ಬಗ್ದಾದಿಯನ್ನು ಕೊಂದ ನಾಯಿ 'ಅಮೆರಿಕನ್ ಹೀರೋ': ಪದಕ ತೊಡಿಸಿದರೇ ಟ್ರಂಪ್?
Recommended Video
ವಾಷಿಂಗ್ಟನ್, ಅಕ್ಟೋಬರ್ 31: ನಾಯಿಯೊಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದಕ ತೊಡಿಸುತ್ತಿರುವ ಚಿತ್ರವೊಂದು ಟ್ವಿಟ್ಟರ್ ನಲ್ಲಿ ಗಮನ ಸೆಳೆಸಿದೆ.
ಈ ನಾಯಿಯೇ ಐಸಿಸ್ ಉಗ್ರ ಅಬು ಬಕರ್ ಅಲ್ ಬಗ್ದಾದಿಯನ್ನು ಕೊಂದಿದ್ದು! ಮೊನ್ನೆಯಷ್ಟೇ ಈ ನಾಯಿಯ ಚಿತ್ರವನ್ನು ಟ್ವೀಟ್ ಮಾಡಿದ್ದ ಟ್ರಂಪ್, ಇದೀಗ ಅದಕ್ಕೆ ತಾವು ಪದಕ ತೊಡಿಸುತ್ತಿರುವ ಚಿತ್ರವನ್ನೂ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಅದನ್ನು 'ಅಮೆರಿಕನ್ ಹೀರೋ' ಎಂದು ಮನಸಾರೆ ಕೊಂಡಾಡಿದ್ದಾರೆ.
ಆದರೆ ಈ ಚಿತ್ರವನ್ನು "ಡೇಲಿ ವೈರ್" ರೀಕ್ರಿಯೇಟ್ ಮಾಡಿದ್ದು, ಇದು ನಿಜವಾದ ಚಿತ್ರವಲ್ಲ ಎಂದು ಸಹ ಟ್ರಂಪ್ ಹೇಳಿದ್ದು, ಡೇಲಿ ವೈರ್ ಗೆ ಧನ್ಯವಾದ ಅರ್ಪಿಸಿದ್ದಾರೆ.
|
ಚಿತ್ರ ನಿಜವಲ್ಲ
"ಡೇಲಿ ವೈರ್ ಗೆ ಧನ್ಯವಾದ! ಬಹಳ ಸುಂದರವಾದ ರೀಕ್ರಿಯೇಶನ್. ಆದರೆ ನಿಜವಾದ ಕೊನ್ಯಾನ್(ನಾಯಿ) ನ ವ್ಐಟ್ ಹೌಸೆ ಮುಂದಿನವಾರ ಬರಲಿದೆ" ಎಂದು ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಗ್ರೇಟ್ ಜಾಬ್!
"ಗ್ರೇಟ್ ಜಾಬ್!" ಎಂದು ಮೆಚ್ಚುಗೆ ಸೂಚಿಸಿರುವ ಡೊನಾಲ್ಡ್ ಟ್ರಂಪ್, ಬಗ್ದಾದಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಿಗೆ ಭಯ ಹುಟ್ಟಿಸಿದ್ದು ಒಂದು ನಾಯಿ ಎಂದು ಅಕ್ಟೋಬರ್ 29 ರಂದು ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದರು.

ಸುರಂಗದಲ್ಲಿ ಅವಿತಿದ್ದ ಬಗ್ದಾದಿ
ಸಿರಿಯಾದ ವಾಯವ್ಯಕ್ಕೆ ಇರುವ ಇದ್ಲಿಬ್ ಪ್ರಾಂತ್ಯದಲ್ಲಿ ಅಮೆರಿಕದ ಸೇನಾ ಕಾರ್ಯಾಚರಣೆ ವೇಳೆ ಬಗ್ದಾದಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇದ್ಲಿದ್ ನಲ್ಲಿ ಸುರಂಗವೊಂದರಲ್ಲಿ ಅವಿತಿದ್ದ ಐಎಸ್ ಐಎಲ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಲೆವಂಟ್) ಮುಖಂಡ ಬಾಗ್ದಾದಿ, ಯನ್ನು ಸುರಂಗದಿಂದ ಹೊರತೆಗೆಯಲು ಅಮೆರಿಕ ಯತ್ನಿಸುತ್ತಿತ್ತು. ಆ ಸುರಂಗದ ಕೊನೆ ಎಲ್ಲಿಗೆ ತಲುಪುತ್ತದೆ ಎಂಬ ಬಗ್ಗೆಯೂ ಅದಕ್ಕೆ ಗೊತ್ತಿರಲಿಲ್ಲ.

ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ ನಾಯಿ!
ಈ ಸಂದರ್ಭದಲ್ಲಿ ಬಾಗ್ದಾದಿಯನ್ನು ಸುರಂಗದೊಳಗೆ ಬಹುದೂರ ಅಟ್ಟಿಸಿಕೊಂಡು ಹೋಗಿ, ಮುಂದೆ ಹೋಗಲು ದಾರಿಯೇ ಇಲ್ಲದಂತೆ ಮಾಡಿ ಅಮೆರಿಕ ಸೇನೆಯ ನಾಯಿಗಳು ಸುತ್ತಿವರಿದಿದ್ದವು. ಇನ್ನು ತಾನು ಬಚಾವಾಗುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ಅರಿತ ಬಾಗ್ದಾದಿ ತನ್ನ ದೇಹಕ್ಕೆ ಸುತ್ತಿಕೊಂಡಿದ್ದ ಆತ್ಮಾಹುತಿ ಬಾಂಬ್ ಅನ್ನು ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ.












Click it and Unblock the Notifications