ಭಾರತೀಯ ಮೂಲದ ಅಭಿಜಿತ್, ಪತ್ನಿಗೆ ಅರ್ಥಶಾಸ್ತ್ರದ ನೊಬೆಲ್ ಗೌರವ
Recommended Video

ವಾಷಿಂಗ್ಟನ್, ಅಕ್ಟೋಬರ್ 14: ಅಮೆರಿಕದಲ್ಲಿ ವಾಸವಿರುವ ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿ ತ್ತು ಅವರ ಪತ್ನಿ ಈಸ್ಟರ್ ಡಲ್ಫೋ ಅವರಿಗೆ 2019 ನೇ ಸಾಲಿನ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಲಭ್ಯವಾಗಿದೆ.
ಅರ್ಥಶಾಸ್ತ್ರಜ್ಞ ಮೈಖೇಲ್ ಕ್ರೆಮರ್ ವರೊಂದಿಗೆ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಅಭಿಜಿತ್ ಬ್ಯಾನರ್ಜಿ ಹಂಚಿಕೊಂಡಿದ್ದಾರೆ.
"ಜಾಗತಿಕ ಬಡತನ ನಿವಾರಿಸುವ" ಕುರಿತಂತೆ ಈ ಮೂವರು ಮಾಡಿದ ಸಂಶೋಧನೆಯನ್ನು ಮನಗಂಡು ಈ ಪ್ರಶಸ್ತಿ ನೀಡಲಾಗಿದೆ ಎಂದು ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸ್ ಘೋಷಣೆ ಮಾಡಿದೆ.

ಕಳೆದ ಎರಡು ದಶಕಗಳಲ್ಲಿ ಅಭಿವೃದ್ಧಿ ಆರ್ಥಿಕತೆಗೆ ಸಂಬಂಧಿಸಿದಂತೆ ಇವರು ಮಾಡಿದ ಸಂಶೋಧನೆ ಮತ್ತು ಪ್ರಯೋಗಗಳು ಜಾಗತಿಕ ಬಡತನವನ್ನು ಹೋಗಲಾಡಿಸುವಲ್ಲಿ ನೆರವಾಗಿವೆ ಎಂಬ ಕಾರಣಕ್ಕೆ ಅವರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ.
58 ವರ್ಷ ವಯಸ್ಸಿನ ಅಭಿಜಿತ್ ಬ್ಯಾನರ್ಜಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಮಾಡುತ್ತಿದ್ದರು. ಅಮೆರಿಕದ ಮೆಸಾಚ್ಯುಯೇಟ್ಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದ ಅಭಿಜಿತ್ ಪಶ್ಚಿಮಬಂಗಾಳದ ಕೊಲ್ಕತ್ತಾ ಮೂಲದವರು.
ಇನ್ನು ಇವರೊಂದಿಗೆ ಪ್ರಶಸ್ತಿಯನ್ನು ಹಂಚಿಕೊಂಡ ಇಬ್ಬರಲ್ಲಿ ಒಬ್ಬರಾದ 47 ವರ್ಷ ವಯಸ್ಸಿನ ಇಸ್ಟರ್ ಡುಲ್ಫೋ ಅವರು ಬ್ಯಾನರ್ಜಿ ಅವರ ಪತ್ನಿಯಾಗಿದ್ದು, ಅವರ ಸಹೋದ್ಯೋಗಿಯಾಗಿದ್ದರು.
ಪ್ರಶಸ್ತಿ ಪಡೆದ ಮೂವರಿಗೆ 9 ಮಿಲಿಯನ್ ಸ್ವೀಡಿಶಸ್ ಕ್ರೋನಾವನ್ನು ಸಮಾನವಾಗಿ ಹಂಚಲಾಗುತ್ತದೆ. 9 ಮಿಲಿಯನ್ ಸ್ವೀಡಿಶ್ ಕ್ರೋನಾ ಎಂದರೆ ಭಾರತೀಯ ರೂಪಾಯಿಯಲ್ಲಿ 6.5 ಕೋಟಿ ರೂ.












Click it and Unblock the Notifications