ಕೊರೊನಾದಿಂದ ಅಮೆರಿಕದಲ್ಲಿ 85 ಸಾವು: ಮೆಲಾನಿಯಾರಿಂದ ವಿಶೇಷ ಸೂಚನೆ

ವಾಷಿಂಗ್ಟನ್, ಮಾರ್ಚ್ 18: ಕೊರೊನಾ ಸಾಂಕ್ರಾಮಿಕ ರೋಗ ಇಡೀ ಜಗತ್ತನ್ನೇ ಆವರಿಸಿಕೊಂಡಿದ್ದು, ಅಮೆರಿಕದ ಜನರು ಮನೆಯಿಂದ ಹೊರ ಬರಬೇಡಿ ಎಂದು ಮೆಲಾನಿಯಾ ಟ್ರಂಪ್ ಕರೆ ನೀಡಿದ್ದಾರೆ.

Recommended Video

      Yediyurappa to give fresh directives about covid 19 | Yeddiyurappa | Karnataka | Oneindia kannada

      ಅಮೆರಿಕದಲ್ಲಿ ಕೊರೊನಾ ವೈರಸ್‌ನಿಂದ ಇದುವರೆಗೆ 85 ಮಂದಿ ಮೃತಪಟ್ಟಿದ್ದಾರೆ.ಜಾಗತಿಕವಾಗಿ ವೇಗವಾಗಿ ಹರಡುತ್ತಿರುವ ಕೊರೋನಾವೈರಸ್ 7100 ಜನರನ್ನು ಬಲಿಪಡೆದುಕೊಂಡಿದೆ.

      ಇದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಈ ವಾರದ ಆರಂಭದಿಂದಲೂ ಸಾವಿರಾರು ಅಮೆರಿಕದವರು ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ.

      Melania

      ಕೆಲಸದ ಮಧ್ಯೆಯೂ ಪ್ರತ್ಯೇಕವಾಗಿರುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸಾಂಕ್ರಾಮಿಕ ರೋಗ ಹರಡದಂತೆ ತಡೆಯಬಹುದು ಎಂದು ವೈದ್ಯರು ಹೇಳುತ್ತಿದ್ದಾರೆ.

      ಅಮೆರಿಕಾದಲ್ಲಿಯೂ ಶಾಲಾ, ಕಾಲೇಜುಗಳು, ಹೋಟೆಲ್, ರೆಸ್ಟೋರೆಂಟ್ ಗಳು ಮುಚ್ಚಲ್ಪಟ್ಟಿದ್ದು, ಕ್ರೀಡಾ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ.

      ಇ-ಮೇಲ್ ಅಥವಾ ಫೇಸ್‌ಟೈಮ್ ಮೂಲಕ ನಿಮ್ಮ ಪ್ರೀತಿಪಾತ್ರರೊಡನೆ ಸಂಪರ್ಕ ಸಾಧಿಸಲು ಮನೆಯಿಂದಲೇ ಕೆಲಸ ಮಾಡುವ ಸಮಯದ ಲಾಭವನ್ನು ಪಡೆದುಕೊಳ್ಳಿ.

      ಕುಟುಂಬದೊಂದಿಗೆ ಸಮಯ ಕಳೆಯಿರಿ, ಅಥವಾ ಪುಸ್ತಕವನ್ನು ಓದುವ ಮೂಲಕ ಅಥವಾ ಹವ್ಯಾಸದಲ್ಲಿ ಸಮಯ ಕಳೆಯುವ ಮೂಲಕ ನಿಮ್ಮ ಯೋಗಕ್ಷೇಮವನ್ನು ನೋಡಿಕೊಳ್ಳಿ ಎಂದು ಮೆಲಾನಿಯಾ ಟ್ರಂಪ್ ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ.

      85 ಜನರು ಸಾವನ್ನಪ್ಪಿದ್ದಷ್ಟೇ ಅಲ್ಲದೆ ಸುಮಾರು 4500 ಅಮೆರಿಕಾದ ಜನರು ಕೊರೋನಾವೈರಸ್ ಸೋಂಕಿಗೆ ತುತ್ತಾಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+