ಅಮೆರಿಕದ ಸೆನೆಟ್ ಗೆ ಸತತ ಮೂರನೇ ಬಾರಿಗೆ ಪ್ರಮೀಳಾ ಜಯಪಾಲ್ ಆಯ್ಕೆ
ವಾಷಿಂಗ್ಟನ್, ನ.4: ಸತತ ಮೂರನೇ ಬಾರಿಗೆ ಅಮೆರಿಕದ ಸೆನೆಟ್ ಗೆ ಭಾರತೀಯ ಮೂಲದ ಪ್ರಮೀಳಾ ಜಯಪಾಲ್ ಆಯ್ಕೆಯಾಗಿದ್ದಾರೆ. ಅಮೆರಿಕದ ಜನಪ್ರತಿನಿಧಿಗಳ ಸಭೆಗೆ ಪುನಾರಾಯ್ಕೆಯಾಗಿರುವ ಪ್ರಮೀಳಾ ಅವರು ಚೆನ್ನೈ ಮೂಲದವರು. ಅಮೆರಿಕದ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕಮಲಾ ಹ್ಯಾರೀಸ್ ಪರ ಬೆಂಬಲ ವ್ಯಕ್ತಪಡಿಸಿ ಪನೀರ್ ಟಿಕ್ಕಾ ಮಾಡಿ ಪ್ರಮೀಳಾ ಫುಲ್ ಟ್ರೆಂಡ್ ಆಗಿದ್ದರು.
55 ವರ್ಷ ವಯಸ್ಸಿನ ಪ್ರಮೀಳಾ ಅವರು ಡೆಮಾಕ್ರೆಟಿಕ್ ಪಕ್ಷದವರಾಗಿದ್ದು, ರಿಪಬ್ಲಿಕನ್ ಪಕ್ಷದ ಕ್ರೆಗ್ ಕೆಲ್ಲರ್ ಅವರನ್ನು ಶೇ 70ಕ್ಕೂ ಅಧಿಕ ಅಂತರದ ಮತಗಳಿಂದ ಸೋಲಿಸಿದ್ದಾರೆ. ವಾಷಿಂಗ್ಟನ್ ರಾಜ್ಯದ 7ನೇ ಕಾಂಗ್ರೆಸ್ಸಿನಲ್ ಡಿಸ್ಟ್ರಿಕ್ ನಿಂದ ಸ್ಪರ್ಧಿಸಿದ್ದರು.
ಯುಎಸ್ ಕಾಂಗ್ರೆಸ್ ನಲ್ಲಿ ಪ್ರಮುಖ ಜನಪ್ರತಿನಿಧಿಯಾಗಿರುವ ಪ್ರಮೀಳಾ ಅವರು 344,541 ಮತಗಳಿಸಿದರೆ, ಕೆಲ್ಲರ್ 61,940 ಮತ ಮಾತ್ರ ಗಳಿಸಿದರು. 2016ರಲ್ಲಿ ಸೆನೆಟ್ ಗೆ ಆಯ್ಕೆಯಾದ ಮೊದಲ ಭಾರತೀಯ ಮೂಲದ ಮಹಿಳೆ ಎನಿಸಿಕೊಂಡಿದ್ದರು. ಜಮ್ಮು ಮತ್ತು ಕಾಶ್ಮೀರದ ವಿಶೇಷ ಹಕ್ಕು, ಆರ್ಟಿಕಲ್ 370, ನಾಗರಿಕ ಪೌರತ್ವ ಕಾಯ್ದೆ ಜಾರಿ ಕುರಿತಂತೆ ಮೋದಿ ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ಪ್ರಮೀಳಾ ಟೀಕಿಸಿದ್ದರು.

ನೀರಜ್ ಅಂತಾನಿಗೆ ಜಯ
ಇದೇ ಮೊದಲ ಬಾರಿಗೆ ಒಹಾಯೊ ರಾಜ್ಯದಿಂದ ಸೆನೆಟ್ ಗೆ ಭಾರತೀಯ ಮೂಲದ 29 ವರ್ಷ ವಯಸ್ಸನ್ ನೀರಜ್ ಅಂತಾನಿ ಆಯ್ಕೆಯಾಗಿದ್ದಾರೆ. ಈ ರಾಜ್ಯದಿಂದ ಸೆನೆಟ್ ಗೆ ಆಯ್ಕೆಯಾದ ಮೊದಲ ಭಾರತೀಯ ಮೂಲದವರಾಗಿದ್ದಾರೆ. ಒಹಾಯೋ 6ನೇ ಡಿಸ್ಟ್ರಿಕ್ ನಿಂದ ಸ್ಪರ್ಧಿಸಿದ್ದ ರಿಪಬ್ಲಿಕನ್ ನೀರಜ್ ಅವರು ಡೆಮಾಕ್ರೆಟಿಕ್ ಪಕ್ಷದ ಮಾರ್ಕ್ ಫೊಜೆಲ್ ಅವರನ್ನು ಸೋಲಿಸಿದರು.












Click it and Unblock the Notifications