ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಲಿ ರೈಡ್‌ ಹೋದ ಕುಟುಂಬಕ್ಕೆ ರಸ್ತೆಯಲ್ಲಿ ಸಿಕ್ತು ಕಂತೆ ಕಂತೆ ನೋಟು

|
Google Oneindia Kannada News

ವಾಷಿಂಗ್ಟನ್, ಮೇ 20: ಕುಟುಂಬದ ಜೊತೆ ಜಾಲಿ ರೈಡ್‌ ಹೋಗುತ್ತಿದ್ದ ಕುಟುಂಬಕ್ಕೆ ಮಾರ್ಗಮಧ್ಯೆ ಕಂತೆ ಕಂತೆ ಹಣದ ನೋಟು ತುಂಬಿರುವ ಮೂಟೆಗಳು ಸಿಕ್ಕಿರುವ ಘಟನೆ ಅಮೆರಿಕದ ವರ್ಜೀನಿಯಾದಲ್ಲಿ ನಡೆದಿದೆ.

ಲಾಕ್‌ಡೌನ್‌ನಿಂದ ವಿನಾಯಿತಿ ಸಿಕ್ಕ ಸಂತಸದಲ್ಲಿ ಡೇವಿಡ್ ಮತ್ತು ಎಮಿಲಿ ಶಾಂಟ್ಜ್ ದಂಪತಿ ತಮ್ಮ ಮಕ್ಕಳೊಂದಿಗೆ ಜಾಲಿ ರೈಡ್‌ ಮಾಡಲು ನಿರ್ಧರಿಸಿ ಕ್ಯಾರೋಲಿನ್ ಕೌಂಟಿಯ ಮನೆಯಿಂದ ಕಾರಿನಲ್ಲಿ ಹೊರಟರು.

ಕೊರೊನಾ ಭಯ: ಡೊನಾಲ್ಡ್‌ ಟ್ರಂಪ್ ಈ ಮಾತ್ರೆಯನ್ನು ಪ್ರತಿ ದಿನ ಸೇವಿಸ್ತಿದ್ರುಕೊರೊನಾ ಭಯ: ಡೊನಾಲ್ಡ್‌ ಟ್ರಂಪ್ ಈ ಮಾತ್ರೆಯನ್ನು ಪ್ರತಿ ದಿನ ಸೇವಿಸ್ತಿದ್ರು

ರಸ್ತೆ ಮಧ್ಯೆ ಕಸದ ಚೀಲದಂತೆ ಎರಡು ಮೂಟೆ ಬಿದ್ದಿತ್ತು. ಅನುಮಾನ ಬಂದು ಅದನ್ನು ಪರಿಶೀಲಿಸಿದಾಗ ಅದರಲ್ಲಿ ಕಂತೆ ಕಂತೆ ಹಣ ಕಂಡು ಬಂದಿದೆ ಎಂದು ಮಂಗಳವಾರ ಯುಎಸ್ ಮೂಲದ ಸುದ್ದಿಪತ್ರಿಕೆಗಳು ವರದಿ ಮಾಡಿವೆ.

Family Found 1 Million Dollars Cash Laying In The Road

ಕೂಡಲೇ ಈ ಬಗ್ಗೆ ಕ್ಯಾರೋಲಿನ್ ಕೌಂಟಿಯ ಪೊಲೀಸ್ ಕಚೇರಿಗೆ ಮಾಹಿತಿ ನೀಡಲಾಯಿತು. ಅವರು ತಮ್ಮ ಸಿಬ್ಬಂದಿಯನ್ನು ಕಳುಹಿಸಿ ಪರಿಶೀಲಿಸಿದರು. ಬಳಿಕ ಅದರಲ್ಲಿ ಒಂದು ಮಿಲಿಯನ್ ಡಾಲರ್ ಹಣ ಎಂದು ತಿಳಿದು ಬಂದಿದೆ.

ಸದ್ಯಕ್ಕೆ ಆ ಹಣ ಯಾರದ್ದು ಎನ್ನುವುದು ತಿಳಿದಿಲ್ಲ. ಆ ಹಣ ಅಲ್ಲಿಗೆ ಹೇಗೆ ಬಂತು ಎನ್ನುವುದರ ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನು ಹಣದ ಬಗ್ಗೆ ಮಾಹಿತಿ ನೀಡಿದ ಡೇವಿಡ್ ಮತ್ತು ಎಮಿಲಿ ಶಾಂಟ್ಜ್ ದಂಪತಿಯ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

English summary
The family found $1 million dollars in cash lying in the road, they called the police and returns it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X