ಪತ್ತೆಯಾಯಿತು ಪುರುಷ ಜನನಾಂಗ ಹೋಲುವ ಮೀನು

ವಾಷಿಂಗ್ಟನ್, ಡಿಸೆಂಬರ್ 20: ಅಮೆರಿಕದಲ್ಲಿ ಪುರುಷರ ಜನನಾಂಗ ಹೋಲುವ ಮೀನುಗಳು ಪತ್ತೆಯಾಗಿ, ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ. ಅಮೆರಿಕದ ಕ್ಯಾಲಿಫೋರ್ನಿಯಾ ಕಡಲ ತೀರದಲ್ಲಿ ಇತ್ತೀಚೆಗೆ ಈ 'ಪೆನಿಸ್ ಫಿಷ್'‌ಗಳು ಕಂಡು ಬಂದಿವೆ.

ವೈಜ್ಞಾನಿಕವಾಗಿ 'Urechis Unicinctus' ಎಂಬ ಹೆಸರಿನಿಂದ ಕರೆಯಲ್ಪಡುತ್ತವೆ. ಪೆನಿಸ್ ಫಿಷ್‌ಗಳು. ಪಶ್ಚಿಮ ಅಮೆರಿಕದ ತೀರದಲ್ಲಿ ಅಪರೂಪಕ್ಕೆ ಎಂಬಂತೆ ಕಂಡು ಬರುವ ಪೆನಿಸ್ ಫಿಷ್‌ಗಳು ಸಾಕಷ್ಟು ಅಚ್ಚರಿಗೆ ಕಾರಣವಾಗಿದ್ದು, ಈ ಫಿಷ್‌ಗಳು ಸಾಗರದಾಳದಲ್ಲಿ ವಾಸಿಸುತ್ತವಂತೆ. ಸಾಗರದಾಳದಲ್ಲಿನ ಪ್ರಬಲ ಅಲೆಗಳಿಂದ ಯಾವಾಗಾದರೂ ಒಮ್ಮೆ ಕಡಲತಡಿಗೆ ಬಂದು ಬೀಳುವ ಈ ಮೀನುಗಳು ಕ್ಷಣಾರ್ಧದಲ್ಲೇ ಪ್ರಾಣ ಬಿಡುತ್ತವಂತೆ. ತಿನ್ನಲು ಯೋಗ್ಯವಾದ ಈ ಮೀನುಗಳು ನೋಡಲು ಮಾತ್ರ ಪುರುಷರ ಜನನಾಂಗದಂತೆ ಕಂಡು, ಅಚ್ಚರಿಗೆ ಕಾರಣವಾಗಿವೆ. ಪ್ರಮುಖವಾಗಿ ಚೀನಾ ಹಾಗೂ ದಕ್ಷಿಣ ಕೊರಿಯಾದ ಕಡಲ ತೀರದಲ್ಲಿ ಕಂಡು ಬರುವ ಈ ಮೀನುಗಳು ಖಾದ್ಯವಾಗಿ ಚೀನಿಯರು ಬಳಸುತ್ತಾರಂತೆ.

Penis Fish Found In America Beach; photos Goes Viral

ಈ ಹಿಂದೆಯೂ ವೊಡೆಗಾ ಬೇ, ಮಾಸ್ ಲ್ಯಾಂಡಿಂಗ್, ಪ್ರೀನ್ಸಟನ್ ಬೀಚ್, ಪಜಾರೋ ಡೂನ್ ಬೀಚ್‌ಗಳಲ್ಲಿ ಇವು ಕಂಡು ಬಂದಿದ್ದವು ಎಂದು ಖಾಸಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಪುರುಷರ ಜನನಾಂಗ ಹೋಲುವ ಮೀನೊಂದು ಪತ್ತೆಯಾಗಿ, ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇದರ ಫೋಟೋಗಳು ವೈರಲ್ ಕೂಡ ಆಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+