ಭಾರತ ಮೂಲದ ವಿಜಯಶಂಕರ್ ನಾಮನಿರ್ದೇಶನ ಹಿಂಪಡೆದ ಜೋ ಬೈಡನ್

ವಾಷಿಂಗ್ಟನ್, ಫೆಬ್ರವರಿ 6: ಕೊಲಂಬಿಯಾ ಕೋರ್ಟ್ ಆಫ್ ಅಪೀಲ್ಸ್‌ನ ಸಹ ನ್ಯಾಯಾಧೀಶರಾಗಿ ಭಾರತ ಮೂಲದ ಅಮೆರಿಕನ್ ವಕೀಲ ವಿಜಯ್ ಶಂಕರ್ ಅವರ ನಾಮನಿರ್ದೇಶನವನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಿಂದಕ್ಕೆ ಪಡೆದುಕೊಂಡಿದ್ದಾರೆ.

ವಿಜಯ್ ಶಂಕರ್ ಅವರನ್ನು ಈ ಉನ್ನತ ನ್ಯಾಯಾಂಗ ಸ್ಥಾನಕ್ಕೆ ಜನವರಿ 2ರಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮರು ನಾಮನಿರ್ದೇಶನ ಮಾಡಿದ್ದರು. ಜೋ ಬೈಡನ್ ಎದುರು ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ ಎರಡು ತಿಂಗಳ ಬಳಿಕ ಹಾಗೂ ಬೈಡನ್ ಅವರಿಗೆ ಅಧಿಕಾರ ಹಸ್ತಾಂತರಿಸುವ ಎರಡು ವಾರಗಳ ಮೊದಲು ಈ ನಾಮನಿರ್ದೇಶನ ನಡೆದಿತ್ತು.

ವಿಜಯ್ ಶಂಕರ್ ಅವರೊಂದಿಗೆ 30ಕ್ಕೂ ಅಂತಹ ನಾಮನಿರ್ದೇಶನಗಳನ್ನು ವಾಪಸ್ ಪಡೆದುಕೊಳ್ಳಲು ಸೆನೆಟ್‌ಗೆ ಅಧಿಸೂಚನೆ ಸಲ್ಲಿಸಲಾಗಿದೆ. ಇವುಗಳಲ್ಲಿ ಹೆಚ್ಚಿನವು ಡೊನಾಲ್ಡ್ ಟ್ರಂಪ್ ಆಡಳಿತವು ಕಳೆದ ಕೆಲವು ತಿಂಗಳಲ್ಲಿ ಘೋಷಿಸಿದ್ದ ನೇಮಕಗಳಾಗಿವೆ.

Joe Biden Withdraws Nomination Of Indian American Vijay Shanker For Associate Judge

ವಿಜಯ್ ಶಂಕರ್ ಅವರು 2012ರಲ್ಲಿ ನ್ಯಾಯಾಂಗ ಇಲಾಖೆಯನ್ನು ಸೇರಿಕೊಂಡಿದ್ದರು. ವಾಷಿಂಗ್ಟನ್ ಡಿಸಿಯಲ್ಲಿ ಮೇಯರ್ ಬ್ರೌನ್, ಎಲ್‌ಎಲ್‌ಸಿ ಮುಂತಾದ ಕಚೇರಿಗಳಲ್ಲಿ ಖಾಸಗಿಯಾಗಿ ವಕೀಲಿಕೆ ಮಾಡುತ್ತಿದ್ದರು. ಕಾನೂನು ಶಾಲೆಯಲ್ಲಿ ಪದವಿ ಪಡೆದ ಬಳಿಕ ಅವರು ನ್ಯಾಯಾಧೀಶ ಚೆಸ್ಟರ್ ಜೆ ಸ್ಟ್ರಾಬ್ ಬಳಿ ಕಾನೂನು ಕ್ಲರ್ಕ್ ಆಗಿ ಕೆಲಸ ಮಾಡಿದ್ದರು. ಡ್ಯೂಕ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ, ವರ್ಜೀನಿಯಾ ಸ್ಕೂಲ್ ಆಫ್ ಲಾ ವಿಶ್ವವಿದ್ಯಾಯದಲ್ಲಿ ಜೂರಿಸ್ ಡಾಕ್ಟರ್ ಪದವಿ ಪಡೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+