ ಗೂಗಲ್ ಸಂಸ್ಥೆ ಕೂಡಾ ಲೈಂಗಿಕ ಕಿರುಕುಳ ಆರೋಪ ಪ್ರಕರಣಗಳನ್ನು ಎದುರಿಸಿತ್ತು ಎಂದು ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.
ಈ ರೀತಿ ಆರೋಪ ಎದುರಿಸುತ್ತಿದ್ದ ಸುಮಾರು 48 ಸಿಬ್ಬಂದಿಗಳನ್ನು ಕಳೆದ 2 ವರ್ಷಗಳ ಅವಧಿಯಲ್ಲಿ ವಜಾ ಮಾಡಲಾಗಿದೆ ಎಂದಿದ್ದಾರೆ. ಆದರೆ, 2014ರಲ್ಲಿ ಲೈಂಗಿಕ ಆರೋಪ ಹೊತ್ತುಕೊಂಡಿದ್ದ ಉನ್ನತಾಧಿಕಾರಿ ಆಂಡಿ ರುಬಿನ್ ಅವರಿಗೆ ಭರ್ಜರಿ ಎಕ್ಸಿಟ್ ಪ್ಯಾಕೇಜ್ ಕೊಟ್ಟು ಕಳಿಸಿದ ಉದಾಹರಣೆ ಕಣ್ಣಮುಂದಿದೆ.
ಫಾದರ್ ಆಫ್ ಆಂಡ್ರಾಯ್ಸ್ ಎಂದೇ ಕರೆಸಿಕೊಳ್ಳುವ ಗೂಗಲ್ ನ ಉನ್ನತಾಧಿಕಾರಿ, ಆಂಡ್ರಾಯ್ಡ್ ಮೊಬೈಲ್ ಸಾಫ್ಟ್ ವೇರ್ ವಿನ್ಯಾಸಕ ಆಂಡಿ ರುಬಿನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿತ್ತು. ಆದರೆ, 2014ರಲ್ಲೇ ಗೂಗಲ್ ಈ ಕೇಸ್ ಸೆಟ್ಲ್ ಮಾಡಿಕೊಂಡಿಬಿಟ್ಟಿತ್ತು.

ರುಬಿನ್ ಗೆ ಸಿಕ್ಕಿತ್ತು ಭರ್ಜರಿ ಎಕ್ಸಿಟ್ ಪ್ಯಾಕೇಜ್
ಕಳೆದ 2 ವರ್ಷಗಳಲ್ಲಿ 13 ಹಿರಿಯ ಅಧಿಕಾರಿಗಳೂ ಸೇರಿದಂತೆ 48 ನೌಕರರನ್ನು ವಜಾ ಮಾಡಲಾಗಿದೆ. ಕಂಪನಿಯಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ನಾವು ಬದ್ಧರಾಗಿದ್ದೇವೆ. ವಜಾಗೊಂಡ ಸಿಬ್ಬಂದಿ ಹೆಚ್ಚುವರಿ ನಗದು ಮೊತ್ತವನ್ನು ನೀಡಿ ಪ್ರಕರಣವನ್ನು ಸುಖಾಂತ್ಯಗೊಳಿಸಲಾಗಿದೆ ಎಂದು ಗೂಗಲ್ ಸಂಸ್ಥೆ ಹೇಳಿದೆ.

ರುಬಿನ್ ಮೇಲೆ ಓರಲ್ ಸೆಕ್ಸ್ ಆರೋಪ
2013ರಲ್ಲಿ ಗೂಗಲ್ ನಲ್ಲಿ ಸಹೋದ್ಯೋಗಿಯಾಗಿದ್ದ ಮಹಿಳೆಯೊಬ್ಬರ ಜತೆ ರುಬಿನ್ ಅನೈತಿಕ ಸಂಬಂಧ ಹೊಂದಿದ್ದರು. ಆದರೆ, ರುಬಿನ್ ಒಮ್ಮೆ ನನ್ನನ್ನು ಬಲವಂತಪಡಿಸಿ ಓರಲ್ ಸೆಕ್ಸ್ ಮಾಡುವಂತೆ ಹೋಟೆಲ್ ರೂಮಿನಲ್ಲಿ ಒತ್ತಾಯಪಡಿಸಿದರು.. ಈ ಬಗ್ಗೆ ಇನ್ನಿಬ್ಬರು ಉನ್ನತಾಧಿಕಾರಿಗಳಿಗೆ ಗೊತ್ತಿತ್ತು. ಆದರೆ, ತಕ್ಷಣಕ್ಕೆ ಕ್ರಮ ಜರುಗಿಸಿರಲಿಲ್ಲ ಎಂದು ಮಹಿಳೆ ಆರೋಪಿಸಿದ್ದರು. ಆದರೆ, ನಂತರ ಈ ಬಗ್ಗೆ ಆಂತರಿಕ ಸಮಿತಿ ದೂರು ದಾಖಲಿಸಿಕೊಂಡು, ತನಿಖೆ ನಡೆಸಿತ್ತು. ಭಾರಿ ಒತ್ತಡ ಕೇಳಿ ಬಂದಿದ್ದರಿಂದ ಅಂದಿನ ಸಿಇಒ ಲ್ಯಾರಿ ಪೇಜ್ ಅವರು, ರುಬಿನ್ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದರು.

ಆಂಡಿ ರುಬಿನ್ ಬಗ್ಗೆ ಸರಿಯಾದ ಪ್ರತಿಕ್ರಿಯೆ ಇಲ್ಲ
ಮಹಿಳೆಯರ ಸುರಕ್ಷತೆಗಾಗಿ ಮತ್ತು ಲೈಂಗಿಕ ಕಿರುಕುಳ ಆರೋಪ ಎದುರಿಸುವ ನೌಕರರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಕಷ್ಟು ನಿಯಮಾವಳಿಗಳನ್ನು ರೂಪಿಸಿದ್ದೇವೆ. 2015ರಲ್ಲೇ ಗೂಗಲ್ ಈ ರೀತಿ ನಿಯಮಾವಳಿಗಳನ್ನು ಅಳವಡಿಸಿಕೊಂಡಿದೆ ಎಂದು ಗೂಗಲ್ನ ಸಿಇಒ ಸುಂದರ್ ಪಿಚೈ ಹೇಳಿದರು. ಆದರೆ, ಆಂಡ್ರಾಯ್ಡ್ ನ ಮಾಜಿ ಎಕ್ಸಿಕ್ಯೂಟಿವ್ ಆಂಡಿ ರುಬಿನ್ ಮೇಲೆ ಆರೋಪ ಹೊರೆಸಿ ಟೈಮ್ಸ್ ನಲ್ಲಿ ಬಂದಿರುವ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಪಿಚೈ ನಿರಾಕರಿಸಿದ್ದಾರೆ. ಇಂಥ ಸುದ್ದಿಗಳನ್ನು ಓದಲು ಕಷ್ಟವಾಗುತ್ತದೆ ಎಂದಷ್ಟೆ ಉತ್ತರಿಸಿದ್ದಾರೆ.

ರುಬಿನ್ ಗೆ 90 ಮಿಲಿಯನ್ ಡಾಲರ್ ಎಕ್ಸಿಟ್ ಪ್ಯಾಕೇಜ್
ರುಬಿನ್ ಗೆ 90 ಮಿಲಿಯನ್ ಡಾಲರ್ ಎಕ್ಸಿಟ್ ಪ್ಯಾಕೇಜ್ ನೀಡಿ ಕಳಿಸಲಾಗಿತ್ತು. ಗೂಗಲ್ ನ ಅಂದಿನ ಸಿಇಒ ಲ್ಯಾರಿ ಪೇಜ್ ಅವರು, ಆಂಡಿ ರುಬಿನ್ ಗೆ ವಿಷ್ ಮಾಡಿ, ಕೋಟ್ಯಂತರ ಬಳಕೆದಾರರನ್ನು ಸೃಷ್ಟಿಸಿದ ರುಬಿನ್ ಅವರ ಆವಿಷ್ಕಾರಕ್ಕೆ ನನ್ನ ಅಭಿನಂದನೆ ಎಂದು ಹೊಗಳಿದ್ದರು.350ಮಿಲಿಯನ್ ಡಾಲರ್ ಮೌಲ್ಯದ ಸ್ಥಿತಿವಂತ ರುಬಿನ್ ಅವರಿಗೆ 2 ಮಿಲಿಯನ್ ಡಾಲರ್ ಪ್ರತಿ ತಿಂಗಳಿನಂತೆ ಸರ್ವೀಸ್ ಪ್ಯಾಕೇಜ್ ನೀಡಿ ಗೂಗಲ್ ಗೌರವಿಸಿದೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications