ಕನ್ನಡಿಗ ವಿವೇಕ್ ಮೂರ್ತಿಗೆ ಮಹತ್ವದ ಹುದ್ದೆ ನೀಡಿದ ಬೈಡನ್

ವಾಷಿಂಗ್ಟನ್, ನ.9: ಯುಎಸ್ಎನಲ್ಲಿ ಕೊರೊನಾವೈರಸ್ ಸೋಂಕು ತಡೆಗಾಗಿ ಕಾರ್ಯಪಡೆಯನ್ನು ರಚಿಸಲಾಗಿದ್ದು, ಇಂಡೋ-ಅಮೆರಿಕನ್, ಕರ್ನಾಟಕ ಮೂಲದ ಡಾ.ವಿವೇಕ್ ಮೂರ್ತಿ ಅವರಿಗೆ ಪ್ರಮುಖ ಸ್ಥಾನ ನೀಡಲಾಗಿದೆ.

Recommended Video

      Joe Biden Family Connection with India : ನಮ್ ಕುಟುಂಬದವರು ಇನ್ನೂ ಮುಂಬೈ ಅಲ್ಲಿ ಇದಾರೆ! | Oneindia Kannada

      ಮಂಡ್ಯದ ಜಿಲ್ಲೆ ಮದ್ದೂರು ತಾಲೂಕಿನ ಹಲ್ಲೆಗೆರೆ ಗ್ರಾಮದವರಾಗಿರುವ ವಿವೇಕ್ ಮೂರ್ತಿ ಈ ಹಿಂದೆ ಒಬಾಮಾ ಅವರ ಸರ್ಜನ್ ಜನರಲ್ ಆಗಿದ್ದರು. ಆ ಮೂಲಕ ಒಬಾಮಾ ಆಡಳಿತ ಅವಧಿಯ ಆರೋಗ್ಯ ಕ್ಷೇತ್ರದ ಮುಖವಾಣಿಯಂತೆ ಬಿಂಬಿತರಾಗಿದ್ದರು.

      ಕೊರೊನಾವೈರಸ್ ಕಾರ್ಯಪಡೆಯಲ್ಲಿ ಡಾ. ವಿವೇಕ್ ಮೂರ್ತಿ, ಎಫ್ ಡಿಎ ಮಾಜಿ ಆಯುಕ್ತ ಡೇವಿಡ್ ಕೆಸ್ಲರ್, ಯೇಲ್ ವಿವಿಯ ಡಾ ಮಾರ್ಸೆಲ್ಲಾ ನುನೆಜ್ ಸ್ಮಿತ್ ಸೇರಿದಂತೆ 13 ಮಂದಿ ಇರಲಿದ್ದಾರೆ. ಡಾ ಲೂಸಿಯಾನಾ ಬೊರಿಯೋ, ಡಾ, ಜೇಕೆ ಇಮ್ಯಾನುಯಲ್ ಪ್ರಮುಖರಾಗಿದ್ದಾರೆ.

      Joe Biden to name Vivek Murthy, David Kessler to virus panel

      ಬೈಡನ್ ಅವರು ತಮ್ಮ ಮೊದಲ ಭಾಷಣದಲ್ಲೇ ಕೊರೊನಾ ನಿಯಂತ್ರಣದ ಬಗ್ಗೆ ಮಾತನಾಡಿದ್ದು, ''ನಮ್ಮ ಕೋವಿಡ್ ತಡೆ ಯೋಜನೆಯ ನೀಲನಕ್ಷೆ ರೂಪಿಸಲು ಪ್ರಮುಖ ವಿಜ್ಞಾನಿಗಳನ್ನು ಹಾಗೂ ತಜ್ಞರನ್ನೊಳಗೊಂಡ ತಂಡವೊಂದನ್ನು ಸೋಮವಾರ ಘೋಷಿಸಲಿದ್ದೇನೆ. 2021ರ ಜನವರಿ 20ರಿಂದ ಯೋಜನೆ ಅನುಷ್ಠಾನಕ್ಕೆ ಬರಲಿದೆ. ವಿಜ್ಞಾನದ ತಳಹದಿಯಲ್ಲೇ ಯೋಜನೆ ರೂಪಿಸಲಾಗುತ್ತದೆ'' ಎಂದಿದ್ದಾರೆ.

      ಅಮೆರಿಕದಲ್ಲಿ ಕೊರೊನಾ ಸೋಂಕು ಬಗ್ಗೆ ಟ್ರಂಪ್ ಸರ್ಕಾರಕ್ಕೆ ಆರಂಭದಲ್ಲೇ ಎಚ್ಚರಿಕೆ ನೀಡಿದ್ದ ಕಾರ್ಯಕರ್ತ ರಿಕ್ ಬ್ರೈಟ್ ಅವರು ಕೂಡಾ ಕೊರೊನಾವೈರಸ್ ಸಲಹಾ ಸಮಿತಿ ಸೇರಲಿದ್ದಾರೆ.

      ಅಮೆರಿಕದಲ್ಲಿ ಕೊರೊನಾ ನಿಯಂತ್ರಣ ಸಿಗದಂತೆ ಹಬ್ಬುತ್ತಿದೆ ನವೆಂಬರ್ 9ರಂದು 10,297,351 ಸೋಂಕಿತರನ್ನು ಹೊಂದಿದ್ದು, 243,807 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರು ಹಾಗೂ ಸಾವಿನ ಸಂಖ್ಯೆಯಲ್ಲಿ ಯುಎಸ್ಎ ವಿಶ್ವದಲ್ಲೇ ಅಧಿಕವಾಗಿದೆ. 6,484,054 ಮಂದಿ ಗುಣಮುಖರಾಗಿದ್ದು, ಭಾರತ ಬಿಟ್ಟರೆ ಅಮೆರಿಕದಲ್ಲೇ ಚೇತರಿಕೆ ಕಂಡವರು ಹೆಚ್ಚು ಪ್ರಮಾಣದಲ್ಲಿದ್ದಾರೆ. ಸೋಂಕು ನಿಯಂತ್ರಣ ಜೊತೆಗೆ ಲಸಿಕೆ ಅಭಿವೃದ್ಧಿ ಬಗ್ಗೆ ಕಾರ್ಯಪಡೆ ನಿಗಾ ವಹಿಸಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+