ಫೇಸ್ ಬುಕ್‌ಗೆ ರಾಜೀನಾಮೆ ಇಲ್ಲ: ಸಿಇಒ ಜುಕರ್ ಬರ್ಗ್ ಸ್ಪಷ್ಟನೆ
ವಾಷಿಂಗ್ಟನ್, ನವೆಂಬರ್ 21: ತಮ್ಮ ರಾಜೀನಾಮೆಯ ವದಂತಿಯನ್ನು ಫೇಸ್ ಬುಕ್ ಸಂಸ್ಥಾಪಕ, ಸಿಇಒ ಮಾರ್ಕ್ ಜುಗರ್‌ಬರ್ಗ್ ತಳ್ಳಿಹಾಕಿದ್ದಾರೆ.
ತಾವು ರಾಜೀನಾಮೆ ನೀಡುವ ಯಾವುದೇ ಯೋಚನೆ ಇಲ್ಲ ಎಂದು ಜುಕರ್ ಬರ್ಗ್ ಸಿಎನ್ಎನ್ ಬ್ಯುಸಿನೆಸ್‌ಗೆ ನೀಡಿದ ಸಂದರ್ಶನದಲ್ಲಿ ಬುಧವಾರ ಹೇಳಿದ್ದಾರೆ.
ಇತ್ತೀಚಿನ ಫೇಸ್ ಬುಕ್ ಬಿಕ್ಕಟ್ಟಿನ ಸಂದರ್ಭದಲ್ಲಿ ಅದನ್ನು ನಿಭಾಯಿಸಿದ ರೀತಿ ಕುರಿತು ತೀವ್ರ ಟೀಕೆಗೆ ಒಳಗಾಗಿದ್ದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶೆರಿಲ್ ಸ್ಯಾಂಡ್ ಬರ್ಗ್ ಅವರನ್ನು ಜುಗರ್ ಬರ್ಕ್ ಸಮರ್ಥಿಸಿಕೊಂಡಿದ್ದಾರೆ.

ಶೆರಿಲ್ ಅವರು ಈ ಕಂಪೆನಿಯ ಮಹತ್ವದ ಭಾಗ. ನಾವು ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಗಳನ್ನು ಸರಿಪಡಿಸುವಲ್ಲಿ ಅವರು ತುಂಬಾ ಪ್ರಯತ್ನ ನಡೆಸಿದ್ದಾರೆ.
ಹತ್ತು ವರ್ಷಗಳಿಂದ ಅವರು ಕಂಪೆನಿಯಲ್ಲಿ ಪ್ರಮುಖವಾಗಿ ತೊಡಗಿಕೊಂಡಿದ್ದಾರೆ. ನಾವು ಒಟ್ಟಿಗೆ ಕೆಲಸ ಮಾಡುತ್ತಿರುವುದ ಬಗ್ಗೆ ನನಗೆ ಅತೀವ ಹೆಮ್ಮೆ ಇದೆ. ಇನ್ನಷ್ಟು ದಶಕಗಳ ಕಾಲ ಒಟ್ಟಿಗೆ ಕೆಲಸ ಮಾಡುತ್ತೇವೆ ಎಂಬ ಭರವಸೆ ಇದೆ ಎಂದು ಜುಕರ್ ಬರ್ಗ್ ಹೇಳಿದ್ದಾರೆ.












Click it and Unblock the Notifications