ಓಮಿಕ್ರಾನ್ ಹೆದರಿಕೆ: US ಲಸಿಕೆ ಕೇಂದ್ರಗಳಲ್ಲಿ ಕಿಲೋಮೀಟರ್ ಕ್ಯೂ
ನ್ಯೂಯಾರ್ಕ್ ಡಿಸೆಂಬರ್ 6: ವಿಶ್ವದಾದ್ಯಂತ ಕೊರೊನಾ ರೂಪಾಂತರ ಓಮಿಕ್ರಾನ್ ವೈರಸ್ ಹರಡುತ್ತಿರುವ ಬೆನ್ನಲ್ಲೇ ಸದ್ಯ ಲಸಿಕೆಗೆ ಬೇಡಿಕೆ ಹೆಚ್ಚಾಗುತ್ತಿದೆ. ಅದಲ್ಲೂ ಅಮೆರಿಕದಲ್ಲಿ ಕಿಲೋಮೀಟರ್ ಗಟ್ಟಲೆ ಜನ ಸರತಿ ಸಾಲಿನಲ್ಲಿ ನಿಂತು ಲಸಿಕೆಗಾಗಿ ಕಾಯುತ್ತಿರುವ ದೃಶ್ಯಗಳು ಹೆಚ್ಚಾಗಿವೆ. US ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ (CDC) ನೀಡಿದ ಮಾಹಿತಿ ಪ್ರಕಾರ, ಇತ್ತೀಚಿನ ವಾರಗಳಲ್ಲಿ ಲಸಿಕೆಗಳ ಬೇಡಿಕೆಯು ದಿನಕ್ಕೆ ಸರಾಸರಿ ಒಂದು ಮಿಲಿಯನ್ ಡೋಸ್‌ಗಳಿಂದ 1.5 ಮಿಲಿಯನ್‌ಗೆ ಏರಿಕೆಯಾಗಿದೆ ಎಂಬ ವರದಿಯು ಗಮನಸೆಳೆದಿದೆ.
ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಹೆಚ್ಚುತ್ತಿರುವ ಓಮಿಕ್ರಾನ್ ಪ್ರಕರಣಗಳು ಹಲವಾರು ರಾಜ್ಯಗಳಾದ್ಯಂತ ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಜನ ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡಿದೆ ಎಂದು ನ್ಯೂ ಯಾರ್ಕ್ ಟೈಮ್ಸ್ ವರದಿ ಮಾಡಿದೆ. ಜೊತೆಗೆ ಲಸಿಕೆ ಕೇಂದ್ರಗಳಾದ್ಯಂತ ಸರತಿ ಸಾಲಿನಲ್ಲಿ ನಿಂತಿರುವವರಲ್ಲಿ ಅನೇಕರು ತಮ್ಮ ಮೊದಲ ಡೋಸ್ ಪಡೆಯುತ್ತಿರುವುದಾಗಿ ವರದಿಯು ಹೈಲೈಟ್ ಮಾಡಿದೆ.
ಲಸಿಕೆಗಳ ವಿತರಣೆ ಬಗ್ಗೆ ರಾಷ್ಟ್ರವು ಹಲವಾರು ಚರ್ಚೆಗಳನ್ನು ನಡೆಸುತ್ತಿದೆ. ಜನರ ಒಂದು ವಿಭಾಗವು ಲಸಿಕೆಗಳ ಅಗತ್ಯವನ್ನು ಪೂರ್ಣಗೊಳಿಸುವಂತೆ ಕೇಳಿಕೊಳ್ಳುತ್ತಿವೆ. ಹೀಗಾಗಿ ಬಿಡೆನ್ ಆಡಳಿತ ನೂರಾರು ಲಸಿಕೆ ಚಿಕಿತ್ಸಾಲಯಗಳನ್ನು ರಚಿಸಲು ಯೋಜಿಸುತ್ತಿದೆ. ಓಮಿಕ್ರಾನ್ ಎಷ್ಟು ಅಪಾಯಕಾರಿ ಎನ್ನುವ ಬಗ್ಗೆ ಹಲವಾರು ಸಂಶೋಧನೆಗಳು ನಡೆಯುತ್ತಿವೆ.

"ಪದೇ ಪದೇ ಈ ಬೆಳವಣಿಗೆಗಳು ಜನರ ಮೇಲೆ ಅಧಿಕ ಪರಿಣಾಮ ಬೀರುತ್ತಿವೆ. ಮಾನಸಿಕವಾಗಿ ದೈಹಿಕವಾಗಿ ಹಲವಾರು ಸಮಸ್ಯೆಗಳನ್ನು ಅನುಭವಿಸುವಂತೆ ಮಾಡಿವೆ. ಆರೋಗ್ಯದ ತಪಾಸಣೆ, ಚಿಕಿತ್ಸೆ, ಆತಂಕ, ಒತ್ತಡದಿಂದಾಗಿ ಜನ ಹೈರಾಣಾಗಿದ್ದಾರೆ. ಈ ಆತಂಕ ಅದೆಷ್ಟು ಗಾಢವಾಗಿ ಜನರ ಮನದಲ್ಲಿ ಮನೆ ಮಾಡಿದೆ ಅನ್ನೋದಕ್ಕೆ ಲಸಿಕೆ ಕೇಂದ್ರಗಳ ಮುಂದೆ ಜನ ಕಿ.ಮಿ. ಗಟ್ಟಲೆ ಸರತಿ ಸಾಲಿನಲ್ಲಿ ನಿಂತುಕೊಳ್ಳುವಷ್ಟು. ಹೀಗಾಗಿ ಸಾರ್ವಜನಿಕರು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶವೆಂದರೆ ನಾವು ಒತ್ತಡದ ಆರೋಗ್ಯ ವಿತರಣಾ ವ್ಯವಸ್ಥೆಯನ್ನು ಹೊಂದಿದ್ದೇವೆ. ಹೀಗಾಗಿ ಆತಂಕ ಬೇಡ, ವೈರಸ್ ಗಳೊಂದಿಗೆ ಜೀವನ ಸಾಗಿಸುವುದನ್ನ ರೂಢಿಸಿಕೊಳ್ಳಬೇಕು" ಎಂದು ಅಮೇರಿಕನ್ ಫಾರ್ಮಾಸಿಸ್ಟ್ಸ್ ಅಸೋಸಿಯೇಷನ್‌ನಲ್ಲಿ ಪ್ರತಿರಕ್ಷಣೆ ನೀತಿಯ ಮುಖ್ಯಸ್ಥ ಮಿಚೆಲ್ ರೋಥ್ಹೋಲ್ಜ್ ತಿಳಿಸಿದರು.
ಕೋವಿಡ್ 3ನೇ ಅಲೆಯ ಸಂದರ್ಭದಲ್ಲಿ ಓಮಿಕ್ರಾನ್ ರೂಪಾಂತರಿ ಕಂಡುಬಂದಿದ್ದು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವುದು ದಕ್ಷಿಣ ಆಫ್ರಿಕಾ ತಜ್ಞರಲ್ಲಿ ಆತಂಕವನ್ನುಂಟುಮಾಡಿದೆ. ನಿನ್ನೆ ಒಂದೇ ದಿನ ದೇಶದಲ್ಲಿ 16 ಸಾವಿರದ 55 ಮಂದಿಯಲ್ಲಿ ಸೋಂಕು ವಕ್ಕರಿಸಿದ್ದು 25 ಮಂದಿ ಮೃತಪಟ್ಟಿದ್ದಾರೆ. ಹಲವು ದೇಶಗಳಲ್ಲಿ ಇದು ಕೋವಿಡ್ ನಾಲ್ಕನೇ ಅಲೆಯ ಆರಂಭವಾಗಿದ್ದು ವಿಶೇಷವಾಗಿ ಮಕ್ಕಳಲ್ಲಿ ಸೇರಿದಂತೆ ಎಲ್ಲಾ ವಯೋಮಾನದವರಲ್ಲಿ ಬೇಗವಾಗಿ ಹರಡುತ್ತಿದೆ ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕಬಲ್ ಡಿಸೀಸ್ (NICD)ಯ ಡಾ ವಾಸಿಲಾ ಜಸ್ಸತ್ ಹೇಳಿದ್ದಾರೆ.

ಈ ಮೊದಲು ಒಂದು ಮತ್ತು ಎರಡನೇ ಕೋವಿಡ್ ಅಲೆ ಸಂದರ್ಭದಲ್ಲಿ ಮಕ್ಕಳು ಹೆಚ್ಚಾಗಿ ಸೋಂಕಿಗೆ ತುತ್ತಾಗಿರಲಿಲ್ಲ. ಆಸ್ಪತ್ರೆಗಳಿಗಂತೂ ದಾಖಲಾಗಿರುವ ಮಕ್ಕಳ ಸಂಖ್ಯೆ ಇಡೀ ವಿಶ್ವದಲ್ಲಿ ಕಡಿಮೆಯೇ. ಆದರೆ ಮೂರನೇ ಅಲೆಯಲ್ಲಿ 5 ವರ್ಷಕ್ಕಿಂತ ಕೆಳಗಿನ ಮಕ್ಕಳು ಮತ್ತು 15ರಿಂದ 19 ವರ್ಷದೊಳಗಿನ ಹದಿಹರೆಯದವರು ಮೂರನೇ ಅಲೆಯ ಕೋವಿಡ್ ಸೋಂಕಿಗೆ ಬೇಗ ಒಳಗಾಗುತ್ತಿದ್ದಾರೆ. ವಿಶ್ವದಾದ್ಯಂತ ತಲ್ಲಣ ಮೂಡಿಸಿರುವ ಕೋವಿಡ್‌ನ ಹೊಸ ರೂಪಾಂತರಿ ಓಮಿಕ್ರಾನ್‌ನಿಂದಾಗಿ ದೇಶದಲ್ಲಿ ಕೋವಿಡ್ 4ನೇ ಅಲೆ ಕಾಣಿಸಿಕೊಂಡಿದೆ ಎಂದು ದಕ್ಷಿಣ ಆಫ್ರಿಕಾ ಸರ್ಕಾರ ಶುಕ್ರವಾರ ಅಧಿಕೃತವಾಗಿ ಘೋಷಿಸಿದೆ. ಮೊದಲ ಓಮಿಕ್ರಾನ್ ಕೇಸು ಪತ್ತೆಯಾದ ತಿಂಗಳೊಳಗೇ, ಅದು ಮತ್ತೊಂದು ಕೋವಿಡ್ ಅಲೆಗೆ ಕಾರಣವಾಗಿರುವುದು, ವಿಶ್ವದ ಇತರೆ ದೇಶಗಳಲ್ಲೂ ಅಂಥದ್ದೇ ಭೀತಿಯನ್ನು ಹುಟ್ಟುಹಾಕಿದೆ.












Click it and Unblock the Notifications