ಮಹತ್ವದ 3 ಹುದ್ದೆಗೆ ಭಾರತೀಯ ಮೂಲದವರ ಶಿಫಾರಸ್ಸು ಮಾಡಿದ ಟ್ರಂಪ್

ವಾಷಿಂಗ್ಟನ್, ಜನವರಿ 17: ಅಮೆರಿಕ ಸರ್ಕಾರದ ಸಂಸ್ಥೆಗಳ ಮೂರು ಮಹತ್ವದ ಹುದ್ದೆಗೆ ಭಾರತ ಮೂಲದ ಮೂವರನ್ನು ಆಯ್ಕೆ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾಮನಿರ್ದೇಶನ ಮಾಡಿದ್ದಾರೆ.

ಭಾರತ ಮೂಲದ ರೀಟಾ ಬರನ್ವಾಲ್‌ ಅವರನ್ನು ಸಹಾಯಕ ಇಂಧನ ಕಾರ್ಯದರ್ಶಿ, ಆದಿತ್ಯ ಬಮ್‌ಜೈ ಅವರನ್ನು ಖಾಸಗಿ ಮತ್ತು ನಾಗರೀಕ ಹಕ್ಕುಗಳ ಉಸ್ತುವಾರಿ ಸಮಿತಿಯ ಸದಸ್ಯರಾಗಿ ಹಾಗೂ ಬಿಮಲ್ ಪಟೇಲ್ ಅವರನ್ನು ಖಜಾನೆ ಸಹಾಯಕ ಕಾರ್ಯದರ್ಶಿಯಾಗಿ ನೇಮಕ ಮಾಡಲು ಟ್ರಂಪ್ ಉತ್ಸುಕರಾಗಿದ್ದಾರೆ.

ಈ ಮೂವರ ಹೆಸರನ್ನು ಬುಧವಾರವೇ ಟ್ರಂಪ್ ಅವರು ಸೆನೆಟ್‌ನ ಅನುಮೋದನೆಗೆ ಕಳುಹಿಸಿದ್ದು, ಈ ಮೂವರು ಭಾರತೀಯ ಮೂಲದವರಿಗೆ ಸೆನೆಟ್ ಅನುಮೋದನೆ ಬಹುತೇಕ ಖಚಿತವಾಗಿದೆ.

Donald Trump nominates three Indo Americas for three majour posts

ಪೆಪ್ಸಿಕೋ ಸಂಸ್ಥೆಯ ಸಿಇಓ ಆಗಿ ಇತ್ತೀಚೆಗಷ್ಟೆ ನಿರ್ಗಮಿಸಿದ ಭಾರತೀಯಸ ಸಂಜಾತೆ ಇಂದಿರಾ ನೂಯಿ ಅವರನ್ನು ವಿಶ್ವಬ್ಯಾಂಕ್‌ನ ನಿರ್ದೇಶಕಿಯನ್ನಾಗಿಸಲು ಸಹ ಟ್ರಂಪ್ ಅವರು ಉತ್ಸುಕರಾಗಿದ್ದಾರೆ. ಟ್ರಂಪ್ ಅವರ ಆಡಳಿತದಲ್ಲಿ 35 ಕ್ಕೂ ಹೆಚ್ಚು ಭಾರತೀಯ ಹಲವು ಪ್ರಮುಖ ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+