ಆನ್ ಲೈನ್ ಕಾಯ್ದೆ ಉಲ್ಲಂಘಿಸಿದ ಗೂಗಲ್; 1224 ಕೋಟಿ ಪಾವತಿಗೆ ಒಪ್ಪಿಗೆ

ಯೂಟ್ಯೂಬ್ ವಿಡಿಯೋ ಸೇವೆ ಮೂಲಕ ಮಕ್ಕಳ ಮಾಹಿತಿಯನ್ನು ಕಾನೂನು ಬಾಹಿರವಾಗಿ ಸಂಗ್ರಹ ಮಾಡಿದ ಹಾಗೂ ಹಂಚಿಕೊಂಡ ಆರೋಪದ ಹಿನ್ನೆಲೆಯಲ್ಲಿ ಗೂಗಲ್ ಕಂಪೆನಿ 170 ಮಿಲಿಯನ್ ಅಮೆರಿಕನ್ ಡಾಲರ್ (ಭಾರತೀಯ ಮೌಲ್ಯದಲ್ಲಿ 1224 ಕೋಟಿ ರುಪಾಯಿ) ದಂಡ ಪಾವತಿಸಲು ಒಪ್ಪಿಕೊಂಡಿದೆ. ಪೋಷಕರ ಅನುಮತಿ ಇಲ್ಲದೆ ಮಾಹಿತಿ ಕಲೆ ಹಾಕಲಾಗಿತ್ತು ಎಂದು ಬುಧವಾರ ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ಮಕ್ಕಳ ಆನ್ ಲೈನ್ ಖಾಸಗಿ ರಕ್ಷಣಾ ಕಾಯ್ದೆ ಒಳಗೊಂಡ ಪ್ರಕರಣದಲ್ಲಿ ಫೆಡರಲ್ ವ್ಯಾಪಾರ ಆಯೋಗ ಹಾಗೂ ನ್ಯೂಯಾರ್ಕ್ ರಾಜ್ಯ ಅಟಾರ್ನಿ ಜನರಲ್ ಜತೆಗೆ ಮಾಡಿಕೊಂಡ ಅತಿ ದೊಡ್ಡ ಮೊತ್ತದ ಒಪ್ಪಂದ ಇದಾಗಿದೆ. ಮಕ್ಕಳ ಮಧ್ಯೆ ಯೂಟ್ಯೂಬ್ ಗೆ ಇರುವ ಜನಪ್ರಿಯತೆಯನ್ನು ತನ್ನ ಕಾರ್ಪೊರೇಟ್ ಗ್ರಾಹಕರ ಬಳಿ ಮಾರಲು ಬಳಸುತ್ತಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Google Fined For 170 Million US Dollar In America

ಆನ್ ಲೈನ್ ಕಾಯ್ದೆಯ ವ್ಯಾಪ್ತಿಯೊಳಗೇ ಕಾರ್ಯ ನಿರ್ವಹಿಸಬೇಕಾದ ಗೂಗಲ್ ನಿಂದ ಎಲ್ಲಿ ನಿಯಮ ಉಲ್ಲಂಘನೆ ಆಗಿದೆ ಎಂಬ ಬಗ್ಗೆ ಹೇಳಿಕೊಳ್ಳಲು ನಿರಾಕರಿಸಿದೆ. ಕಾನೂನು ಉಲ್ಲಂಘಿಸಿರುವ ಕಾರಣಕ್ಕೆ ಯೂಟ್ಯೂಬ್ ಗೆ ಯಾವುದೇ ಕಾರಣಕ್ಕೂ ಕ್ಷಮೆ ಸಾಧ್ಯವೇ ಇಲ್ಲ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+