ನ್ಯೂಯಾರ್ಕ್‌ ನಗರದ ನಾಶಕ್ಕೆ ಪಣ ತೊಟ್ಟಂತಿದೆ ಕೊರೊನಾ

ವಾಷಿಂಗ್ಟನ್, ಏಪ್ರಿಲ್ 9: ಕೊರೊನಾ ಸೋಂಕಿನಿಂದ ಹೊರಬರಲು ಇಡೀ ಜಗತ್ತು ಹೋರಾಡುತ್ತಿದೆ. ವೈದ್ಯಕೀಯ ಲೋಕಕ್ಕೆ ಸವಾಲಾಗಿರುವ ಕೊರೊನಾಗೆ ಇದುವರೆಗೂ ಯಾವ ದೇಶವೂ ಮದ್ದು ಕಂಡು ಹಿಡಿದಿಲ್ಲ. ಆದರೆ, ಲಾಕ್‌ಡೌನ್‌ ಹಾಗೂ ಇನ್ನಿತರ ಮುಂಜಾಗ್ರತೆ ಕ್ರಮಗಳಿಂದ ಹರಡುವಿಕೆಯನ್ನು ತಡೆಯುತ್ತಿದ್ದಾರೆ.

ಎಷ್ಟೇ ಪ್ರಯತ್ಬ ಪಟ್ಟರೂ ಅಮೆರಿಕದಲ್ಲಿ ಕೊರೊನಾ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಅದರಲ್ಲೂ ನ್ಯೂಯಾರ್ಕ್ ನಗರದಲ್ಲಂತೂ ಕೊರೊನಾ ಅಟ್ಟಹಾಸ ಮಾಡುತ್ತಿದೆ. ದಿನವೊಂದರಲ್ಲಿ 700 ರಿಂದ 800 ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಕಳೆದ ಒಂದು ವಾರದ ಅಂಕಿ ಅಂಶ ನೋಡಿದ್ರೆ ಕೊರೊನಾ ಕಾಟಕ್ಕೆ ಇಡೀ ನ್ಯೂಯಾರ್ಕ್ ನಗರ ಸಂರ್ಪೂರ್ಣ ನಾಶವಾಗಿಬಿಡುತ್ತಾ ಎಂಬ ಆತಂಕ ಕಾಡುತ್ತಿದೆ.

ಹೌದು, ಬುಧವಾರ ಅಮೆರಿಕದ ನ್ಯೂಯಾರ್ಕ್‌ ನಗರದಲ್ಲಿ ಒಂದೇ ದಿನ 779 ಜನರು ಮೃತಪಟ್ಟಿದ್ದಾರೆ. ಯುಎಸ್‌ ದೇಶದಲ್ಲಿ 24 ಗಂಟೆಯಲ್ಲಿ 1970ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ವರದಿ ಬಂದಿದೆ.

new-york-city-reported-779-covid19-death-on-wednesday

ಇದುವರೆಗೂ ನ್ಯೂಯಾರ್ಕ್‌ ಒಂದರಲ್ಲಿ 6268 ಜನರು ಕೊರೊನಾ ಸೋಂಕಿನಿಂದ ಸಾನ್ನಪ್ಪಿದ್ದಾರೆ. ಅಮೆರಿಕದಲ್ಲಿ ಒಟ್ಟು 12,841 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಅರ್ಧದಷ್ಟು ಜನರು ನ್ಯೂಯಾರ್ಕ್‌ ಒಂದೇ ನಗರದಲ್ಲಿ ಬಲಿಯಾಗಿರುವುದು ಆತಂಕ ಹೆಚ್ಚಿಸಿದೆ.

ಈಗಾಗಲೇ ನ್ಯೂಯಾರ್ಕ್‌ ನಗರದಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿಯಲ್ಲಿದೆ. ಏಪ್ರಿಲ್ 31ರವರೆಗೂ ಲಾಕ್‌ಡೌನ್‌ ಮುಂದುವರಿಯುತ್ತಿದೆ ಎಂದು ಗರ್ವನರ್ ಹೇಳಿದ್ದಾರೆ. ಅಂದ್ಹಾಗೆ, ಯುಎಸ್‌ನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 400,335ಕ್ಕೆ ಏರಿಕೆಯಾಗಿದೆ. 12,841 ಜನರು ಸಾವನ್ನಪ್ಪಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+