ಜಾರ್ಜ್ ಫ್ಲಾಯ್ಡ್ ಸಾವು ಪ್ರಕರಣ: 196.2 ಕೋಟಿ ಪರಿಹಾರಕ್ಕೆ ಒಪ್ಪಿಗೆ

ವಾಷಿಂಗ್ಟನ್, ಮಾರ್ಚ್ 13: ಪೊಲೀಸ್‌ ಕಸ್ಟಡಿಯಲ್ಲಿದ್ದಾಗಲೇ ಮೃತಪಟ್ಟಿದ್ದ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಅವರ ಕುಟುಂಬಕ್ಕೆ 196.2 ಕೋಟಿ ರೂ. ಪಾವತಿಸಲು ಮಿನಿಯಾಪೊಲಿಸ್ ನಗರ ಕೌನ್ಸಿಲ್ ಒಪ್ಪಿಗೆ ನೀಡಿದೆ.

ಕಳೆದ ಮೇ 25 ರಂದು ಫ್ಲಾಯ್ಡ್ ಸಾಯುವ ಮುನ್ನ ಬಿಳಿಯ ಪೊಲೀಸ್ ಅಧಿಕಾರಿ ಡೆರೆಕ್ ಅವರ ಕತ್ತನ್ನು 9 ನಿಮಿಷಗಳ ಕಾಲ ಮೊಣಕಾಲಿನಿಂದ ಬಿಗಿಯಾಗಿ ಒತ್ತಿ ಹಿಡಿದಿದ್ದರು. ಫ್ಲಾಯ್ಡ್ ಸಾವು ಅಮೆರಿಕದಲ್ಲಿ ವ್ಯಾಪಕ ಪ್ರತಿಭಟನೆ, ಹಿಂಸಾಚಾರಕ್ಕೆ ಕಾರಣವಾಗಿತ್ತು.

ಶುಕ್ರವಾರ ಕೌನ್ಸಿಲ್ ಸದಸ್ಯರು ಮೊದಲು ಖಾಸಗಿಯಾಗಿ ಚರ್ಚೆ ನಡೆಸಿದರು, ಬಳಿಕ ಬಹಿರಂಗ ಅಧಿವೇಶನದಲ್ಲಿ ಈ ದೊಡ್ಡ ಮೊತ್ತದ ಪರಿಹಾರ ನೀಡುವುದಕ್ಕೆ ಬೆಂಬಲ ಸೂಚಿಸಲಾಯಿತು.

Floyd Family Agrees To USD 27M Settlement Amidst Ex-Cops Trial

ವಿಚಾರಣೆಯ ಆರಂಭದಲ್ಲೇ ಇತ್ಯರ್ಥಗೊಂಡ ಅತಿ ಹೆಚ್ಚಿನ ಮೊತ್ತ ಇದಾಗಿದೆ ಎಂದು ಫ್ಲಾಯ್ಡ್ ಕುಟುಂಬದ ಅಟಾರ್ನಿ ಬೆನ್ ಕ್ರಂಪ್ ಹೇಳಿದ್ದಾರೆ. ಹಾಗೆಯೇ ಪ್ರಕರಣ ಇತ್ಯರ್ಥಕ್ಕೆ ನೆರವಾದ ನಾಗರಿಕ ಮುಂದಾಳುಗಳಿಗೆ ಕೃತಜ್ಞತೆ ಸಲ್ಲಿಸಿದ ಅವರು ಇದು ಫ್ಲಾಯ್ಡ್ ಬಗ್ಗೆ ನಿಮಗೆ ಕಾಳಜಿ ಎಷ್ಟಿದೆ ಎಂಬುದನ್ನು ತೋರಿಸುತ್ತದೆ ಎಂದರು.

ಎರಡು ವರ್ಷಗಳ ಹಿಂದೆ ಪೊಲೀಸ್ ಅಧಿಕಾರಿಗಳಿಂದ ಕೊಲ್ಲಲ್ಪಟ್ಟ ಮಹಿಳೆಯ ಕುಟುಂಬಕ್ಕೆ 145.3 ಕೋಟಿ ರೂ. ನೀಡಲಾಗಿತ್ತು. ಈ ಬಳಿಕ ಇದೇ ಮೊದಲ ಬಾರಿ ನಾಗರಿಕ ಮೊಕದ್ದಮೆಯಲ್ಲಿ ದೊಡ್ಡ ಮೊತ್ತವನ್ನು ಜಾರ್ಜ್ ಫ್ಲಾಯ್ಡ್ ಕುಟುಂಬಕ್ಕೆ ನೀಡಲಾಗುತ್ತಿದೆ ಎಂದು ಹೇಳಿದರು.

ಈ ಒಪ್ಪಂದವು ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದು ತಿಳಿದಿಲ್ಲ. ಆದರೆ ಈ ಮೂಲಕ ನಾವು ನ್ಯಾಯವನ್ನು ಕೊಡಿಸಲು ಪ್ರಯತ್ನಿಸುತ್ತಿದ್ದೇವೆ, ಹಲವು ಕಪ್ಪು ವರ್ಣೀಯರಿಗೆ ನ್ಯಾಯದ ಮೇಲೆ ಭರವಸೆಯಿಲ್ಲ. ಜಾರ್ಜ್ ಫ್ಲಾಯ್ಡ್ ಹತ್ಯೆಗೈದ ಅಧಿಕಾರಿಗೆ ಶಿಕ್ಷೆ ಸಿಗುತ್ತದೆ ಎನ್ನುವ ಭತವಸೆಯೂ ಇಲ್ಲ ಎಂದು ಕ್ರಂಪ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+