ಅಮೆರಿಕದಲ್ಲಿ ವರ್ಷಾಂತ್ಯಕ್ಕೆ ಕೊರೊನಾ ಲಸಿಕೆ ಲಭ್ಯ:ಪಿಫೈಜರ್

ವಾಷಿಂಗ್ಟನ್, ಸೆಪ್ಟೆಂಬರ್ 14: ವರ್ಷಾಂತ್ಯದಲ್ಲಿ ಅಮೆರಿಕಕ್ಕೆ ಕೊರೊನಾ ಲಸಿಕೆ ಲಭ್ಯವಾಗಲಿದೆ ಎಂದು ಪಿಫೈಜರ್ ಸಿಇಒ ಮಾಹಿತಿ ನೀಡಿದ್ದಾರೆ.

ಪಿಫೈಜರ್ ಜರ್ಮನ್ ಕಂಪನಿ ಬಯೋಎನ್ಟೆಕ್ ಜೊತೆ ಸೇರಿ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ. ಅಮೆರಿಕದಲ್ಲಿ ಮೂರನೇ ಹಂತದ ಪ್ರಯೋಗವನ್ನು ನಡೆಸುತ್ತಿದೆ.

ಈಗಾಗಲೇ ಸಾವಿರಾರು ಡೋಸ್‌ಗಳನ್ನು ತಯಾರಿಸಲಾಗಿದೆ. ಒಂದೊಮ್ಮೆ ಮೂರನೇ ಹಂತದ ಪ್ರಯೋಗದಲ್ಲಿ ಉತ್ತಮ ಫಲಿತಾಂಶ ಬಂದರೆ ತಕ್ಷಣವೇ ನಾವು ಲಸಿಕೆಯನ್ನು ನೀಡಲು ಸಿದ್ಧರಿರುತ್ತೇವೆ ಎಂದು ಪಿಫೈಜರ್ ಸಿಇಒ ಅಲ್ಬರ್ಟ್ ಬೌರ್ಲಾ ಹೇಳಿದ್ದಾರೆ.

Pfizer CEO Says Americans Could Get Vaccine Before Year End

ಅಕ್ಟೋಬರ್ ವೇಳೆಗೆ ಈ ಲಸಿಕೆ ಸಿದ್ಧವಿರಲಿದೆ. ಈ ಲಸಿಕೆ ಎಷ್ಟು ಪರಿಣಾಮಕಾರಿ ಎಂದು ತೋರಿಸಲು ನಮಗೆ ಕೇವಲ ಒಂದು ತಿಂಗಳು ಸಾಕಷ್ಟು ಎಂದೆನಿಸುತ್ತದೆ. ಮೂರನೇ ಹಂತದ ಪ್ರಯೋಗವನ್ನು ಅಕ್ಟೋಬರ್‌ನಲ್ಲಿ ಕೈಗೊಳ್ಳಳಾಗುತ್ತದೆ ಎಂದು ಅಲ್ಬರ್ಟ್ ತಿಳಿಸಿದ್ದಾರೆ.

ಪ್ರಯೋಗಕ್ಕೆ 30 ಸಾವಿರ ಸ್ವಯಂಸೇವಕರನ್ನು ತೆಗೆದುಕೊಳ್ಳಲಾಗುತ್ತಿದೆ. ಮುಂದಿನ ವಾರದೊಳಗಾಗಿ ಹೆಸರು ನೋಂದಾವಣೆ ಮುಕ್ತಾಯಗೊಳ್ಳಲಿದೆ. ಮತ್ತೆ 14 ಸಾವಿರ ಸ್ವಯಂಸೇವಕರನ್ನು ಸೇರಿಸಿಕೊಳ್ಳಬೇಕಿದೆ.

ನವೆಂಬರ್‌ನಲ್ಲಿ ಅಧ್ಯಕ್ಷೀಯ ಚುನಾವಣೆ ಇರಲಿದ್ದು, ಅಕ್ಟೋಬರ್‌ನಲ್ಲಿಯೇ ಲಸಿಕೆಯನ್ನು ಜನರಿಗೆ ತಲುಪಿಸುವ ಆಲೋಚನೆ ಮಾಡಲಾಗಿದೆ. 180 ವ್ಯಾಕ್ಸಿನ್ ಕ್ಯಾಂಡಿಟೇಟ್‌ಗಳು ಪ್ರಿ ಕ್ಲಿನಿಕಲ್ ಹಂತದಲ್ಲಿವೆ. ಎಂಟು ಲಸಿಕೆಗಳು ಅಂತಿಮ ಹಂತದಲ್ಲಿವೆ.

ಭಾರತದಲ್ಲಿ 8 ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಅದರಲ್ಲಿ ಎರಡು ಮೊದಲನೇ ಹಂತದ ಪ್ರಯೋಗವನ್ನು ಯಶಸ್ವಿಯಾಗಿ ಪೂರೈಸಿ ಎರಡನೇ ಹಂತಕ್ಕೆ ಕಾಲಿಟ್ಟಿದ್ದಾರೆ.

Recommended Video

      ಪ್ರಧಾನಿ ಕಚೇರಿಗೆ ಹೊಸ ಸೇರ್ಪಡೆ Amrapali IAS | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+