ಕೊರೊನಾ ಎಫೆಕ್ಟ್: ಯುರೋಪಿಯನ್ನರನ್ನು ನಿಷೇಧ ಮಾಡಿದ ಅಮೆರಿಕ

ವಾಷಿಂಗ್ಟನ್, ಮಾರ್ಚ್ 11: ಅಮೇರಿಕಾ ಸರ್ಕಾರ ಯುರೋಪಿಯನ್‌ನರ ವೀಸಾ ರದ್ದು ಮಾಡಿದೆ. ಕೊರೊನಾ ವೈರಸ್ ಭೀತಿ ಹಿನ್ನಲೆ ಈ ಕ್ರಮಕ್ಕೆ ಕೇಂದ್ರ ಮುಂದಾಗಿದೆ.

ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುರೋಪಿಯನ್‌ನರ ಮೇಲೆ ನಿಷೇಧ ಏರಲು ನಿರ್ಧಾರ ತೆಗೆದುಕೊಂಡಿದ್ದಾರೆ. 30 ದಿನಗಳ ಕಾಲ ಯುರೋಪಿಯನ್‌ನರನ್ನು ದೇಶ ಪ್ರವೇಶಿಸಲು ನಿರ್ಬಂಧ ಏರಲಾಗಿದೆ. ಟ್ರಂಪ್ ತೆಗೆದುಕೊಂಡ ಈ ನಿರ್ಧಾರದಿಂದ ವಿಮಾನಯಾನ ಉದ್ಯಮಕ್ಕೆ ಹಿನ್ನಡೆಯಾಗಿದೆ.

ಭಾರತದಲ್ಲಿಯೂ ಮಾರ್ಚ್ 13 ರಿಂದ ಈ ನಿಯಮ ಜಾರಿಗೆ ಬರಲಿದೆ. ಏಪ್ರಿಲ್ 15 ರವರೆಗೆ ವಿದೇಶಿಗರಿಗೆ ವೀಸಾ ರದ್ದು ಮಾಡಲಾಗಿದೆ. ಯೂರೋಪ್ ರಾಷ್ಟ್ರಗಳಲ್ಲಿ ಕೊರೊನಾ ಸೋಂಕು ಹೆಚ್ಚಿನ ಮಟ್ಟದಲ್ಲಿ ಇದ್ದು, ಅಲ್ಲಿಂದ ಬರುವ ಪ್ರಯಾಣಿಕರಿಗೆ ವೀಸಾ ನೀಡುವುದಿಲ್ಲ.

Donald Trump Suspends Travel From Europe To America Because Of Corona

ಚೀನಾದಿಂದ ಪ್ರಾರಂಭವಾದ ಕೊರೊನಾ ವೈರಸ್ ಇಡೀ ಪ್ರಪಂಚದ ತುಂಬ ತುಂಬಿದೆ. ಭಾರತದಲ್ಲಿಯೂ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಪ್ರಮುಖವಾಗಿ ವಿದೇಶದಿಂದ ಬಂದ ವ್ಯಕ್ತಿಗಳಿಗೆ ಸೋಂಕು ಹರಡಿದ್ದು, ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ.

ಕೊರೊನಾ ವೈರಸ್‌ ಅನ್ನು ಸಾಂಕ್ರಾಮಿಕ ರೋಗ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದೆ.

ನಿನ್ನೆ (ಮಾರ್ಚ್ 11) ಬ್ರಿಟನ್ ನಲ್ಲಿ ಭಾರತೀಯ ಮೂಲದ ಮನೋಹರ್ ಎಂಬ ವ್ಯಕ್ತಿ ಕೊರೊನಾ ದಿಂದ ಮೃತಪಟ್ಟಿದ್ದಾರೆ. ಹೈದರಾಬಾದ್ ನಲ್ಲಿ ಕೊರೊನಾ ಸೋಂಕು ಹೊಂದಿದ್ದ ಕರ್ನಾಟಕದ ವೃದ್ಧ ಸಹ ಮರಣ ಹೊಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+