ಅಣ್ವಸ್ತ್ರದೊಂದಿಗೆ ಮತ್ತಷ್ಟು ಅಪಾಯಕಾರಿಯಾಗಿ ಬೆಳೆಯಲಿದೆ ಚೀನಾ ಸೇನೆ: ಅಮೆರಿಕ ಎಚ್ಚರಿಕೆ
ವಾಷಿಂಗ್ಟನ್, ಸೆಪ್ಟೆಂಬರ್ 2: ಭಾರತ ಮತ್ತು ಚೀನಾ ನಡುವಿನ ಸಂಬಂಧ ಹದಗೆಟ್ಟು, ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿಯೇ ಅಮೆರಿಕ ಆಘಾತಕಾರಿ ಸಂಗತಿಯೊಂದನ್ನು ಹೊರಹಾಕಿದೆ. ಇನ್ನು ಕೆಲವೇ ವರ್ಷಗಳಲ್ಲಿ ಚೀನಾ ಅತ್ಯಂತ ಪ್ರಬಲ ಅಣ್ವಸ್ತ್ರ ದೇಶವಾಗಿ ಬೆಳೆಯಲಿದೆ ಎಂದು ಅದು ಎಚ್ಚರಿಕೆ ನೀಡಿದೆ.
Recommended Video
ಭೂಮಿ, ಗಾಳಿ ಹಾಗೂ ಸಮುದ್ರದಲ್ಲಿ ಅಣ್ವಸ್ತ್ರಗಳನ್ನು ನಿಯೋಜನೆ ಮಾಡುವ ಸಾಮರ್ಥ್ಯ ಪಡೆಯುವ ಮೂಲಕ ಅಮೆರಿಕ ಮತ್ತು ರಷ್ಯಾ ಸಾಲಿಗೆ ಸೇರಿಕೊಳ್ಳುವತ್ತ ಸಾಗಿದೆ. ಮುಂದಿನ ದಶಕದ ವೇಳೆಗೆ ಅದು ತನ್ನ ಪರಮಾಣು ಕ್ಷಿಪಣಿ ದಾಸ್ತಾನನ್ನು ದುಪ್ಪಟ್ಟುಗೊಳಿಸಲಿದೆ ಎಂದು ಅದು ಹೇಳಿದೆ.
ಚೀನಾದ ಪರಮಾಣು ಶಕ್ತಿ ಸಾಮರ್ಥ್ಯವು ಕನಿಷ್ಠ ಮಿತಿಯ ಗಾತ್ರವನ್ನೂ ಮೀರಿದಂತೆ ಕಾಣುತ್ತದೆ ಎಂದು ಪೆಂಟಗಾನ್ ಕಾಂಗ್ರೆಸ್‌ಗೆ ಸಲ್ಲಿಸಿರುವ ಸುಮಾರು 200 ಪುಟಗಳ ವಾರ್ಷಿಕ ಚೀನಾ ಸೇನಾ ಶಕ್ತಿ ವರದಿಯಲ್ಲಿ ತಿಳಿಸಲಾಗಿದೆ. ಮುಂದೆ ಓದಿ.

2049ಕ್ಕೆ ಪ್ರಬಲ ಶಕ್ತಿ
ಚೀನಾವು ತನ್ನ ಯುದ್ಧ ಸ್ವರೂಪಿ ಬಾಂಬರ್‌ಗಳನ್ನು ಉನ್ನತೀಕರಣ ಮಾಡುವ ಪ್ರಕ್ರಿಯೆಯಲ್ಲಿ ಬೆಳವಣಿಗೆ ಸಾಧಿಸಿದೆ. ತನ್ನದೇ ವಿಭಿನ್ನ ವ್ಯವಸ್ಥೆಯಲ್ಲಿ ಪರಮಾಣು ಸಿಡಿತಲೆಗಳನ್ನು ಸಾಗಿಸುವ ತಂತ್ರಜ್ಞಾನವನ್ನು ಸಾಧಿಸಿದೆ. ಅಮೆರಿಕದ ಸೇನೆಗೆ ಸರಿಸಮನಾಗಿ ಮತ್ತು ಕೆಲವು ಕ್ಷೇತ್ರಗಳಲ್ಲಿ ಅದನ್ನೂ ಮೀರಿಸುವ ಉದ್ದೇಶದೊಂದಿಗೆ ತನ್ನ ಪರಮಾಣು ಶಕ್ತಿಯನ್ನು ಆಧುನೀಕರಣ ಮತ್ತು ವಿಸ್ತರಣೆಯ ನಿಟ್ಟಿನಲ್ಲಿ ಸಾಗಿದೆ. ಜತೆಗೆ 2049ರ ವೇಳೆಗೆ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಅತ್ಯಂತ ಪ್ರಬಲ ಶಕ್ತಿಯಾಗಿ ಅದು ಬೆಳೆಯಲಿದೆ ಎಂದು ಹೇಳಿದೆ.

ಪರಮಾಣು ಸಿಡಿತಲೆಗಳ ಹೆಚ್ಚಳ
ಚೀನಾದ ಪರಮಾಣು ಸಿಡಿತಲೆಗಳ ಸಂಖ್ಯೆ ಪ್ರಸ್ತುತ 200ಕ್ಕೂ ಹೆಚ್ಚಿದೆ ಎಂದು ವರದಿಯಲ್ಲಿ ಅಂದಾಜಿಸಲಾಗಿದೆ. ಇದು ಅಮೆರಿಕ ಹೊಂದಿರುವ ಖಂಡಾಂತರ ಕ್ಷಿಪಣಿಗಳ ಸಾಮರ್ಥ್ಯಕ್ಕೆ ಬಹುತೇಕ ಸಮನಾಗಿದೆ. ಚೀನಾ ತನ್ನ ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿರುವುದು ಆತಂಕಕಾರಿ ಎಂದು ವರದಿ ತಿಳಿಸಿದೆ.

ಪರಮಾಣು ವಾಯು ಕ್ಷಿಪಣಿ
ವಾಯು ಮೂಲಕ ಅಣ್ವಸ್ತ್ರಗಳನ್ನು ಪ್ರಯೋಗಿಸುವ ಸಾಮರ್ಥ್ಯ ಚೀನಾ ಸೇನೆಗೆ ಇಲ್ಲ. ಆದರೆ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ), ಎಚ್-6ಎನ್ ಬಾಂಬರ್ ತನ್ನ ಮೊದಲ ಪರಮಾಣು ಸಾಮರ್ಥ್ಯದ ವಾಯುವಿನಿಂದ ವಾಯುವಿಗೆ ರಿಫ್ಯುಯೆಲಿಂಗ್ ಬಾಂಬರ್ ಎಂಬುದಾಗಿ ಕಳೆದ ವರ್ಷ ಬಹಿರಂಗ ಪಡಿಸಿದೆ ಎಂದು ಪೆಂಟಗಾನ್ ವರದಿ ತಿಳಿಸಿದೆ.

ಪರಮಾಣು ಜಲಾಂತರ್ಗಾಮಿಗಳು
ಕಳೆದ 15 ವರ್ಷಗಳಲ್ಲಿ ಚೀನಾದ ನೌಕಾಪಡೆಯು 12 ಪರಮಾಣು ಜಲಾಂತರ್ಗಾಮಿಗಳನ್ನು ನಿರ್ಮಿಸಿದೆ. ಅದರಲ್ಲಿ ಆರು ಜಲಾಂತರ್ಗಾಮಿಗಳು ಚೀನಾದ ಮೊದಲ ವಿಶ್ವಾಸಾರ್ಹ ಸಮುದ್ರ ಆಧಾರಿತ ಪರಮಾಣು ನಿರೋಧಕಗಳಾಗಿವೆ. 2020ರ ದಶಕದ ಮಧ್ಯಭಾಗದ ವೇಳೆಗೆ ಅದು ಭೂ ದಾಳಿ ಯೋಗ್ಯ ನೌಕಾ ಕ್ಷಿಪಣಿಗಳನ್ನು ಅಳವಡಿಸುವ ಮೂಲಕ ರಹಸ್ಯ ಭೂ ದಾಳಿಯ ಆಯ್ಕೆಯನ್ನು ಒಳಗೊಂಡ ನಿರ್ದೇಶಿತ ಕ್ಷಿಪಣಿ ಪರಮಾಣು ಆಕ್ರಮಣ ಜಲಾಂತರ್ಗಾಮಿ ನೌಕೆಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ












Click it and Unblock the Notifications