Get Updates
Get notified of breaking news, exclusive insights, and must-see stories!

ಟ್ರಂಪ್‌ಗೆ ಮೋಸಗಾರನ ಪಟ್ಟ..? ಗಾಲ್ಫ್‌ನಲ್ಲಿ ಮೋಸ ಮಾಡಿದ್ರಾ ಮಾಜಿ ಅಧ್ಯಕ್ಷ..?

ಅಮೆರಿಕ ಅಧ್ಯಕ್ಷರಾಗಿ 4 ವರ್ಷಗಳ ಕಾಲ ಆಳ್ವಿಕೆ ನಡೆಸಿದ ಅಮೆರಿಕದ ವಿವಾದಾತ್ಮಕ ಅಧ್ಯಕ್ಷ ಟ್ರಂಪ್ ವಿರುದ್ಧ ಇದೀಗ ಮತ್ತೊಂದು ಆರೋಪ ಕೇಳಿಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಜನರು ಟ್ರಂಪ್‌ಗೆ ನೇರಾನೇರ ಮೋಸಗಾರನ ಪಟ್ಟಕಟ್ಟಿದ್ದಾರೆ. 'once a cheater, always a cheater' ಎಂಬ ಶೀರ್ಷಿಕೆಯ ಅಡಿ ವಿಡಿಯೋ ಶೇರ್ ಮಾಡ್ತಿದ್ದಾರೆ. ಅಷ್ಟಕ್ಕೂ ವಿಡಿಯೋದಲ್ಲಿ ಏನಿದೆಯಪ್ಪಾ ಅಂದ್ರೆ, ಟ್ರಂಪ್ ಗಾಲ್ಫ್ ಕೋರ್ಟ್‌ನಲ್ಲಿ ಚೀಟ್ ಮಾಡಿದ್ದಾರೆ ಎನ್ನಲಾದ ಸೀನ್ ರೆಕಾರ್ಡ್ ಆಗಿದೆ.

ಹೌದು, ಟ್ರಂಪ್ ಅಮೆರಿಕ ಅಧ್ಯಕ್ಷೀಯ ಪದವಿ ತೊರೆದು ವೈಟ್‌ಹೌಸ್ ಬಿಟ್ಟು ಹೋಗಿದ್ದಾರೆ. ಹುಟ್ಟುತ್ತಲೇ ಶ್ರೀಮಂತ ಕುಳವಾದ ಟ್ರಂಪ್, ನೆಚ್ಚಿನ ಕ್ರೀಡೆಯಾದ ಗಾಲ್ಫ್ ಆಡುತ್ತಾ ಸಮಯ ಕಳೆಯುತ್ತಿದ್ದಾರೆ. ಇದೇ ರೀತಿ ಅಮೆರಿಕದ ಮಿಯಾಮಿ ಗಾಲ್ಫ್ ಕೋರ್ಟ್ ಒಂದರಲ್ಲಿ ಆಟ ಆಡುವಾಗ ಮೋಸ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.

ಸಾಕ್ಷಿ ಎಂಬಂತೆ ವಿಡಿಯೋ ವೈರಲ್ ಆಗುತ್ತಿದೆ. ಗಾಲ್ಫ್ ಗುಂಡಿ ಪಕ್ಕದಲ್ಲಿ ಬಿದ್ದಿದ್ದ ಗಾಲ್ಫ್ ಬಾಲ್‌ನ ನಿಯಮ ಮೀರಿ ಹೋಲ್‌ಗೆ ತಳ್ಳಿದ್ದಾರೆ. ಇದು ಸ್ಥಳದಲ್ಲಿದ್ದ ಸಹ ಆಟಗಾರರಿಗೆ ಗೊತ್ತಾಗಿದೆ. ತಕ್ಷಣ ಗಾಲ್ಫರ್ ಲ್ಯಾಂಡನ್ ಮೈಕೆಲ್ಸನ್ ಟ್ರಂಪ್‌ರ ವಿಡಿಯೋ ಮಾಡಿದ್ದಾರೆ.

ಟ್ರಂಪ್‌ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್..!

ಟ್ರಂಪ್‌ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್..!

ಅಮೆರಿಕದಲ್ಲಿ ಟ್ರಂಪ್‌ಗೆ ಫ್ಯಾನ್ಸ್ ಇರುವಷ್ಟೇ ವಿರೋಧಿಗಳು ಕೂಡ ಇದ್ದಾರೆ. ಇದೀಗ ಟ್ರಂಪ್ ಮಾಡಿದ್ದಾರೆ ಎನ್ನಲಾದ ಚೀಟಿಂಗ್ ವಿಡಿಯೋ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಮಾರ್ಚ್ 5ರಂದು ವಿಡಿಯೋ ಹಾಕಿದ್ದು, ಅಲ್ಲಿಂದ ಈವರೆಗೂ ಟ್ರೋಲ್ ಆಗುತ್ತಿದೆ. ಟ್ರಂಪ್ ಬಗ್ಗೆ ನಾನಾ ಆರೋಪಗಳನ್ನು, ಅಭಿಪ್ರಾಯಗಳನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಬಗ್ಗೆ ಟ್ರಂಪ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 'once a cheater, always a cheater' ಅಂತೆಲ್ಲಾ ಟ್ರಂಪ್ ಕಾಲು ಎಳೆಯುತ್ತಿದ್ದಾರೆ ಅಮೆರಿಕದ ಮಂದಿ. ಇದಕ್ಕೆ ಹೊರ ದೇಶಗಳ ಜನರು ಕೂಡ ಹೊರತಾಗಿಲ್ಲ, ಒಟ್ಟಾರೆ ಟ್ರಂಪ್ ವಿರೋಧಿ ಪಡೆ ಈ ವಿಡಿಯೋ ನೋಡಿ ಟ್ರೋಲ್‌ಗೆ ಮುಗಿಬಿದ್ದಿದೆ.

ಟ್ರಂಪ್ ಪತ್ನಿಯಿಂದ ವಿಚ್ಛೇದನ..?

ಟ್ರಂಪ್‌ಗೆ ಅಧ್ಯಕ್ಷೀಯ ಚುನಾವಣೆ ಮುಗಿಯುತ್ತಿದ್ದಂತೆ ಶಾಕ್ ಮೇಲೆ ಶಾಕ್ ಸಿಗುತ್ತಿದೆ. ಈಗಾಗಲೇ ಅಧ್ಯಕ್ಷ ಪದವಿ ಕಳೆದುಕೊಂಡು ಒದ್ದಾಡುತ್ತಿರುವ ಟ್ರಂಪ್‌ಗೆ ಪತ್ನಿ ವಿಚ್ಛೇದನ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಹಿಂದೆ ಶ್ವೇತಭವನದ ಅಧಿಕಾರಿಗಳೇ ಟ್ರಂಪ್ ವಿಚ್ಛೇದನದ ಬಗ್ಗೆ ಮಾಹಿತಿ ನೀಡಿದ್ದರು. ಹೀಗೆ ವೈಯಕ್ತಿಕ ಜೀವನದಲ್ಲೂ ಸಾಕಷ್ಟು ಸೋಲುಗಳನ್ನು ಕಾಣುತ್ತಿರುವ ಟ್ರಂಪ್‌ಗೆ ತನ್ನ ಮುದ್ದಿನ ಆಟ ಗಾಲ್ಫ್‌ನಿಂದ ಸಾಕಷ್ಟು ರಿಲ್ಯಾಕ್ಸ್ ಸಿಗುತ್ತಿತ್ತಂತೆ. ಆದರೆ ಗಾಲ್ಫ್‌ನಲ್ಲೂ ಮೋಸ ಮಾಡಿರುವ ಆರೋಪ ಕೇಳಿಬಂದಿದೆ. ಇದಕ್ಕೆ ಯಾವ ರೀತಿ ಸಮಜಾಯಿಷಿ ನೀಡುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಟ್ರಂಪ್ ವಿರುದ್ಧ ಲೀಗಲ್ ಫೈಟ್..?

ಟ್ರಂಪ್ ವಿರುದ್ಧ ಲೀಗಲ್ ಫೈಟ್..?

ಒಂದಲ್ಲ ಎರಡಲ್ಲ, ಡೊನಾಲ್ಡ್ ಟ್ರಂಪ್ ಮಾಡಿಕೊಂಡಿರುವ ಎಡವಟ್ಟುಗಳು ಸಾವಿರಾರು. ಇಡೀ ಅಮೆರಿಕದ ಇತಿಹಾಸದಲ್ಲೇ ಟ್ರಂಪ್ ಅತ್ಯಂತ ವಿವಾದಾತ್ಮಕ ಅಧ್ಯಕ್ಷ ಎಂಬ ಕೆಟ್ಟ ಹೆಸರು ಪಡೆದಿದ್ದಾರೆ. ಈ ಹಿಂದೆ ನಿಕ್ಸನ್ ಅವರನ್ನೇ ವಿವಾದಗಳ ಸರದಾರ ಎನ್ನಲಾಗಿತ್ತು. ಆದರೆ ಈ ಪಟ್ಟವನ್ನೂ ಟ್ರಂಪ್ ಕಸಿದುಕೊಂಡಿದ್ದಾರೆ. ಟ್ರಂಪ್ ಅಧಿಕಾರದಲ್ಲಿ ಇದ್ದಾಗಲೇ ಕಾನೂನು ಹೋರಾಟ ಆರಂಭವಾಗಿತ್ತು. ನೂತನ ಅಧ್ಯಕ್ಷ ಬೈಡನ್ ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಟ್ರಂಪ್ ವಿರುದ್ಧ ಕಾನೂನು ಹೋರಾಟಕ್ಕೆ ಬೈಡನ್ ಪಡೆ ಬಾಹ್ಯಬೆಂಬಲ ನೀಡುತ್ತಿದೆ. ಇಷ್ಟೆಲ್ಲಾ ವಿವಾದಗಳು ತಲೆಮೇಲೆ ಇದ್ದರೂ ಟ್ರಂಪ್ ಬದಲಾಗುವ ಲಕ್ಷಣ ಕಾಣುತ್ತಿಲ್ಲ.

 ‘ಅಮೆರಿಕ ಹೆಸರು ಹಾಳುಮಾಡಿದ್ದಾರೆ’

‘ಅಮೆರಿಕ ಹೆಸರು ಹಾಳುಮಾಡಿದ್ದಾರೆ’

ನವೆಂಬರ್ ಚುನಾವಣೆ ವೇಳೆ ಖಾಸಗಿ ಸಂವಾದದಲ್ಲಿ ಮಾತನಾಡಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ, ಟ್ರಂಪ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕದ ಹೆಸರು ಕೆಡಲು ಟ್ರಂಪ್ ಕಾರಣ ಎಂದಿದ್ದರು. ಇದುವರೆಗೂ ಜಗತ್ತಿಗೆ ತೊಂದರೆ ಆದರೆ ವಾಷಿಂಗ್ಟನ್ ಕಡೆಗೆ ಮುಖ ಮಾಡಿ ನಿಲ್ಲುತ್ತಿದ್ರು, ಮಾಸ್ಕೋ ಬೇಕಿರಲಿಲ್ಲ. ಆದರೆ ಟ್ರಂಪ್ ಎಲ್ಲವನ್ನೂ ಹಾಳು ಮಾಡಿದರು. ಪರಿಣಾಮ ಅಮೆರಿಕ ಹಾಗೂ ಅಮೆರಿಕನ್ನರು ನೂರಾರು ಸಮಸ್ಯೆ ಎದುರಿಸುವಂತಾಗಿತ್ತು ಎಂದಿದ್ದರು. ಹೀಗೆ ರಾಜಕೀಯ ಹಾಗೂ ವೈಯಕ್ತಿಕ ಬದುಕಿನ ಅಲ್ಲೋಲ ಕಲ್ಲೋಲಗಳ ನಡುವೆ ಕ್ರೀಡೆಯಲ್ಲೂ ಬ್ಯಾಡ್ ಬಾಯ್ ಆಗಿದ್ದಾರೆ ಟ್ರಂಪ್.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+