ಯುಎಸ್ ಮಾಜಿ ಅಧ್ಯಕ್ಷ ಟ್ರಂಪ್ ವಿರುದ್ಧ ವಾಗ್ದಂಡನೆ, ಹೇಗೆ? ಏನು? ಎತ್ತ?
ಅಮೆರಿಕದ ಮಾಜಿ ಅಧ್ಯಕ್ಷರೊಬ್ಬರ ವಿರುದ್ಧ ಇದೇ ಮೊದಲ ಬಾರಿಗೆ ವಾಗ್ದಂಡನೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಅಧ್ಯಕ್ಷರಾಗಿದ್ದಲ್ಲೇ ಎರಡು ಬಾರಿ ವಾಗ್ದಂಡನೆ ಎದುರಿಸಿದ್ದ ಟ್ರಂಪ್ ಅವರು ಅಧಿಕಾರದಿಂದ ಕೆಳಗಿಳಿದ ಬಳಿಕವೂ ವಿಚಾರಣೆ ಎದುರಿಸಬೇಕಾದ ಪ್ರಸಂಗ ಎದುರಾಗಿದೆ.
ಅಮೆರಿಕದ ಸಂಸತ್ ಸಭೆ ನಡೆಯುವ ಕ್ಯಾಪಿಟಲ್ ಹಿಲ್ ಮೇಲೆ ಟ್ರಂಪ್ ಮತ್ತು ಬೆಂಬಲಿಗರು ದಾಳಿ ನಡೆಸಿದ ನಂತರ ಡೆಮಾಕ್ರಟಿಕ್ ಪಕ್ಷದ ಸಂಸದರು ಟ್ರಂಪ್ ವಿರುದ್ಧ ವಾಗ್ದಂಡನೆ ನಡೆಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಇದರಲ್ಲಿ ಸಫಲರಾಗಲು ರಿಪಬ್ಲಿಕನ್ಸ್ ಬೆಂಬಲವೂ ಅಗತ್ಯವಿತ್ತು.
ಅಮೆರಿಕದಲ್ಲಿ ವಾಗ್ದಂಡನೆ, ಮಹಾಭಿಯೋಗ ಪ್ರಕ್ರಿಯೆ ಹೊಸದೇನಲ್ಲ, 1868ರಲ್ಲಿ ಆಂಡ್ರೂ ಜಾನ್ಸನ್ ಮತ್ತು 1998ರಲ್ಲಿ ಬಿಲ್ ಕ್ಲಿಂಟನ್ ವಾಗ್ದಂಡನೆಯ ಮೂಲಕ ಅಮೆರಿಕದ ಅಧ್ಯಕ್ಷಗಿರಿ ಕಳೆದುಕೊಂಡಿದ್ದರು. ಆದರೆ, ಟ್ರಂಪ್ ಈ ಅವಮಾನದಿಂದ ಬಚಾವಾಗಿದ್ದರು. ಆದರೆ, ಅಧಿಕಾರ ಅವಧಿ ಮುಗಿದ ಬಳಿಕ ಈಗ ಅಧಿವೇಶನ ಆರಂಭವಾಗಿದ್ದು, ಟ್ರಂಪ್ ಪರ-ವಿರೋಧ ಚರ್ಚೆ, ವಾಗ್ದಂಡನೆ ಪ್ರಕ್ರಿಯೆ ನಡೆಯಲಿದೆ.

ವಾಗ್ದಂಡನೆ ಪ್ರಕ್ರಿಯೆ ಮತ್ತೆ ಆರಂಭ
ಅಧಿಕಾರದಿಂದ ಕೆಳಗಿಳಿಯಲು ಒಂದು ವಾರವಿದ್ದಾಗ ಟ್ರಂಪ್ ವಿರುದ್ಧ ಜನವರಿಯಲ್ಲಿ ನಡೆದ ವಾಗ್ದಂಡನೆಯಲ್ಲಿ 433 ಸದಸ್ಯರು ಹಾಜರಿದ್ದ ಸೆನೆಟ್ ನಲ್ಲಿ ನಡೆದ ಮತದಾನದಲ್ಲಿ ಟ್ರಂಪ್ ವಿರುದ್ಧ 232 ಮತಗಳು (ಡೆಮಾಕ್ರೆಟ್ಸ್) ಬಂದಿತ್ತು. ಈ ಪೈಕಿ 10 ರಿಪಬ್ಲಿಕನ್ಸ್ ಮತಗಳು ಸೇರಿತ್ತು. ಟ್ರಂಪ್ ಪರ 197 ಮತ ಬಿದ್ದಿತ್ತು. ಈ ಮೂಲಕ ಎರಡು ಬಾರಿ ವಾಗ್ದಂಡನೆ ಎದುರಿಸಿದ ಮೊದಲ ಯುಎಸ್ ಅಧ್ಯಕ್ಷ ಎಂಬ ಅಪಕೀರ್ತಿಗೆ ಟ್ರಂಪ್ ಒಳಗಾಗಿದ್ದರು
ಫೆಬ್ರವರಿ 10, 2021: ಸೆನೆಟ್ ಸಂಖ್ಯೆ
ಒಟ್ಟು ಸದಸ್ಯ ಬಲ: 100
ತಪ್ಪಿತಸ್ಥ ಎಂದು ಸಾಬೀತುಪಡಿಸಲು ಬೇಕಾದ ಸಂಖ್ಯೆ: 67
ತಪ್ಪಿತಸ್ಥ ಎಂದು ಮತ ಹಾಕಲಿರುವ ಡೆಮಾಕ್ರಾಟ್ಸ್: 50
ರಿಪಬ್ಲಿಕನ್ ಮತಗಳು ಬೇಕಿರುವುದು: 17
ಸದ್ಯಕ್ಕೆ ಟ್ರಂಪ್ ವಿರುದ್ಧ ಮತ ಹಾಕಲು ಸಿದ್ದರಾದ ರಿಪಬ್ಲಿಕನ್ಸ್: 6
ಮೊದಲ ದಿನದ ಮತದಾನ:
ಚರ್ಚೆಯ ಬಳಿಕ 56 - 44 ಮತದಾನ ಫಲಿತಾಂಶ ಬಂದಿದೆ. ವಿಚಾರಣೆಗಾಗಿ 45 ರಿಪಬ್ಲಿಕನ್ಸ್ ಸೆನೆಟರ್ಸ್ ಸಹಿ ಹಾಕಿದ್ದಾರೆ. ಹೀಗಾಗಿ ವಿಚಾರಣೆ ಜಾರಿಯಲ್ಲಿರಲಿದೆ.

2019ರಲ್ಲಿ ನಡೆದಿದ್ದ ಮಹಾಭಿಯೋಗ
2019ರಲ್ಲಿ ನಡೆದಿದ್ದ ಮಹಾಭಿಯೋಗ: ಅಧಿಕಾರ ದುರುಪಯೋಗ ಮತ್ತು ಕಾಂಗ್ರೆಸ್ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಿದ್ದರ ಎರಡು ಅಂಶಗಳ ವಿರುದ್ಧ ಡೊನಾಲ್ಡ್ ಟ್ರಂಪ್ ವಿರುದ್ಧ ಡಮಾಕ್ರಟಿಕ್ ಪಕ್ಷದ ಸದಸ್ಯರು ವಾಗ್ದಂಡನೆ ನಿರ್ಣಯ ಮಂಡಿಸಿದ್ದರು. ಜನಪ್ರತಿನಿಧಿಗಳ ಸಭೆಯ ನ್ಯಾಯಾಂಗ ಸಮಿತಿಯು ಇದಕ್ಕೆ 23-17ರ ಮತಗಳಲ್ಲಿ ಅನುಮೋದನೆ ನೀಡಿತ್ತು. ಬಳಿಕ ಇದು ಜನಪ್ರತಿನಿಧಿಗಳ ಸಭೆಗೆ (ಕೆಳಮನೆ) ಬಂದಿತ್ತು. ಹತ್ತು ಗಂಟೆಗಳ ಸುದೀರ್ಘ ಚರ್ಚೆಯ ಬಳಿಕ ಮತ ಪ್ರಕ್ರಿಯೆ ನಡೆದಿದೆ. ಮೊದಲು ಅಧಿಕಾರ ದುರುಪಯೋಗದ ವಿರುದ್ಧದ ಮತ ಚಲಾವಣೆಯಾಯಿತು. ಟ್ರಂಪ್ ವಿರುದ್ಧ 230 ಮತಗಳು ಬಿದ್ದರೆ, ಅವರ ಪರ 197 ಮತಗಳು ಚಲಾವಣೆಗೊಂಡವು. ಎರಡನೆಯ ಆರೋಪವಾದ ಕಾಂಗ್ರೆಸ್ ಕಾರ್ಯಕ್ಕೆ ಅಡ್ಡಿಪಡಿಸಿದ್ದರ ಕುರಿತು ನಡೆದ ಮತ ಚಲಾಚಣೆಯಲ್ಲಿ 229-198 ಮತಗಳಿಂದ ಟ್ರಂಪ್‌ಗೆ ಸೋಲಾಯಿತು. ವಿವರ ಇಲ್ಲಿದೆ

ಟ್ರಂಪ್ ವಿರುದ್ಧ ವಾಗ್ದಂಡನೆ ನಿರ್ಣಯ
'ಎರಡು ದಶಕಗಳಲ್ಲಿ ಮೊದಲ ಬಾರಿಗೆ ಟ್ರಂಪ್ ವಿರುದ್ಧ ವಾಗ್ದಂಡನೆ ನಿರ್ಣಯ ಮಾಡುವುದು ಅನಿವಾರ್ಯವಾಗಿದೆ. ಏಕೆಂದರೆ ಟ್ರಂಪ್ ಅವರು ನಮ್ಮ ರಾಷ್ಟ್ರೀಯ ಭದ್ರತೆಗೆ ಮತ್ತು ನಮ್ಮ ಚುನಾವಣಾ ಪ್ರಕ್ರಿಯೆಯ ವ್ಯವಸ್ಥೆಗೆ ಬೆದರಿಕೆಯಾಗಿದ್ದಾರೆ' ಎಂದು ಸ್ಪೀಕರ್ ನ್ಯಾನ್ಸಿ ಪೆಲೋಸಿ ಹೇಳಿದ್ದನ್ನು ಸ್ಮರಿಸಬಹುದು. ಅಧ್ಯಕ್ಷರನ್ನು ಅವರ ಸ್ಥಾನದಿಂದ ವಜಾಗೊಳಿಸಲು ಸೆನೆಟ್ ನಲ್ಲಿ ಮೂರನೇ ಎರಡರಷ್ಟು ಮತಗಳು ಅವರ ವಿರುದ್ಧ ಬೀಳಬೇಕಾಗಿತ್ತು. ಆದರೆ, ಅಧಿಕಾರ ಅವಧಿ ಪೂರ್ಣಗೊಳ್ಳುವ ತನಕ ಕಾಯ್ದು ಮತ್ತೆ ಪ್ರಕ್ರಿಯೆ ಶುರು ಮಾಡಲಾಗಿದೆ. ಸೆನೆಟ್‌ನಲ್ಲಿ ರಿಪಬ್ಲಿಕನ್ ಪಕ್ಷವು 53-47 ಮತಗಳ ಬಹುಮತ ಹೊಂದಿದೆ. ಹೀಗಾಗಿ ಟ್ರಂಪ್ ವಿರುದ್ಧದ ವಾಗ್ದಂಡನೆ ಜಾರಿ ಮಾಡಲು ಈ ಹಿಂದೆ ಸಾಧ್ಯವಾಗಿರಲಿಲ್ಲ. ನವೆಂಬರ್ ಚುನಾವಣೆ ಬಳಿಕ ರಿಪಬ್ಲಿಕನ್ ಬಲ ಹೆಚ್ಚಿದೆ. ಆದರೆ, ಮತಗಳ ಲೆಕ್ಕಾಚಾರದಲ್ಲಿ ಕನಿಷ್ಠ 17 ಮಂದಿ ರಿಪಬ್ಲಿಕನ್ ಬೆಂಬಲ ಡೆಮಾಕ್ರಾಟಿಕ್ಸ್ ಗಳಿಗೆ ಸಿಗಬೇಕಾಗುತ್ತದೆ.

ವಿಶೇಷ ಅಧಿವೇಶನ ಕರೆದು ವಿಚಾರಣೆಗೆ ಒಳಪಡಿಸುವ ಉದ್ದೇಶವೇನು?
ವಿಶೇಷ ಅಧಿವೇಶನ ಕರೆದು ವಿಚಾರಣೆಗೆ ಒಳಪಡಿಸಿ ಟ್ರಂಪ್ ದೋಷಿ ಎಂದು ಸಾಬೀತು ಮಾಡಬಹುದು. ಹೀಗೆ ಮಾಡುವುದರಿಂದ ಇನ್ಮುಂದೆ ಶ್ವೇತಭವನದತ್ತ ಟ್ರಂಪ್ ಸುಳಿಯಲು ಸಾಧ್ಯವಾಗುವುದಿಲ್ಲ. ಜೊತೆಗೆ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹಗೊಳ್ಳಲಿದ್ದಾರೆ. ಟ್ರಂಪ್ ವಿರುದ್ಧ ಸೆನೆಟ್ ಬಹುಮತದಲ್ಲಿ ಮತ ಚಲಾಯಿಸಿದರೆ ಇದು ಸಾಧ್ಯವಿದೆ. ಇದೆಲ್ಲದರ ಹೊರತಾಗಿ ವಾಗ್ದಂಡನೆ ಮತದಾನದ ತನಕ ಕಾಯದೆ ಜನವರಿ 20ರೊಳಗೆ ಟ್ರಂಪ್ ರಾಜೀನಾಮೆ ಸಲ್ಲಿಸಬಹುದಾಗಿದೆ. ಆದರೆ, ಕ್ಷಮೆಯಾಚನೆ, ರಾಜೀನಾಮೆ ಸಲ್ಲಿಕೆ ಟ್ರಂಪ್ ಕಡೆಯಿಂದ ನಿರೀಕ್ಷಿಸಲು ಸಾಧ್ಯವಿಲ್ಲ.
-
ಭಾರತದಲ್ಲಿ ಬಗೆಹರಿಯಲಿದೆ ಎಲ್ಪಿಜಿ ಸಮಸ್ಯೆ, ನೀವು ನಮ್ಮ ಗೆಳೆಯ ಎಂದು ಕರೆದ ಇರಾನ್... Donald Trump -
ಇರಾನ್ ನೂತನ ಸರ್ವಾಧಿಕಾರಿ ಬಗ್ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಮಹತ್ವದ ಹೇಳಿಕೆ | Donald Trump -
ಕಚ್ಚಾತೈಲ ಬೆಲೆ 12,000 ರೂಪಾಯಿ ದಾಟುವ ಸಾಧ್ಯತೆ, ಶುರುವಾಯ್ತು ಹೊಸ ಆತಂಕ | Operation Roaring Lion -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
ಖಮೇನಿ ಪುತ್ರ ಮತ್ತು ಇರಾನ್ ದೇಶದ ನೂತನ ಸರ್ವಾಧಿಕಾರಿಗಾಗಿ ಇಸ್ರೇಲ್ ತೀವ್ರ ಶೋಧ | Operation Roaring Lion -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
ಎಲ್ಪಿಜಿ ನಂತರ ಅಡುಗೆ ಎಣ್ಣೆ ವಿಚಾರದಲ್ಲೂ ಶುರುವಾಯ್ತು ದೊಡ್ಡ ಟೆನ್ಷನ್... Cooking Oil -
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ












Click it and Unblock the Notifications