ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರ ಎಂದಿಗೂ ನಿಮ್ಮದಾಗಿರಲಿಲ್ಲ: ಪಾಕ್ ಗೆ ಮುಸ್ಲಿಂ ವಿದ್ವಾಂಸನಿಂದ ತಪರಾಕಿ

|
Google Oneindia Kannada News

Recommended Video

ಭಾರತವನ್ನ ಬೆಂಬಲಿಸಿ ಪಾಕಿಸ್ತಾನಕ್ಕೆ ಛೀಮಾರಿ ಹಾಕಿದ ಇಸ್ಲಾಮಿಕ್ ವಿದ್ವಾಂಸ ಇಮಾಮ್ ಮೊಹಮ್ಮದ್ ತಾವ್ಹಿದಿ

ವಾಷಿಂಗ್ಟನ್, ಆಗಸ್ಟ್ 13: "ಕಾಶ್ಮೀರ ಯಾವತ್ತಿಗೂ ಪಾಕಿಸ್ತಾನದ ಭಾಗವಾಗಿರಲಿಲ್ಲ, ಅದು ಮುಂದೆಯೂ ಪಾಕಿಸ್ತಾನದ ಭಾಗವಾಗುವುದೂ ಇಲ್ಲ" ಎಂದು ವಿವಾದಿತ ಇಸ್ಲಾಮಿಕ್ ವಿಸ್ವಾಂಸ ಇಮಾಮ್ ಮೊಹಮ್ಮದ್ ತಾವ್ಹಿದಿ ಟ್ವೀಟ್ ಮಾಡುವ ಮೂಲಕ ಭಾರತದ ಪರ ನಿಂತಿದ್ದಾರೆ.

"ಪಾಕಿಸ್ತಾನ ಪ್ರಾಮಾಣಿಕತೆಯಿಂದ ಈ ಸನ್ನಿವೇಶವನ್ನು ಎದುರಿಸಬೇಕು. ಪಾಕಿಸ್ತಾನ ಮತ್ತು ಕಾಶ್ಮೀರ ಎರಡೂ ಭಾರತದ ಭಾಗವೇ ಆಗಿತ್ತು. ಕಾಶ್ಮೀರ ಯಾವತ್ತೂ ಪಾಕಿಸ್ತಾನದ ಭಾಗವಾಗಿರಲಿಲ್ಲ, ಮುಂದೆಯೂ ಪಾಕಿಸ್ತಾನದ ಭಾಗವಾಗುವುದಿಲ್ಲ. ಮುಸ್ಲಿಮರು ಹಿಂದುಗಳನ್ನು ಇಸ್ಲಾಮಿಗೆ ಮತಾಂತರ ಮಾಡಿದ ಮಾತ್ರಕ್ಕೆ ಭಾರತ ಹಿಂದುರಾಷ್ಟ್ರವಾಗಿತ್ತು ಎಂಬ ಸತ್ಯ ಬದಲಾಗುವುದಿಲ್ಲ. ಭಾರತ ಇಸ್ಲಾಮಿಗಿಂತ ಹಳೆಯದು. ಪ್ರಾಮಾಣಿಕವಾಗಿ ಯೋಚಿಸುವುದನ್ನು ಕಲಿಯಿರಿ" ಎಂದು ಇಮಾಮ್ ಮೊಹ್ಮದ್ ತಾವ್ಹಿದಿ ಟ್ವಿಟ್ ಮಾಡಿದ್ದಾರೆ.

ಆಸ್ಟ್ರೇಲಿಯಾ(ಹುಟ್ಟಿದ್ದು ಇರಾನ್ ನಲ್ಲಿ, ನಂತರ ಆಸ್ಟ್ರೇಲಿಯಾಕ್ಕೆ ಕುಟುಂಬ ವಲಸೆ) ಮೂಲದ ಶಿಯಾ ಮುಸ್ಲಿಂ ಧಾರ್ಮಿಕ ಮುಖಂಡ ತಾವ್ಹಿದಿ, ತಮ್ಮನ್ನು ತಾವು ಇಸ್ಲಾಮಿಕ್ ಸುಧಾರಕ ಎಂದು ಕರೆದುಕೊಂಡಿದ್ದಾರೆ. ಪ್ರಸ್ತುತ ಅಮೆರಿಕದಲ್ಲಿ ವಾಸವಿರುವುದಾಗಿ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಹಲವು ವರ್ಷಗಳಿಂದ ಪಾಕಿಸ್ತಾನವು ಉಗ್ರವಾದವನ್ನು ಬೆಂಬಲಿಸುವುದನ್ನು ಕಟುಶಬ್ದಗಳಿಂದ ವಿರೋಧಿಸುತ್ತ ಬಂದಿದ್ದಾರೆ.

Kashmir Was Never Yours: Islamic Scholar To Pakistan

ತಮ್ಮನ್ನು ತಾವು "ಇಮಾಮ್ ಆಫ್ ಪೀಸ್" ಎಂದು ಕರೆದುಕೊಳ್ಳುವ ಇಮಾಮ್, ಭಾರತೀಯ ನಟಿ ರವೀನಾ ಟಂಡನ್ ಅವರ ಪಕ್ಕಾ ಅಭಿಮಾನಿ! "ಇಸ್ಲಾಂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ ಸುಧಾರಣೆಯಾಗಬೇಕು. ಉಗ್ರವಾದಕ್ಕೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು" ಎಂದು ಇಮಾಮ್ ಅಭಿಪ್ರಾಯ.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370 ನೇ ವಿಧಿಯ ಅಡಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಭಾರತದ ನಡೆ ಮತ್ತು ಅದಕ್ಕೆ ಪಾಕಿಸ್ತಾನದ ಪ್ರತಿಕ್ರಿಯೆಯನ್ನು ಅವಲೋಕಿಸಿದ ಇಮಾಮ್ ಈ ರೀತಿ ಹೇಳಿದ್ದಾರೆ.

English summary
Imam Mohaman Tawhindi a Muslim scholar slams Pakistan and said, Kashmir was never yours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X