ಟೆಲಿವಿಷನ್ ನೇರ ಪ್ರಸಾರದಲ್ಲಿ ಕೊರೊನಾ ಲಸಿಕೆ ಪಡೆದ ಅಮೆರಿಕಾದ ಉಪಾಧ್ಯಕ್ಷ ಮೈಕ್ ಪೆನ್ಸ್
ನವದೆಹಲಿ, ಡಿಸೆಂಬರ್ 18: ಅಮೆರಿಕಾದ ಉಪಾಧ್ಯಕ್ಷ ಮೈಕ್ ಪೆನ್ಸ್ ಟೆಲಿವಿಷನ್ ನೇರಪ್ರಸಾರದಲ್ಲಿ ಶುಕ್ರವಾರ ಕೋವಿಡ್-19 ಲಸಿಕೆಯನ್ನು ಪಡೆದಿದ್ದಾರೆ.
ಕೋವಿಡ್ ಲಸಿಕೆಯನ್ನು ಪಡೆದ ಬಳಿಕ ಮಾತನಾಡಿದ ಮೈಕ್ ಪೆನ್ಸ್ ''ಲಸಿಕೆಯು ವೈದ್ಯಕೀಯ ಪವಾಡವಾಗಿದೆ ಮತ್ತು ಅಮೆರಿಕನ್ನರಿಗೆ ಭರವಸೆ ನೀಡಿದೆ. ನಮಗೆ ಲಸಿಕೆ ಮೇಲಿನ ವಿಶ್ವಾಸವೇ ಇಂದು ಬೆಳಿಗ್ಗೆ ನಮ್ಮನ್ನು ಇಲ್ಲಿಗೆ ತಂದಿದೆ'' ಎಂದು ಉಪಾಧ್ಯಕ್ಷರು ವ್ಯಾಕ್ಸಿನೇಷನ್ ನಂತರ ಹೇಳಿದ್ದಾರೆ.
ಶ್ವೇತಭವನದ ವ್ಯಾಕ್ಸಿನೇಷನ್ ನೇರ ಪ್ರಸಾರ ಸಂದರ್ಭದಲ್ಲಿ ಅವರ ಪತ್ನಿ ಕರೆನ್ ಮತ್ತು ಸರ್ಜನ್ ಜನರಲ್ ಜೆರೋಮ್ ಆಡಮ್ಸ್ ಕೂಡ ಲಸಿಕೆ ಸ್ವೀಕರಿಸಿದರು. ವಾಲ್ಟರ್ ರೀಡ್ ರಾಷ್ಟ್ರೀಯ ಮಿಲಿಟರಿ ವೈದ್ಯಕೀಯ ಕೇಂದ್ರದ ಆರೋಗ್ಯ ಕಾರ್ಯಕರ್ತರು ಲಸಿಕೆಗಳನ್ನು ನೀಡಿದರು.
b

ಇನ್ನು ಜೋ ಬಿಡೆನ್ ಮತ್ತು ಕಮಲಾ ಹ್ಯಾರಿಸ್ ಅವರು "ಭದ್ರತಾ ಕಾರಣಗಳಿಗಾಗಿ" ಲಸಿಕೆಯನ್ನು ಆದಷ್ಟು ಬೇಗ ಪಡೆಯಬೇಕು ಎಂದು ಫೌಸಿ ಹೇಳಿದ್ದಾರೆ. ಅಧ್ಯಕ್ಷರಾಗಿ ಚುನಾಯಿತರಾದವರು ಮತ್ತು ಉಪಾಧ್ಯಕ್ಷರು ಮುಂದಿನ ವಾರದಲ್ಲಿ ಲಸಿಕೆ ಪಡೆಯಬಹುದು ಎಂದು ಬಿಡೆನ್ ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications